ಲಾಲ್‌ಬಾಗ್ ಚಾ ರಾಜಾನಿಗೆ ಕಾಣಿಕೆಗಳ ಮಹಾಪೂರ
Team Udayavani, Sep 8, 2017, 12:26 PM IST
ಮುಂಬಯಿ: ಮಳೆ ಹಾಗೂ ನೆರೆಯಿಂದ ಉತ್ಸವದ ಆಚರಣೆಗೆ ಕೊಂಚ ಅಡ್ಡಿಯಾದರೂ ಲಾಲ್‌ಬಾಗ್ ಚಾ ರಾಜಾ ಗಣೇಶೋತ್ಸವ ಮಂಡಲಕ್ಕೆ ಭಕ್ತರಿಂದ ಕಾಣಿಕೆಗಳ ಮಹಾಪೂರವೇ ಹರಿದು ಬಂದಿದೆ.
ಮೊದಲ ಆರು ದಿನ ಪೆಂಡಾಲ್‌ಗೆ ಬರಲಾರದ ಭಕ್ತರು ವಾರಾಂತ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ, ಗಣೇಶನಿಗೆ ತಮ್ಮ ಸೇವೆ, ಕಾಣಿಕೆಗಳನ್ನು ಸಮರ್ಪಿಸಿದರು. ಜನರ ಪ್ರೀತಿ ಹಾಗೂ ಭಕ್ತಿಗೆ ಪಾರವೇ ಇರಲಿಲ್ಲ.
ಗಣಪತಿಗೆ ಅವರು ಒಂದು ಕೆಜಿ ಚಿನ್ನ ಹಾಗೂ 5 ಕೋಟಿ ರೂ. ಕಾಣಿಕೆ ಸಮರ್ಪಿಸಿದ್ದಾರೆ. ಅಲ್ಲದೆ, ಲಕ್ಷ್ಮೀ ಹಾಗೂ ಗಣಪತಿಯ ಚಿನ್ನದ ಜೋಡಿ ವಿಗ್ರಹ ಅರ್ಪಿಸಿದ್ದು, ಅದರ ಭಾರವೂ ಒಂದು ಕೆಜಿ ಇದೆ. 250 ಗ್ರಾಂ ತೂಕದ ಚಿನ್ನದ ಮೋದಕವನ್ನೂ ಭಕ್ತರು ಸಲ್ಲಿಸಿದ್ದಾರೆ. ಚಿನ್ನ-ಬೆಳ್ಳಿಯ ಇತರ ವಸ್ತುಗಳೂ ಭಾರಿ ಪ್ರಮಾಣದಲ್ಲಿವೆ ಎಂದು ಮಂಡಲದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಪವಾರ್ ಹೇಳಿದರು.
ಕಳೆದ ವರ್ಷದ ಸಂಗ್ರಹ ಸುಮಾರು 9 ಕೋಟಿ ರೂ. ಆಗಿತ್ತು. ಇದರಲ್ಲಿ 6.6 ಕೋಟಿ ನಗದು ಹಾಗೂ ಗಣಪತಿಗೆ ಅರ್ಪಿಸಿದ ವಸ್ತುಗಳ ಹರಾಜಿನಿಂದ 2.2 ಕೋಟಿ ರೂ. ