14ರ ಪೋರನಿಂದ ವಿಮಾನ ಚಾಲನೆ
Team Udayavani, Sep 8, 2017, 8:55 AM IST
ದುಬೈ: ಸಂಯುಕ್ತ ಅರಬ್ ಒಕ್ಕೂಟ (ಯುಎಇ)ದಲ್ಲಿರುವ ಕೇವಲ 14 ವರ್ಷ ವಯಸ್ಸಿನ ಭಾರತ ಮೂಲದ ಬಾಲಕನೊಬ್ಬ ಇದೀಗ ಅತಿ ಕಿರಿಯ ವಯಸ್ಸಿನಲ್ಲೇ ಸಿಂಗಲ್ ಎಂಜಿನ್ ವಿಮಾನ ಚಾಲನೆ ಮಾಡಿ ಸಾಧನೆಗೈದಿದ್ದಾನೆ.
ಅಲ್ಲದೇ ಈ ಸಾಧನೆ ಮಾಡಿರುವ ಅತಿ ಕಿರಿಯ ಬಾಲಕ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ಈ ಬಾಲಕನ ಹೆಸರು ಮನ್ಸೂರ್ ಅನಿಸ್. ಶಾರ್ಜಾದ ದಿಲ್ಲಿ ಪ್ರೈವೇಟ್ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾರೆ. ಕಳೆದ ವಾರವಷ್ಟೇ ಕೆನಡಾದ ಎಎಎ ವಿಮಾನಯಾನ ಅಕಾಡೆಮಿಯಿಂದ ಏಕವ್ಯಕ್ತಿ ವಿಮಾನ ಚಾಲನೆ ಪರೀಕ್ಷೆಯಲ್ಲಿ ಮನ್ಸೂರ್ ತೇರ್ಗಡೆಯಾಗಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ವಿಮಾನಯಾನ ಪರೀಕ್ಷೆ ವೇಳೆ ಮನ್ಸೂರ್ ಸೆಸ್ನಾ 152 ವಿಮಾನವನ್ನು ಪಾರ್ಕಿಂಗ್ ಬೇ ಇಂದ ರನ್ ವೇವರೆಗೂ 10 ನಿಮಿಷಗಳ ಕಾಲ ಚಾಲನೆ ಮಾಡಿ, 5 ನಿಮಿಷಗಳ ಕಾಲ ಹಾರಾಟ ನಡೆಸಿ ಬಳಿಕ ಲ್ಯಾಂಡಿಂಗ್ ಮಾಡಿದ್ದಾನೆ. ತರಬೇತಿ ಅವಧಿ ವೇಳೆಯೂ ತಾನು ಏಕವ್ಯಕ್ತಿ ಚಾಲನೆ ಮಾಡಿದ್ದೆ. ಅದೂ ಕೂಡ ಒಂದು ದಾಖಲೆ ಎಂದಿದ್ದಾನೆ ಮನ್ಸೂರ್. ಈ ಹಿಂದೆ 15 ವರ್ಷದ ಜರ್ಮನಿ ಬಾಲಕ, 14ರ ಅಮೆರಿಕದ ಬಾಲಕ 34 ಗಂಟೆಗಳ ತರಬೇತಿ ಪಡೆದು ಮಾಡಿದ್ದ ದಾಖಲೆಯನ್ನು ಮನ್ಸೂರ್ ಮುರಿದಿದ್ದಾನೆ. ಮನ್ಸೂರ್ ಕೇವಲ 25 ಗಂಟೆಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ ಎಂದು ಆತನ ತಂದೆ ಅಲಿ ಅಸYರ್ ಅನೀಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.