ಮುಂಬಯಿ ವಿ.ವಿ.MA :72 ವಿದ್ಯಾರ್ಥಿಗಳಿಂದ ಶೂನ್ಯ ಸಂಪಾದನೆ !


Team Udayavani, Sep 8, 2017, 12:03 PM IST

5.jpg

ಮುಂಬಯಿ:ಮುಂಬಯಿ  ವಿಶ್ವ ವಿದ್ಯಾನಿಲಯವು  ಈ ವರ್ಷದ  ಮಾರ್ಚ್‌- ಎಪ್ರಿಲ್‌ನಲ್ಲಿ  ನಡೆಸಿದ  ಪರೀಕ್ಷೆಗಳ ಫ‌ಲಿತಾಂಶವನ್ನು ಪ್ರಕಟಿಸಲು ಇನ್ನೂ ಹೆಣಗಾಡುತ್ತಿರುವಂತೆಯೇ  ಈಗಾಗಲೇ  ಪ್ರಕಟ ಗೊಂಡಿರುವ ಫ‌ಲಿತಾಂಶಗಳು  ಸಂಪೂರ್ಣ ಗೊಂದಲಮಯವಾಗಿದ್ದು ವಿದ್ಯಾರ್ಥಿಗಳು ಮತ್ತಷ್ಟು  ಸಂಕಷ್ಟಗಳನ್ನು ಅನುಭವಿಸುವಂತಾಗಿದೆ. ಪರೀಕ್ಷೆಗೆ ಹಾಜರಾಗಿದ್ದರೂ  ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ  ಪರೀಕ್ಷೆಗೆ  ಗೈರಾಗಿರುವುದಾಗಿ ನಮೂದಿಸಲಾಗಿದ್ದರೆ  ಇನ್ನು ಕೆಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೇ  ನಾಪತ್ತೆಯಾಗಿದ್ದು  ಈ ವಿದ್ಯಾರ್ಥಿಗಳ ಫ‌ಲಿತಾಂಶವನ್ನು  ತಡೆಹಿಡಿಯಲಾಗಿದೆ.  ಮುಂಬಯಿ  ವಿಶ್ವವಿದ್ಯಾನಿಲಯದ  ದೂರ ಮತ್ತು ಮುಕ್ತ ಶಿಕ್ಷಣ ಸಂಸ್ಥೆಯು ನಡೆಸಿದ  ಕಲಾ ಸ್ನಾತಕೋತ್ತರ  ಪದವಿ ಕೋರ್ಸ್‌ನ  ಸಮಾಜಶಾಸ್ತ್ರ ಭಾಗ-1ರ ಪರೀಕ್ಷೆಯಲ್ಲಿ  72 ವಿದ್ಯಾರ್ಥಿಗಳು ಶೂನ್ಯ  ಅಂಕ ಸಂಪಾದಿಸಿದ್ದಾರೆ. ಅಷ್ಟೇ ಅಲ್ಲದೆ  ಪರೀಕ್ಷೆಗೆ  ಹಾಜರಾಗಿದ್ದ  462 ವಿದ್ಯಾರ್ಥಿಗಳ  ಪೈಕಿ ಈ  72 ವಿದ್ಯಾರ್ಥಿಗಳ  ಸಹಿತ  ಶೇ.80ರಷ್ಟು  ವಿದ್ಯಾರ್ಥಿಗಳು  ಅನುತ್ತೀರ್ಣ ರಾಗಿದ್ದು  ಇಡೀ ಮೌಲ್ಯಮಾಪನ ಪ್ರಕ್ರಿಯೆಯ ಸಾಚಾತನದ  ಬಗೆಗೇ  ಇದೀಗ  ವಿದ್ಯಾರ್ಥಿಗಳು  ಅನುಮಾನಗಳನ್ನು  ವ್ಯಕ್ತಪಡಿಸಿದ್ದಾರೆ.  

ವಿಶ್ವವಿದ್ಯಾನಿಲಯದ  ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದ  ನಾವು ಅನುತ್ತೀರ್ಣರಾಗಿದ್ದು  ವಿಶ್ವವಿದ್ಯಾನಿಲಯ  ತನ್ನ  ತಪ್ಪನ್ನು ಸರಿಪಡಿಸಿ  ಫ‌ಲಿತಾಂಶವನ್ನು  ಹೊಸದಾಗಿ  ಪ್ರಕಟಿಸಬೇಕು  ಎಂದು  ವಿದ್ಯಾರ್ಥಿಗಳು  ಆಗ್ರಹಿಸಿದ್ದಾರೆ.  ಆದರೆ  ವಿಶ್ವವಿದ್ಯಾನಿಲಯ ಅನುತ್ತೀರ್ಣಗೊಂಡಿರುವ  ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕಾಗಿ  ಅರ್ಜಿ ಸಲ್ಲಿಸಲು  ಅವಕಾಶವಿದೆ ಎನ್ನುವ  ಮೂಲಕ  ತನ್ನ  ಹೊಣೆಗಾರಿಕೆಯಿಂದ  ನುಣುಚಿಕೊಳ್ಳುವ ಪ್ರಯತ್ನವನ್ನು  ನಡೆಸಿದೆ. 

