ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೂರು ಆಯಾಮಗಳಲ್ಲಿ ತನಿಖೆ
Team Udayavani, Sep 7, 2017, 6:45 AM IST
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತಂಡ ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ಹತ್ಯೆಯ ತನಿಖೆಗಾಗಿ ರಚಿಸಲಾಗಿರುವ ಡಿಐಜಿ ಸತೀಶ್ ಕುಮಾರ್ ನೇತೃತ್ವದ ಸಮಿತಿ ಗೌರಿ ಲಂಕೇಶ್ ಅವರು ಮೊಬೈಲ್ ದೂರವಾಣಿಯ ಮೂರು ತಿಂಗಳ ಕಾಲ್ ಡೀಟೆಲ್ಸ್, ವಾಟ್ಸ್‌ಆ್ಯಪ್ ಹಾಗೂ ಫೇಸ್ ಬುಕ್,ಟ್ವಿಟ್ಟರ್ ಸಂದೇಶಗಳ ಮಾಹಿತಿ ಸಂಗ್ರಹಿಸಿ, ಅದರ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.
ಬಲಪಂಥೀಯರು, ನಕ್ಸಲ್ ಹಾಗೂ ವೈಯಕ್ತಿಕ ವೃತ್ತಿ ಜೀವನ ಆಯಾಮಗಳಲ್ಲಿ ತನಿಖೆ ಆರಂಭಿಸಲಾ ಗಿದೆ. ಆದರೆ, ಗೌರಿ ಲಂಕೇಶ್ ಅವರು ಹತ್ಯೆಗೂ ಕೆಲ ಗಂಟೆಗಳ ಹಿಂದೆ ಸರಣಿ ಟ್ವೀಟ್ ಮಾಡಿದ್ದು, ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ಮಂಗಳವಾರ ಬೆಳಗಿನ ಜಾವ 3.04 ಹಾಗೂ 3.07 ನಿಮಿಷಕ್ಕೆ ಗೌರಿ ಲಂಕೇಶ್ ಮಾಡಿರುವ ಟ್ವೀಟ್ ಹೀಗಿದೆ.
– “”ಯಾಕೆ ನಾವು ನಮ್ಮೊಳಗೆ ಕಿತ್ತಾಡಿಕೊಳ್ಳುವುದು? ನಮೆಲ್ಲರಿಗೂ ಗೊತ್ತಿದೆ ನಮ್ಮ ದೊಡ್ಡ ಶತ್ರು ಯಾರೆಂದು. ನಾವೆಲ್ಲರೂ ಅದರ ಮೇಲೆ ಗಮನಹರಿಸಬೇಕಿದೆ”
– “”ನಮ್ಮೊಳಗೆ ಕೆಲವರು ಸುಳ್ಳು ಮಾಹಿತಿ (ಪೋಸ್ಟ್) ಹರಡುವ ತಪ್ಪುಗಳನ್ನು ಮಾಡುತ್ತಿದ್ದೇವೆ. ನಮಗೆ ನಾವೇ ಎಚ್ಚರಿಕೆ ನೀಡಿಕೊಳ್ಳಬೇಕಿದೆ. ಜತೆಗೆ ಪ್ರತಿಯೊಬ್ಬರನ್ನೂ ಬೀದಿಗೆಳೆಯುವುದು ಬೇಡ. ಶಾಂತಿಯಿಂದಿರಿ… ಕಾಮ್ರೆಡ್ಸ್”
ಈ ಟ್ವೀಟ್ ಪ್ರಕಾರ ಗೌರಿ ಅವರ ಕೆಲ ನಡೆಗಳನ್ನು ತೀವ್ರವಾಗಿ ಖಂಡಿಸಿದ ನಕ್ಸಲ್ ಗುಂಪೊಂದು ಈ ರೀತಿಯ ಕೃತ್ಯವೆಸಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತನಿಖಾ ತಂಡ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕೆಲ ನಕ್ಸಲ್ ಪೀಡಿತ ಪ್ರದೇಶಗಳಿಗೆ ತೆರಳಿದೆ ಎಂದು ಹೇಳಲಾಗಿದೆ.
ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಗೌರಿ ಲಂಕೇಶ್ ಮನಪರಿವರ್ತನೆ ಮಾಡಿ, ಮುಖ್ಯವಾಹಿನಿಗೆ ಕರೆ ತರುತ್ತಿದ್ದರು. ಈ ಪ್ರಕ್ರಿಯೆಯನ್ನು ಮತ್ತೂಂದು ನಕ್ಸಲ್ ಗುಂಪು ವಿರೋಧಿಸಿತ್ತು. ಈ ಗುಂಪೇ ಕೃತ್ಯವೆಸಗಿರಬಹುದೇ ಎಂಬ ಅನುಮಾನದ ಮೇಲೆ ಒಂದು ತಂಡ ಎಎನ್‌ಎಸ್(ನಕ್ಸಲ್ ವಿರೋಧಿ ಪಡೆ) ಅಧಿಕಾರಿಗಳ ಜತೆ ಕಾರ್ಯಚರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಸಂಶೋಧಕ ಪ್ರೋ ಎಂ.ಎಂ. ಕಲಬುರ್ಗಿ, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಗೈದ ಮಾದರಿಯಲ್ಲಿ ಗೌರಿ ಅವರನ್ನು ಹತ್ಯೆಗೈದಿದ್ದಾರೆ ಎಂಬ ಆರೋ ಪಗಳ ಹಿನ್ನೆಲೆಯಲ್ಲಿ ಮತ್ತೂಂದು ತಂಡ ಬಲಪಂಥಿಯ ಸಂಘಟನೆಗಳ ಕಾರ್ಯಕರ್ತರ ಚಲನವಲನಗಳ ಮೇಲೆ ನಿಗಾವಹಿಸಿದೆ. ಜತೆಗೆ ಈಗಾಗಲೇ ಕಲಬುರಗಿ ಪ್ರಕರಣ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜತೆಯೂ ಸಂಪ ರ್ಕದಲ್ಲಿದೆ. ಇದರೊಂದಿಗೆ ಗೌರಿ ಲಂಕೇಶ್ ಅವರು ತಮ್ಮ ತೀಕ್ಷ್ಮ ಬರವಣೆಗೆಯಿಂದ ಕೆಲವರ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು. ಇದರ ಹಿನ್ನೆಲೆಯಲ್ಲಿ ಘ ಟನೆ ನಡೆದಿರ ಬಹುದಾ? ಎಂಬ ಅನುಮಾನವೂ ಇದ್ದು, ಈ ಸಂಬಂಧವೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಂಗೇರಿ ಗೇಟ್ ಎಸಿಪಿ ತಂಡವು ಸ್ಥಳ ಪರಿಶೀಲನೆ ಕಾರ್ಯ, ಸ್ಥಳೀಯರ ಹೇಳಿಕೆ ಮತ್ತು ಘಟನಾ ಸ್ಥಳದ ಮಹಜರು, ಸಿಸಿಟಿವಿ ದೃಶ್ಯಾವಳಿ ಪಡೆ ದಿದ್ದು,ಈಗ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹಂತಕ ಮುಖ ಅಸ್ಪಷ್ಟವಾಗಿದೆ. ಹೀಗಾಗಿ ವಿಧಿವಿಜ್ಞಾನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಇನ್ನು ಈ ಭಾಗದಲ್ಲಿ ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ.
