ವಿಶ್ವ ಲೀಗ್ ಹಾಕಿ ಫೈನಲ್: “ಬಿ’ ಗುಂಪಿನಲ್ಲಿ ಸ್ಥಾನ ಪಡೆದ ಭಾರತ
Team Udayavani, Sep 8, 2017, 10:09 AM IST
ನವದೆಹಲಿ: ಡಿ.1 ರಿಂದ ಭಾರತ ಆತಿಥ್ಯದಲ್ಲಿ ಹಾಕಿ ವಿಶ್ವ ಲೀಗ್ ಫೈನಲ್ ಕೂಟ ಆರಂಭವಾಗಲಿದೆ. ಕೂಟದಲ್ಲಿ ಭಾರತ ಸೇರಿದಂತೆ 8 ತಂಡಗಳು ಸ್ಥಾನ ಪಡೆದಿವೆ. ತಂಡಗಳನ್ನು “ಎ’ ಮತ್ತು “ಬಿ’ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಭಾರತ ಬಲಿಷ್ಠ “ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಉಳಿದಂತೆ “ಬಿ’ ಗುಂಪಿನಲ್ಲಿ ಬಲಾಡ್ಯ ತಂಡಗಳಾದ ಆಸ್ಟ್ರೇಲಿಯಾ, ಜರ್ಮನಿ ಮತ್ತು ಇಂಗ್ಲೆಂಡ್ ತಂಡಗಳು ಸ್ಥಾನ ಪಡೆದಿವೆ. ಇತ್ತೀಚಿನ ಟೂರ್ನಿಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದೆ. ಇದರಿಂದ ತಂಡದ ಕೋಚ್ ಸ್ಥಾನವೂ ಬದಲಾವಣೆಯಾಗಿದೆ. ಹೀಗಾಗಿ ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ. “ಎ’ ಗುಂಪಿನಲ್ಲಿ ಅರ್ಜೆಂಟೀನಾ, ಬೆಲ್ಜಿಯಂ, ಹಾಲೆಂಡ್, ಸ್ಪೇನ್ ತಂಡಗಳು ಸ್ಥಾನ ಪಡೆದಿವೆ. ಎಲ್ಲಾ ತಂಡ ಗಳು ಬಲಿಷ್ಠ ತಂಡಗಳಾ ಗಿರುವುದರಿಂದ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಭಾರತ ಡಿ.1ರಂದು ಆಸ್ಟ್ರೇಲಿಯಾ, ಡಿ.2 ರಂದು ಇಂಗ್ಲೆಂಡ್, ಡಿ.4 ರಂದು ಜರ್ಮನಿ ತಂಡವನ್ನು ಎದುರಿಸಲಿದೆ. ಡಿ.7 ರಿಂದ ಕ್ವಾರ್ಟರ್ ಫೈನಲ್, ಡಿ.10 ರಂದು ಫೈನಲ್ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ
Air India: ಕೈಕೊಟ್ಟ ಏರಿಂಡಿಯಾ ವಿಮಾನ: ಪ್ರಯಾಣಿಕರು 80 ಗಂಟೆಗಳಿಂದ ಅತಂತ್ರ!
Anandiben Patel: ವಿಮಾನ ಅನ್ವೇಷಿಸಿದ್ದು ರೈಟ್ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ
bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್ ಸೈಕ್ಲೋನ್’ ಸ್ಫೋಟ!
Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.