ಏಕಪಕ್ಷೀಯ ಲೆಕ್ಕ ಪತ್ರ ಮಾರ್ಗಸೂಚಿಗೆ ಆಕ್ಷೇಪ
Team Udayavani, Sep 8, 2017, 11:01 AM IST
ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಏಕಪಕ್ಷೀಯವಾಗಿ ಲೆಕ್ಕಪತ್ರ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ಸೋರಿಕೆಯಾಗಲಿದೆ. ಹೀಗಾಗಿ ಈ ಮಾರ್ಗಸೂಚಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾ ನಾರಾಯಣ್ ದೂರಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ 2001ರಲ್ಲಿ ಅಳವಡಿಸಿಕೊಳ್ಳಲಾಗಿದ್ದ ಲೆಕ್ಕಪತ್ರ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿ ಉನ್ನತೀಕರಿಸಲು ಸಮಿತಿಯಿಂದ ವಿವಿಧ ನಗರ ಪಾಲಿಕೆಗಳ ಲೆಕ್ಕಪತ್ರ ವ್ಯವಸ್ಥೆ ಪರಿಶೀಲಿಸಲು ಅಧಿಕಾರಿಗಳನ್ನು ಕೋರಲಾಗಿತ್ತು. ಆದರೆ, ಅದಕ್ಕೆ ಅವಕಾಶ ನೀಡದ ಅಧಿಕಾರಿಗಳು ಏಕಪಕ್ಷೀಯವಾಗಿ ಲೆಕ್ಕಪತ್ರ ಸಮಿತಿ ರಚಿಸಿ ಮಾರ್ಗಸೂಚಿ ರಚಸಿದ್ದಾರೆ ಎಂದು ದೂರಿದರು.
ಹೊಸ ಮಾರ್ಗಸೂಚಿಗಳನ್ನು ರಚಿಸುವ ವೇಳೆ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಇದರೊಂದಿಗೆ ಅವರು ರಚಿಸಿರುವ ಸಮಿತಿಗೆ ಮೇಯರ್ ಅವರು ಉಪಮೇಯರ್ ಅವರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಬೇಕಿತ್ತು. ಆದರೆ, ಅದೇನನ್ನೂ ಮಾಡದೆ ತಮಗೆ ಇಷ್ಟ ಬಂದವರನ್ನು ಸದಸ್ಯರನ್ನಾಗಿಸಿ ಯಾವುದೇ ಡಿಜಿಟಲೀಕರಣದ ಅಂಶಗಳಿಲ್ಲದ ಮಾರ್ಗಸೂಚಿಗಳನ್ನು ಸಿದ್ದಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ರಚನೆ ಮಾಡಿರುವ ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಯ ಮುಂದೆ ಮಂಡಿಸಬೇಕಿತ್ತು. ಆದರೆ, ಹಣಕಾಸು ವಿಭಾಗದ ವಿಶೇಷ ಆಯುಕ್ತರು ತಾವೇ ಲೆಕ್ಕಪತ್ರ ಮಾರ್ಗಸೂಚಿಗಳ ಪುಸ್ತಕವನ್ನು ಹೊರತಂದು ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ. ಅವರು ತಯಾರಿಸಿರುವ ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇದನ್ನು ಮೇಯರ್ ಅವರ ಗಮನಕ್ಕೆ ತಂದಿದ್ದೇನೆ. ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಿತಿಯ ಸದಸ್ಯ ಗೌತಮ್ ಕುಮಾರ್ ಮಾತನಾಡಿ, ಪಾಲಿಕೆಯಲ್ಲಿ ಸದ್ಯ ಜಾರಿಯಲ್ಲಿರುವ ಹಳೆ ಪದ್ಧತಿಯಿಂದ ಪಾಲಿಕೆಯ ಹಣ ಎಷ್ಟು ವಿನಿಯೋಗವಾಗುತ್ತಿದೆ ಹಾಗೂ ಎಷ್ಟು ಆದಾಯ ಬರುತ್ತಿದೆ ಎಂಬ ಮಾಹಿತಿ ಸಮರ್ಪಕವಾಗಿಲ್ಲ. ಇದರೊಂದಿಗೆ ಯಾವ ಕಾಮಗಾರಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತೆರಿಗೆದಾರರ ಹಣ ಬೇರೊಬ್ಬರ ಪಾಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಇತ್ತೀಚೆಗೆ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿರುವ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ 100 ಕೋಟಿಯ ಕಾಮಗಾರಿಗೆ 160 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಜಾಬ್ ಕೋಡ್ ನೀಡಿರುವುದು ಮಾತ್ರ 100 ಕೋಟಿ ರೂ.ಗೆ ಮಾತ್ರ. ಉಳಿದ 60 ಕೋಟಿಗೆಯನ್ನು ಹೇಗೆ ನೀಡಿದರು, ಯಾವ ಜಾಬ್‌ಕೋಡ್‌ನಲ್ಲಿ ನೀಡಿದರು ಎಂಬ ಮಾಹಿತಿಯೇ ಇಲ್ಲ. ಅದನ್ನು ಪತ್ತೆ ಹಚ್ಚಲು ಮುಂದಾದರೆ ಅಧಿಕಾರಿಗಳು ಅಡ್ಡಪಡಿಸುತ್ತಿದ್ದಾರೆ ಎಂದು ದೂರಿದರು.
