ಅಪಾರ್ಟ್‌ಮೆಂಟ್ ವಶದಲ್ಲಿದ್ದ ರಸ್ತೆ ಸಾರ್ವಜನಿಕರ ಬಳಕೆಗೆ
Team Udayavani, Sep 8, 2017, 11:00 AM IST
ಮಹದೇವಪುರ: ವೈಟ್‌ಫೀಲ್ಡ್ ಸಮೀಪದ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಪ್ರಸ್ಟೀಜ್ ಗ್ರೂಪ್‌ನ ಶಾಂತಿನೇಕತನ್ ಅಪಾರ್ಟ್‌ಮೆಂಟ್‌ನ ಸುಪರ್ದಿಯಲ್ಲಿದ್ದ ರಸ್ತೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ಬಿಡಿಎ ಅಧಿಕಾರಿಗಳು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಐಟಿಪಿಎಲ್ ಬಳಿ ಸುಮಾರು 105 ಎಕರೆಯಲ್ಲಿ ಪ್ರತಿಷ್ಟಿತ ಪ್ರಸ್ಟೀಜ್ ಗ್ರೂಪ್ ವತಿಯಿಂದ “ಶಾಂತಿನಿಕೇತನ್’ ಹೆಸರಲ್ಲಿ ವಸತಿ ಸಮುಚ್ಚಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳ ನಡುವೆ 40 ಅಡಿ ಅಗಲದ 1ಕಿ.ಮೀ ಉದ್ದದ ಬಿಡಿಎ ಆರ್‌ಸಿಡಿಪಿ ರಸ್ತೆಯನ್ನು ಅಪಾರ್ಟ್‌ಮೆಂಟ್ ತನ್ನ ವಶಕ್ಕೆ ಪಡೆದುಕೊಂಡಿದ್ದೂ ಅಲ್ಲದೆ, ಸಾರ್ವಜನಿಕರ ಸಂಚಾರವನ್ನೇ ನಿರ್ಬಂಧಿಸಿತ್ತು.
ರಸ್ತೆಯನ್ನು ಅಪಾರ್ಟ್‌ಮೆಂಟ್ ನಿವಾಸಿಗಳ ಬಳಕೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಸಾರ್ವಜನಿಕರು ಬಂದರೆ ಸೆಕ್ಯೂರಿಟಿ ಗಾರ್ಡ್‌ಗಳು ತಡೆಯುತ್ತಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಖಾಸಗಿ ಸಮುಚ್ಚಯವು ಸಂಚಾರ ನಿರ್ಬಂಧಿಸಿದ್ದರ ವಿರುದ್ಧ ಗಿರಿನಗರ ನಿವಾಸಿ ಗೋಪಿನಾಥ್ ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಸೆ.12ರ ಒಳಗೆ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಮತ್ತು ಈ ವರದಿ ನೀಡಬೇಕು ಎಂದು ಬಿಡಿಎಗೆ ಆ.30ರಂದು ಆದೇಶಿಸಿತ್ತು. ಈ ಹಿನ್ನೆಲೆ ರಸ್ತೆಯ ಪ್ರವೇಶ ಧ್ವಾರದಲ್ಲಿ ನಿರ್ಮಿಸಲಾಗಿದ್ದ ಅಪಾರ್ಟ್‌ಮೆಂಟ್‌ನ ಭದ್ರತಾ ಗೃಹವನ್ನು ಬಿಡಿಎ ಗುರುವಾರ ತೆರವು ಮಾಡಿದೆ. ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.