ನಾರಾಯಣ ಗುರೂಜಿ ತತ್ವಾದರ್ಶ ಪಾಲಿಸಿ
Team Udayavani, Sep 7, 2017, 1:09 PM IST
ವಿಜಯಪುರ: ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ತ್ರೀಯರ, ಹಿಂದುಳಿದ ವರ್ಗದವರ ಶೋಷಿತ ಸಮುದಾಯದವರ ಧ್ವನಿಯಾಗಿ, ಅಸಮಾನತೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು
ಎಂದು ಅಪರ ಜಿಲ್ಲಾಧಿಕಾರಿ ಡಾ| ಎಚ್.ಬಿ. ಬೂದೆಪ್ಪ ಹೇಳಿದರು.
ಬುಧವಾರ ನಗರದ ಕಂದಗಲ್ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು ಮಾಡಬಾರದೆಂಬ
ಸಂದೇಶ ಸಾರಿದ ನಾರಾಯಣ ಗುರುಗಳ ಜೀವನ ಸಂದೇಶ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಅರವಿಂದ ಕೊಪ್ಪ ಉಪನ್ಯಾಸ ನೀಡಿ, ದೌರ್ಜನ್ಯ, ಹಿಂಸೆ, ಶೋಷಣೆಯಿಂದ ಬಳಲುತ್ತಿರುವ ವರ್ಗವನ್ನು ಅದರಿಂದ ಹೊರತಂದು, ಜಾತಿಯಿಂದ ಹೊರತಾದ ಸಮಾಜ ನಿರ್ಮಾಣದಲ್ಲಿ, ಸಮಾಜವಾದಿ ತತ್ವಗಳೊಂದಿಗೆ ಹಿಂದುತ್ವ ಸುಧಾರಣೆಗೆ ವಿವೇಕಾನಂದರ ಮಾತಿನಂತೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಬಣ್ಣಿಸಿದರು.
ನಾರಾಯಣ ಗುರುಗಳ ಬದುಕೇ ಒಂದು ಸನಾತನ ಧರ್ಮದಂತಿತ್ತು ಎಂದು ಥಿಯೋಸಾಫಿಕಲ್ ಸೊಸೈಟಿಯ ಆ್ಯನಿಬೆಸೆಂಟ್ ಹೊಗಳಿದ್ದಾರೆ. ಇದು ನಾರಾಯಣ ಗುರುಗಳ ಆದರ್ಶ ಜೀವನಕ್ಕೆ ಸಾಕ್ಷಿ. ಸಮಾಜವನ್ನು ಸುಧಾರಿಸಲು ದ್ವೇಷ, ಸಂಘರ್ಷ ರಹಿತ ಹಾದಿ ತುಳಿದರು. ಶೂದ್ರ ವರ್ಗವನ್ನು ಸಮಾಜದ ಸಮಾನತೆಯ ಮಾರ್ಗಕ್ಕೆ ತಂದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಂತೆ 19ನೇ ಶತಮಾನದ ಅಂತ್ಯದಲ್ಲಿ 20ನೇ ಶತಮಾನದ ಆದಿಯ ಆ ಕಾಲದಲ್ಲಿದ್ದ ಅನೇಕ ಅನಿಷ್ಠ ಪದ್ಧತಿಗಳನ್ನು ವಿರೋಧಿಸುತ್ತ ಕೇರಳದ ಬಸವಣ್ಣ ಎಂದು ಹೆಸರು ಪಡೆದಿದ್ದರು. ಇವರ ಚಿಂತನೆಗಳಿಂದ ರವೀಂದ್ರನಾಥ ಟ್ಯಾಗೋರ್‌ರವರು ಪ್ರಭಾವಿತರಾಗಿದ್ದರು ಎಂದು ಹೇಳಿದರು.
ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿ ವಿರೋಧಿಸಿದಲ್ಲದೇ, ಸಮಾಜದಲ್ಲಿ ವಿಧವಾ ವಿವಾಹ ಪ್ರೋತ್ಸಾಹಿಸಿದರು. ತಮ್ಮ ತತ್ವ ಆದರ್ಶಗಳಿಂದ ಜಗತ್ತಿನಲ್ಲಿ ಆದರ್ಶರಾದರು. ಸಮಗ್ರ ಸಮಾಜದ ಅಭಿವೃದ್ಧಿ ಕನಸು ಕಂಡಿದ್ದ ಅವರನ್ನು ಯಾವುದೇ ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಸಂಕುಚಿತ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಪೊಲೀಸ್ ಅಧಿಕಾರಿ ಸಿಂಧೂರ, ಬಸವರಾಜ ಈಳಗೇರ, ಡಿ.ಎಸ್. ಬಿರಾದಾರ, ಸುನೀಲ ಗುತ್ತೇದಾರ, ಯಶವಂತ ಈಳಗೇರ, ಆಂಜನೇಯ ಈಳಗೇರ, ಡಾ| ಎಸ್.ಕೆ. ಬಿರಾದಾರ ವೇದಿಕೆಯಲ್ಲಿದ್ದರು. ಈ ವೇಳೆ ಸುರೇಶ ಶಹಾ ನೇತೃತ್ವದ ನೂಪುರ ಕಲಾ ಸಂಸ್ಥೆಯಿಂದ ನೃತ್ಯ ರೂಪಕ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಜೆ.ಎಸ್. ಪೂಜೇರಿ ಸ್ವಾಗತಿಸಿದರು. ಶಿಕ್ಷಕ ಹುಮಾಯುನ ಮಮದಾಪುರ ನಿರೂಪಿಸಿದರು. ಇದಕ್ಕೂ ಮೊದಲು ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಹಸು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.