ರಸಗೊಬ್ಬರಕ್ಕಿಂತ ಶಿಕ್ಷಣಕ್ಕೆ ಕಡಿಮೆ ಅನುದಾನ: ಸಂಸದ ವಿಷಾದ
Team Udayavani, Sep 6, 2017, 12:36 PM IST
ನಂಜನಗೂಡು: ಅಕ್ಷರ ಜ್ಞಾನದಿಂದ ವಂಚಿತರಾದವರ ಸಂಖ್ಯೆಯೇ ಹೆಚ್ಚಿರುವ ನಮ್ಮಲ್ಲಿ ನಮ್ಮ ಸರ್ಕಾರಗಳು ರಸಗೊಬ್ಬರಕ್ಕೆ ನೀಡಿದಷ್ಟು ಪ್ರಾತಿನಿದ್ಯವನ್ನೂ ಶಿಕ್ಷಣಕ್ಕೆ ನೀಡಿಲ್ಲ ಎಂದು ಸಂಸದ ಆರ್ ಧ್ರುವನಾರಾಯಣ ವಿಷಾಧಿಸಿದರು.
ನಂಜನಗೂಡು ತಾಲೂಕು ಶಿಕ್ಷಕರ ಸಂಘ ಪಟ್ಟಣದ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಸಾಲಿನ ಮುಂಗಡ ಪತ್ರದಲ್ಲಿಯೂ ಶಿಕ್ಷಣಕ್ಕಾಗಿ ಶೇ 3 ರಷ್ಟು ಅನುದಾನ ನೀಡಿದೆ.
ಈ ಅನುದಾನ ಕನಿಷ್ಠ ಶೇ. 6ರಷ್ಟಾದರೂ ಹೆಚ್ಚಳವಾಗಬೇಕಿದೆ. ಇದರಿಂದಾಗಿ ರಾಷ್ಟ್ರದ ಶಿಕ್ಷಣ ಕ್ಷೇತ್ರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುವಂತಾಗಿದೆ ಎಂದ ಸಂಸದರು ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರವೇ ಹಿರಿದಾಗಿದ್ದು, ರಾಜ್ಯದ 224 ಶಿಕ್ಷಣ ವಲಯದಲ್ಲಿ ನಂಜನಗೂಡು 80ನೇ ಸ್ಥಾನದಲ್ಲಿದೆ. ಈ ಸ್ಥಾನ ಸುಧಾರಿಸಲು ಶಿಕ್ಷಕರು ಶ್ರಮಿಸಬೇಕು ಎಂದರು.
ಸಮಾರಂಭದ ಪ್ರಮುಖ ಬಾಷಣಕಾರರಾಗಿ ಆಗಮಿಸಿದ್ದ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ನಿವ್ರತ್ತ ಪ್ರಾಂಶುಪಾಲ ಹೆಚ್ ಎಸ್ ಉಮೇಶ ಮಾತನಾಡಿ, “ಶಿಕ್ಷಕರಾದವರೆಲ್ಲರೂ ಗುರುವಾಗಲೂ ಸಾಧ್ಯವಿಲ್ಲ ಗುರುವಿಗೆ ಸಮಾಜದ ಅತ್ಯುನ್ನತ ಸ್ಥಾನ ನೀಡಿದ ಸಂಸ್ಕೃತಿ ಭಾರತದ್ದು. ಈ ಸಂಸ್ಕೃತಿಯನ್ನು ಕಡೆಗಳಿಸಿದರೆ ಭಾರತಕ್ಕೇ ಭವೀಷ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ವರುಣ ವಿಧಾನ ಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿಯ ಅಧ್ಯಕ್ಷ ಡಾ ಯತೀಂದ್ರ ಮಾತನಾಡಿ, ಭಾರತೀಯ ತತ್ವಸಿದ್ದಾಂತಕ್ಕೆ ವಿಶ್ವದ ಮೆರಗೂ ನೀಡಿದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರು ನಿಮಗೆಲ್ಲ ನಿತ್ಯ ಆದರಣಿಯರಾಗಲಿ. ನಂಜನಗೂಡಿಗಿಂದು ಸುಸಜ್ಜಿತವಾದ ಗುರು ಭವನದ ಅವಶ್ಯಕತೆ ಇದ್ದು ತಾವು ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವುದಾಗಿ ಘೋಷಿಸಿದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಶಾಸಕ ಕಳಲೆ ಕೇಶವಮೂರ್ತಿ ಅದ್ಯಕ್ಷತೆ ವಹಿಸಿಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣದ ಪ್ರಗತಿ ಅತೀ ಅವಶ್ಯಕವಾಗಿದೆ. ಆಂಗ್ಲ ಭಾಷೆಯ ವ್ಯಾಮೋಹವೇ ಗ್ರಾಮೀಣ ಜನತೆಯ ವಲಸೆಗೆ ಕಾರಣವಾಗಿದೆ ಸರ್ಕಾರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೇ ಒತ್ತು ನೀಡಬೇಕಿದೆ ಎಂದರು.