ಚಿಕ್ಕಪೇಟೆ ಎಸಿಪಿ ತಂಡವು ಸಿಸಿಬಿ ತಂಡದಿಂದ ತಾಂತ್ರಿಕ ನೆರವು ಪಡೆದುಕೊಳ್ಳುವುದು. ಗೌರಿ ಲಂಕೇಶ್ ಅವರ ಇಡೀ ದಿನದ ಚಟುವಟಿಕೆಗಳು, ಅದರಂತೆ ಘಟನೆಗೂ ಕೆಲ ಸಮಯ ಮೊದಲು ಎಲ್ಲಿದ್ದರು ಯಾರೊಂದಿಗೆ ಮಾತನಾಡಿದ್ದಾರೆ. ಅವರ ಕಾಲ್ ಡೀಟೆಲ್ಸ್ ಸಂಗ್ರಹ ಜತೆಗೆ ಮೂರು ಮೊಬೈಲ… ಟವರ್ ಡಂಪ್ ಪಡೆದುಕೊಳ್ಳುವುದು, ಗೌರಿ ಅವರ ಪತ್ರಿಕಾ ಕಚೇರಿ ಇರುವ ಗಾಂಧಿಬಜಾರ್, ಆರ್‌ಆರ್ ನಿವಾ ಸಕ್ಕೆ ಭೇಟಿ ನೀಡಿ ದ್ದವರು, ಮಾತನಾಡಿದವರ ಮಾಹಿತಿ ಪಡೆಯುತ್ತಿದೆ.
ಈ ಮಧ್ಯೆ, ಗೌರಿ ಲಂಕೇಶ್ ಅವರನ್ನು ಕಳೆದ 15-20 ದಿನಗಳಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸುತ್ತಿದ್ದರು ಎಂಬ ಕುರಿತು ಮಾಹಿತಿ ಲಭ್ಯವಾಗಿದ್ದು, ಆ ವ್ಯಕ್ತಿಗಳು ಯಾರೆಂಬ ಮಾಹಿತಿ ಪಡೆಯುತ್ತಿದ್ದಾರೆ.
“ಹೋಂಡಾ ಡಿಯೋ’ದಲ್ಲಿ ಹಿಂಬಾಲಿಸಿದ್ದರು:
ಸಿಸಿಬಿ ಡಿಸಿಪಿ ತಂಡ ತಾಂತ್ರಿಕ, ಮರಣೋತ್ತರ ಪರೀಕ್ಷೆಯ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತದೆ. ಕೃತ್ಯ ನಡೆದ ಪ್ರದೇಶ ಸಿಸಿಟಿವಿಯ ವಶಕ್ಕೆ ಪಡೆದು ತನಿಖೆ ಆರಂಭ, ಗಾಂಧಿ ಬಜಾರ್‌ನಿಂದ ಗೌರಿ ಲಂಕೇಶ್ ಹೊರಟ ಮಾರ್ಗದ ಸಿಸಿಟಿವಿಗಳ ಡಿವಿಆರ್ ಸಂಗ್ರಹಿಸಿದ್ದು, ಸುಮಾರು 33ಕ್ಕೂ ಅಧಿಕ ಡಿವಿಆರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದೃಶ್ಯಾವಳಿಗಳ ಪ್ರಕಾರ ಗೌರಿ ಲಂಕೇಶ್ ಅವರ ಕಾರನ್ನು ಗಾಂಧಿಬಜಾರ್ ಕಚೇರಿಯಿಂದ ಹಿಂಬಾಲಿಸಿರುವ ವ್ಯಕ್ತಿಗಳು ದ್ವಿಚಕ್ರ ವಾಹನ “ಹೋಂಡಾ ಡಿಯೋ’ದಲ್ಲಿ ಬಂದಿದ್ದರು. ಅಲ್ಲದೇ ಮನೆ ಮುಂದೆ ಕೃತ್ಯವೆಸಗಿ ಪರಾರಿಯಾಗುತ್ತಿರುವಾಗ ಸಿಕ್ಕ ಸಿಸಿಟಿವಿ ದೃಶ್ಯಾವಳಿಗೂ ಇದು ಸಾಮ್ಯತೆ ಇದೆ. ಆರೋಪಿಗಳು ಧರಿಸಿದ್ದ ಹೆಲ್ಮೆಟ್‌ಗೂ ಕಾರು ಹಿಂಬಾಲಿಸಿ ಬರುತ್ತಿದ್ದ ವ್ಯಕ್ತಿಯ ಹೆಲ್ಮೆಟ್ ಒಂದೇ ರೀತಿಯದಾಗಿದೆ. ಹೀಗಾಗಿ ಈ ಬೈಕ್‌ನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.