ಸದ್ಯ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ತಯಾರಿಸಿರುವಂತಹ ಮಾರ್ಗಸೂಚಿಗಳಲ್ಲಿ ಡಿಜಿಟಲೀಕರಣ, ಜಿಎಸ್‌ಟಿ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮಾರ್ಗಸೂಚಿಗಳನ್ನು ಒಪ್ಪುವುದಿಲ್ಲ. ಪಾಲಿಕೆಗೆ ಯಾವ ಮೂಲದಿಂದ ಎಷ್ಟು ಆದಾಯ ಬಂದಿದೆ, ಎಷ್ಟು ವೆಚ್ಚವಾಗಿದೆ ಎಂಬ ಮಾಹಿತಿಗಾಗಿ ಲೆಕ್ಕಪರಿಶೋಧಕರು ಅಗತ್ಯವಿದೆ. ಆದರೆ, ಪಾಲಿಕೆಯಲ್ಲಿ ಈಗ ಡಾಟಾ ಎಂಟ್ರಿ ಆಪರೇಟರ್‌ಗಳಿದ್ದು, ಪ್ರತಿ ವರ್ಷ 73 ಲಕ್ಷ ರೂ. ಗಳನ್ನು ಇವರಿಗೆ ಪಾವತಿಸಲಾಗುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.
ಎರವಲು ಅಧಿಕಾರಿಗಳು ಏಕೆ ಬೇಕು?
ಕೆಲಸವೇ ಗೊತ್ತಿಲ್ಲದ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಪಾಲಿಕೆಗೆ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಕೆಎಸ್‌ಎಫ್ಸಿಯ ಅಧಿಕಾರಿಯನ್ನು ಮಳೆನೀರುಗಾಲುವೆ ಎಂಜಿನಿಯರ್ ಆಗಿ ನೇಮಿಸಲಾಗಿದೆ. ಅವರಿಗೆ ಮಾಸಿಕ 1 ಲಕ್ಷ ರೂ. ವೇತನ ನೀಡಲಾಗುತ್ತಿದ್ದು, ಅದಕ್ಕೆ ಸಮಾನ ಹುದ್ದೆಯ ಪಾಲಿಕೆ ಅಧಿಕಾರಿಗೆ 60 ಸಾವಿರ ರೂ. ವೇತನ ನೀಡಲಾಗುತ್ತಿದೆ. ಹಾಗೆಯೇ ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರಿಗೆ ಮಾಸಿಕ 1.50 ಲಕ್ಷ ರೂ. ಹಾಗೂ ಅದೇ ಕೆಲಸ ಮಾಡುವ ಪಾಲಿಕೆಯ ಅಧಿಕಾರಿಗಳು 73 ಸಾವಿರ ನೀಡಲಾಗುತ್ತಿದೆ. ಅವಶ್ಯಕತೆಯಿಲ್ಲದೆ ಅಧಿಕಾರಿಗಳನ್ನು ಎರವಲು ಪಡೆಯುವ ಅಗತ್ಯವೇನಿದೆ ಎಂದು ಗೌತಮ್‌ಕುಮಾರ್ ಪ್ರಶ್ನಿಸಿದರು.
ಅಕೌಂಟ್‌ಗಳಿಗೆ ಹ್ಯಾಕ್ ಪ್ರೂಫ್ ಇಲ್ಲ
ಬಿಬಿಎಂಪಿ ಹೊಂದಿರುವ ಖಾತೆಗಳು ಹ್ಯಾಕ್ ಪ್ರೂಫ್ ಹೊಂದಿಲ್ಲದ ಹಿನ್ನೆಲೆಯಲ್ಲಿ ಹ್ಯಾಕರ್‌ಗಳು ಪಾಲಿಕೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಇದರೊಂದಿಗೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಪಾಲಿಕೆಯ ಎಷ್ಟು ಬ್ಯಾಂಕ್ ಖಾತೆಗಳಿವೆ ಎಂಬ ಮಾಹಿತಿಯಿಲ್ಲ. ಒಂದೊಮ್ಮೆ ಪಾಲಿಕೆಯ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಪಡೆದರೆ ಅದಕ್ಕೆ ಹೊಣೆಯಾರು ಎಂದು ನೇತ್ರಾ ನಾರಾಯಣ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.