ಮಾನವಶಾಸ್ತ್ರ  ಪೇಪರ್‌ನಲ್ಲಿ  ನನಗೆ  ಶೂನ್ಯ ಅಂಕವನ್ನು  ನೀಡಲಾಗಿದ್ದರೆ ಉಳಿದ  ವಿಷಯಗಳಲ್ಲಿ  ತೇರ್ಗಡೆಗೆ  ಅಗತ್ಯವಿರುವಷ್ಟು ಅಂಕಗಳು  ಮಾತ್ರವೇ  ಲಭಿಸಿವೆ. ಮಾನವಶಾಸ್ತ್ರ  ಸಹಿತ ಎಲ್ಲಾ  ವಿಷಯಗಳ ಪರೀಕ್ಷೆಯನ್ನೂ ನಾನು  ಉತ್ತಮ ರೀತಿಯಲ್ಲಿ  ಎದುರಿಸಿದ್ದೆ. ಒಂದು ವೇಳೆ  ಪರೀಕ್ಷೆಯಲ್ಲಿ  ಸ್ವಲ್ವೇ ಬರೆದಿದ್ದರೂ ಶೂನ್ಯ ಅಂಕ ಲಭಿಸುವ ಸಾಧ್ಯತೆ  ಇಲ್ಲವೇ ಇಲ್ಲ ಎಂದು ಸಮಾಜಶಾಸ್ತ್ರ  ವಿಷಯದಲ್ಲಿ  ಸ್ನಾತಕೋತ್ತರ ಪದವಿಯ  ಮೊದಲ ವರ್ಷದ  ವಿದ್ಯಾರ್ಥಿನಿಯಾಗಿರುವ  ಶಹೀನಾ ದೂರಿದರು. 

ಈ ಸಂಬಂಧ  ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ವಿಚಾರಿಸಿದಾಗ ನೀವು ಬಯಸಿದ್ದೇ  ಆದಲ್ಲಿ  ಸದ್ಯ  ಫ‌ಲಿತಾಂಶವನ್ನು  ತಡೆಹಿಡಿದು ಮರುಮೌಲ್ಯಮಾಪನದ ಬಳಿಕ ಫ‌ಲಿತಾಂಶವನ್ನು  ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಂದು  ವೇಳೆ ಫ‌ಲಿತಾಂಶ ಇನ್ನಷ್ಟು ವಿಳಂಬಗೊಂಡದ್ದೇ ಆದಲ್ಲಿ  ಎರಡನೇ ವರ್ಷದ ಪ್ರವೇಶಕ್ಕೆ ತಡೆಯಾಗಲಿದೆ ಎಂದರು. 

ವಿಶ್ವವಿದ್ಯಾನಿಲಯ ಇದೀಗ ಪ್ರಕಟಿಸಿರುವ ಫ‌ಲಿತಾಂಶದ  ಪ್ರಕಾರ ಹಲವಾರು ವಿದ್ಯಾರ್ಥಿಗಳು  ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ  ಕನಿಷ್ಠ ಅಂಕ ಗಳನ್ನೂ  ಪಡೆದಿಲ್ಲ. ಈಗಾಗಲೇ  ಫ‌ಲಿತಾಂಶ ಪ್ರಕಟನೆಯಲ್ಲಿ  ಸಾಕಷ್ಟು ವಿಳಂಬವಾಗಿದ್ದು ಮರುಪರೀಕ್ಷೆ ಅಕ್ಟೋಬರ್‌ನಲ್ಲಿ  ನಡೆಯಲಿದೆ. ನಾವು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿರುವಾಗ ಮರು ಪರೀಕ್ಷೆಗೆ ಏಕೆ ಹಾಜರಾಗಬೇಕು ಎಂದು  ಇನ್ನೋರ್ವ ವಿದ್ಯಾರ್ಥಿನಿ ಜಾನಕಿ .ಎಸ್‌ ಪ್ರಶ್ನಿಸಿದರು. 

ವಿಶ್ವವಿದ್ಯಾನಿಲಯದ  ಅಧಿಕಾರಿಗಳ  ಪ್ರಕಾರ  ಪರೀಕ್ಷೆಗೆ ಹಾಜರಾಗಬಯಸಿದ್ದ  687 ವಿದ್ಯಾರ್ಥಿಗಳ ಪೈಕಿ  225 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಗೆ  ಹಾಜರಾಗಿದ್ದ  462 ವಿದ್ಯಾರ್ಥಿಗಳಲ್ಲಿ  361 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಈ ಪೈಕಿ 72 ವಿದ್ಯಾರ್ಥಿಗಳು  ವಿಷಯವೊಂದರಲ್ಲಿ  ಶೂನ್ಯ ಅಂಕಗಳನ್ನು ಪಡೆದಿದ್ದಾರೆ. ಫ‌ಲಿತಾಂಶದಲ್ಲಿ ಎಲ್ಲಿ ತಪ್ಪಾಗಿದೆ? ಎಂದು ಪರಿಶೀಲನೆ ನಡೆಸಲಾಗುವುದು  ಎಂದವರು ತಿಳಿಸಿದರು. 

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.