ಅಂಧೇರಿ:ಮೇರಿ ಕನ್ಯಾಕುಮಾರಿ ಮಾತೆ ಜನ್ಮೋತ್ಸವಕ್ಕೆ ಭರದ ಸಿದ್ಧತೆ
Team Udayavani, Sep 6, 2017, 1:38 PM IST
ಮುಂಬಯಿ: ವಿಶ್ವದಾದ್ಯಂತ ಸೆ. 8ರಂದು ಆಚರಿಸಲ್ಪಡುವ ಯೇಸು ಕ್ರಿಸ್ತರ ಜನನಿದಾತೆ ಮೇರಿ ಕನ್ಯಾಕುಮಾರಿ ಜನ್ಮೋತ್ಸವ (ಮೊಂತಿ ಹಬ್ಬ-ಕುರಲ್ ಪರ್ಬ) ಇದರ ಪೂರ್ವಸಿದ್ಧತೆ ಎಲ್ಲೆಡೆ ಭಕ್ತಿಪೂರ್ವಕವಾಗಿ ನಡೆಯುತ್ತಿದ್ದು, ಆ ಪ್ರಯುಕ್ತ “ಮೊಂತಿ ಹಬ್ಬ’ದ ಮುನ್ನ ಸಾಂಪ್ರದಾಯಿಕವಾಗಿ ಸತತ ಒಂಭತ್ತು ದಿನಗಳ ಆರಾಧನಾ ಪ್ರಕ್ರಿಯೆ ನಡೆಸುವ ಪದ್ಧತಿ ಇಂದಿಗೂ ಜಾರಿಯಲ್ಲಿದ್ದು, ಇದರಂತೆ ಅಂಧೇರಿ ಪಶ್ಚಿಮದ ಇರ್ಲಾದ ವೆಲಂಕಣಿ ಮಾತೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರಗಿದವು.
“ಮೊಂತಿ ಹಬ್ಬ’ದ ಪೂರ್ವಸಿದ್ಧತೆಯಾಗಿ ಇರ್ಲಾದಲ್ಲಿ ವಾರ್ಷಿಕವಾಗಿ ನಡೆಸಲ್ಪಡುವ ವಿಶೇಷವಾದ ಆರಾಧನೆ, ದಿವ್ಯ ಸಂಭ್ರಮಿಕ ಪೂಜೆಯನ್ನು ಪುಣ್ಯ ಕ್ಷೇತ್ರದ ಪ್ರಧಾನ ಗುರು ರೆ| ಫಾ| ರವಿ ಮರ್ನೆಣಿ ನೆರವೇರಿಸಿದರು. ಪೂಜೆಯ ಬಳಿಕ ಇಗರ್ಜಿಯ ಆವರಣದಲ್ಲಿ ಅತ್ಯಾಕರ್ಷಕವಾಗಿ ಶೃಂಗರಿಸಲ್ಪಟ್ಟ “ಕನ್ಯಾಕುಮಾರಿ ಮಾತೆಯ’ ಮೂರ್ತಿಯನ್ನು ನಮಿಸಿ ಆಶೀರ್ವಚಿಸಿ ನೆರೆದ ಭಕ್ತರಿಗೆ ಹರಸಿದರು. ನೃತ್ಯ ಸಂಯೋಜಕ ಹಾಗೂ ತರಬೇತುದಾರ ಟಾರೆನ್ಸ್ ಲೂಯಿಸ್ ಇಂದಿಲ್ಲಿ ವಿಶೇಷವಾಗಿ ಉಪಸ್ಥಿತರಿದ್ದು ಮಾತೆಯ ಪಾದಗಳಿಗೆ ಪುಷ್ಪವೃಷ್ಟಿಗೈದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ರೆ| ಫಾ| ವಿಜಯ್ ಪ್ರತಾಪ್, ಎಡ್ಕಾರ್ಲೊàಸ್ ಎಂ. ಕಾಸ್ತೆಲಿನೋ, ಹತ್ತಾರು ಧರ್ಮಗುರು, ಭಗಿನಿಯರು ಉಪಸ್ಥಿತರಿದ್ದರು.
ಬಳಿಕ ವರ್ಷಂಪ್ರತಿಯಂತೆ ಸ್ಥಾನೀಯವಾಗಿ ನಡೆಸಲ್ಪಟ್ಟ ಜನಶ್ರೇಣಿಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಅಲಂಕೃತ ಮಾತೆಯ ಪುತ್ಥಳಿಗೆ ಪುಟಾಣಿಗಳು, ಭಕ್ತರು ಪುಷ್ಪಾರ್ಚನೆಗೈದು ಪ್ರಾರ್ಥನೆ ನೆರವೇರಿಸಿದರು. ಈ ಕ್ಷೇತ್ರಕ್ಕೆ ಜಾತಿಮತ ಧರ್ಮದ ಅಂತರವಿಲ್ಲದೆ ದೇಶ-ವಿದೇಶಗಳಿಂದ ಮಾತೆಯ ಲಕ್ಷಾಂತರ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಮುಂಜಾನೆ ಐದು ಗಂಟೆಯಿಂದ ರಾತ್ರಿ ಹತ್ತರವರೆಗೆ ನಿರಂತರ ನೊವೆನಾಗಳು ನಡೆಯುತ್ತಿದ್ದು, ಭಕ್ತರ ವಿಶ್ವಾಸದ ತಾಣವಾಗಿ ಪರಿಣಮಿಸಿ ಸರ್ವಧರ್ಮ ಸಮಭಾವದ ಪ್ರತೀಕ ಎಂದೇ ಕರೆಯಲ್ಪಡುತ್ತಿದೆ. ಇಲ್ಲಿ ಮಾತೆಯ ದರ್ಶನಕ್ಕೆ ನಿತ್ಯವೂ ಸರತಿ ಸಾಲಿನಲ್ಲಿ ಸಾಗುತ್ತಿರುವ ಭಕ್ತಾಧಿಗಳ ಸಂಖ್ಯೆ ಲಕ್ಷಕ್ಕೂ ಮಿಕ್ಕುತ್ತಿದೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.