ಪಾಲ್ಘರ್:ಗಮನ ಸೆಳೆದ ನೃತ್ಯೋತ್ಸವ”ಲಾಸ್ಯ ಅಭಿನಯ -2017
Team Udayavani, Sep 6, 2017, 11:59 AM IST
ನೃತ್ಯ ಕಲಾವಿದೆ ದೀಪಾ ಶೆಟ್ಟಿ ಅವರು “ಡಾನ್ಸ್ ಸ್ಟುಡಿಯೋ ಪಾಲ^ರ್’ ಎನ್ನುವ ನೃತ್ಯಾಭ್ಯಾಸ ಸಂಸ್ಥೆಯನ್ನು 2016ರಲ್ಲಿ ಆರಂಭಿಸಿದ್ದು, ಇದರ ಪ್ರಥಮ ವಾರ್ಷಿಕೋತ್ಸವ “ಲಾಸ್ಯ ಅಭಿನಯ-2017′ ಸಂಭ್ರಮವು ಇತ್ತೀಚೆಗೆ ಪಾಲ್ಘರ್ನ ಲಯನ್ಸ್ ಕ್ಲಬ್ಹಾಲ್ನಲ್ಲಿ ಅದ್ದೂರಿಯಾಗಿ ನಡೆಯಿತು.
ನಾಲ್ಕರಿಂದ 61 ವರ್ಷದವರೆಗಿನ ವಯೋಮಾನದ ಕಲಾವಿದರು ಈ ನೃತ್ಯೋತ್ಸವದಲ್ಲಿ ಭಾಗವಹಿಸಿ ವಿವಿಧ ನೃತ್ಯ ಪ್ರಕಾರಗಳಾದ ಭಾರತನಾಟ್ಯಂ, ಕಥಕ್, ಹಿಪ್ಹಾಪ್, ಬಾಲಿವುಡ್ ನೃತ್ಯಗಳನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಗಮನ ಸೆಳೆದರು. ಕಾರ್ಯಕ್ರಮವನ್ನು ಆಯೋಜಿಸಲು ನೆರವಾದ ಪ್ರಾಯೋಜಕರಾದ ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ರಘುರಾಮ ರೈ ಬೊಯಿಸರ್, ದರ್ಶನ್ ಶೆಟ್ಟಿ ಖಾರ್ಘರ್, ಅಶೋಕ್ ಕೆ. ಶೆಟ್ಟಿ, ಸುರೇಂದ್ರ ಕೆ. ಶೆಟ್ಟಿ, ವಿಜಯ್ ಶೆಟ್ಟಿ, ಪ್ರವೀಣ್ ಶೆಟ್ಟಿ, ರವೀಂದ್ರ ಶೆಟ್ಟಿ, ತಾರಾನಾಥ ಶೆಟ್ಟಿ, ಮಹಾಬಲ ಶೆಟ್ಟಿ, ಡಾ| ಮನೋಹರ್ ಕಾಮತ್ ಮತ್ತು ರಮೇಶ್ ಶೆಟ್ಟಿ ಪಾಲ^ರ್ ಈ ಸಂದರ್ಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ದೀಪಾ ಶೆಟ್ಟಿ ಅವರು ಸಮ್ಮಾನಿಸಿದರು. ಪ್ರಾರಂಭದಲ್ಲಿ ಹತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 95 ಕಲಾವಿದರು ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಆರತಿ ನಿಖೀಲ್ ಶೆಟ್ಟಿ, ನಿಖೀಲ… ಜಾಧಲ್, ದೀಕ್ಷಿತ್ ಶೆಟ್ಟಿ, ತೇಜಲ… ಜೈನ್, ನೂತನ್ ವರ್ತಕ್, ಅಂಜಲಿ ಲಿಂಬೋಲ ಮತ್ತು ಇಷಿಕಾ ಶೆಟ್ಟಿ ಅವರು ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ವೈವಿಧ್ಯತೆಯಿಂದ ಕೂಡಿದ ಈ ಕಾರ್ಯಕ್ರಮವು ಕಲಾಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.