ಸಮಾರಂಭದಲ್ಲಿ ಶಾಸಕ ಕಳಲೆ ಹಾಗೂ ಸಂಸದರೊಡಗೂಡಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂದಕುಮಾರ ಜಿಪಂ ಸ್ಥಾಯಿ ಸಮಿತಿ ಅದ್ಯಕ್ಷ ದಯಾನಂದಮೂರ್ತಿ ,ತಾಪಂ ಉಪಾದ್ಯಕ್ಷ ಗೋವಿಂದರಾಜು, ಸ್ಥಾಯಿ ಸಮಿತಿಯ ಅದ್ಯಕ್ಷ ಶಿವಣ್ಣ, ನಗರಸಭಾ ಅದ್ಯಕ್ಷೆ ಪುಷ್ಪಲತಾ ಕಮಲೇಶ, ಎಪಿಎಂಸಿ ಅದ್ಯಕ್ಷ ಕಾಗಲವಾಡಿ ಮಾದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ, ತಹಶೀಲ್ದಾರ್ ದಯಾನಂದ,
-ಅಕ್ಷರ ದಾಸೋಹದ ಮಹೇಶ ದೈ.ಶಿ/ ಪರಿವೀಕ್ಷಕ ಮಧುರದಾಸ್ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅದ್ಯಕ್ಷ ಮುದ್ದು ಮಾದೇಗೌಡ ಜಿಲ್ಲಾ ಉಪಾದ್ಯಕ್ಷ ಹೆಚ್.ಎಸ್ ಮಹೇಶ್ ತಾಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅದ್ಯಕ್ಷ ರವೀಶ ಮೂರ್ತಿ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ವಪಲ್ಲಿ ರಾಧಾಕೃಷ್ಣರ ಭಾವಚಿತ್ರದ ಮೆರವಣಿಗೆ ನಡೆಯಿತು.
ಇತ್ತ ಶಿಸ್ತಿನ ಪಾಠ – ಅತ್ತ ಊಟಕ್ಕಾಗಿ ನೂಕಾಟ
ಶಿಕ್ಷಕ ದಿನಾಚರಣೆಯ ಸಮಾರಂಭದ ಮುಖ್ಯ ಭಾಷಣಕಾರರಾದ ಉಮೇಶ ಶಿಕ್ಷಕರಿಗೆ ಸಂಸ್ಕೃತಿ ಶಿಸ್ತಿನ ಪಾಠ ಹೇಳುತ್ತಿದ್ದಾಗಲೇ (ಸಮಾರಂಭದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನಕ್ಕಿಂತ ಮೊದಲೇ) ಸಭಿಕರು, ಹಾಲಿ ಶಿಕ್ಷಕರು ಸಭೆಯಿಂದ ಎದ್ದು ಊಟದ ಹಾಲಿನತ್ತ ತೆರಳುತ್ತಿದ್ದರು. ಅಲ್ಲಿ ಭೋಜನಕ್ಕೆ ಕೆಲಸಮಯ ನೂಕು ನೂಗಲು ಉಂಟಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.