ದಸರೆಗೆ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಮೆರಗು 


Team Udayavani, Sep 7, 2017, 12:14 PM IST

mys1.jpg

ಮೈಸೂರು: ನಾಡಹಬ್ಬ ಮೈಸೂರು ದಸರೆಗೆ ಬರುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯಿಂದ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಸೇರಿದಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಬಾರಿ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ ಆಯೋಜಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೂ ಉತ್ಸುಕವಾಗಿರುವುದರಿಂದ ನವರಾತ್ರಿಯ ಸಂದರ್ಭದಲ್ಲಿ ಒಂದು ದಿನ ನಗರದ ಡಿ.ದೇವರಾಜ ಅರಸು ರಸ್ತೆಯನ್ನು ವಾಹನ ನಿಲುಗಡೆ ಮುಕ್ತಗೊಳಿಸಿ ಮೇಳ ಆಯೋಜಿಸಲು ನಿರ್ಣಯಿಸಲಾಯಿತು.

ಅಲ್ಲದೆ, ಈ ಬಾರಿ ದಸರೆಯ ಮಧ್ಯೆಯೇ ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯೂ ಬಂದಿರುವುದರಿಂದ ಸುಸ್ಥಿರ ಪ್ರವಾಸೋದ್ಯಮ ಶೀರ್ಷಿಕೆಯಡಿ ಮೈಸೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು. ಈ ಬಾರಿ ದಸರಾ ಗೋಲ್ಡ್‌ಕಾರ್ಡ್‌ ದರವನ್ನು 3999 ರೂ. ನಿಗದಿಪಡಿಸಿದ್ದು, ಕೆಎಸ್‌ಟಿಡಿಸಿ ಆಯೋಜಿಸುವ ಸುವರ್ಣರಥ(ಗೋಲ್ಡನ್‌ ಚಾರಿಯೇಟ್‌)ದಲ್ಲಿ ಬರುವ ಪ್ರವಾಸಿಗರಿಗಾಗಿ 75 ಗೋಲ್ಡ್‌ಕಾರ್ಡ್‌ ನೀಡುವಂತೆ ಕೆಎಸ್‌ಟಿಡಿಸಿ ವತಿಯಿಂದ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಯಿತು.

ಗಾಲಿಗಳ ಮೇಲೆ ಅರಮನೆ (ಪ್ಯಾಲೇಸ್‌ ಆನ್‌ ವೀಲ್ಸ್‌)ಗೆ ಈ ಬಾರಿ ಇನ್ನೂ 2 ವಸ್ತು ಸಂಗ್ರಹಾಲಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಬ್ಬರಿಗೆ 999ರೂ. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ವಿವರಿಸಿದರು. ಮೈಸೂರು ನಗರ 22, ಗ್ರಾಮಾಂತರ 30 ಸೇರಿದಂತೆ ಮಂಡ್ಯ ಮತ್ತು ರಾಮನಗರ ಹೆದ್ದಾರಿಗಳಲ್ಲಿ 10 ಸೇರಿದಂತೆ ಒಟ್ಟು 62 ಹೋರ್ಡಿಂಗ್ಸ್‌ಗಳನ್ನು ಕನ್ನಡದಲ್ಲಿ ಹಾಕಿಸಲಾಗಿದೆ ಎಂದರು. 

ಕೇಂದ್ರ ಸರ್ಕಾರದ ಉಡಾನ್‌ ಯೋಜನೆಯಡಿ ಸೆ.15ರಿಂದ ಮೈಸೂರು-ಚೆನ್ನೈ ಬದಲಿಗೆ, ಮೈಸೂರು ಕೇಂದ್ರವಾಗಿರಿಸಿಕೊಂಡು ಮುಂಬೈ, ಹೈದರಾಬಾದ್‌, ದಿಲ್ಲಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಏಕರೂಪದ ಟಿಕೆಟ್‌: ಒಂದುಕಡೆ ಟಿಕೆಟ್‌ ಖರೀದಿಸಿ ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ, ಕೆ.ಆರ್‌.ಎಸ್‌ ಹಾಗೂ ರಂಗನತಿಟ್ಟು ಪಕ್ಷಿಧಾಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹೆಲಿರೈಡ್ಸ್‌: ಸೆ.15 ರಿಂದ ಅ.2ರವರೆಗೆ ಲಲಿತ್‌ ಮಹಲ್‌ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ರೈಡ್‌ ಆಯೋಜಿಸಲಿದ್ದು, ಪವನ್‌ಹನ್ಸ್‌ ಮತ್ತು ಚೆಪ್ಸ್‌ಆನ್‌ ಏವಿಯೇಷನ್‌ ಕಂಪನಿಗಳು ಮುಂದೆ ಬಂದಿವೆ. ಹೆಲಿರೈಡ್‌ ಮಾಡುವವರಿಗೆ 2300 ರೂ. ದರ ನಿಗದಿಪಡಿಸಲಾಗಿದೆ. ಇದೇ ವೇಳೆ ಮೈಸೂರಿನಲ್ಲಿ ಶಾಶ್ವತವಾಗಿ ಪ್ಯಾರಾ ಗೈಡ್ಲಿಂಗ್‌, ಸ್ಕೈಡೈವಿಂಗ್‌, ಬಿಸಿಗಾಳಿ ಬಲೂನ್‌ ಹಾರಾಟ ಮೊದಲಾದವನ್ನು ಆಯೋಜಿಸುವ ಬಗ್ಗೆಯೂ ಚರ್ಚೆ ನಡೆಯಿತು. ಕೆಎಸ್‌ಟಿಡಿಸಿ ಹಾಗೂ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಶರ್ಮ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಎನ್‌.ಮಂಜುಳ, ಉಪ ನಿರ್ದೇಶಕ ಎಚ್‌.ಪಿ.ಜನಾರ್ದನ್‌ ಸಭೆಯಲ್ಲಿ ಇದ್ದರು.

ಟಾಪ್ ನ್ಯೂಸ್

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

prahlad-joshi

Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ

1-a-kharge

Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

Darshan (3)

Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

1-hampi-1

Deepawali; ಸರಣಿ‌ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.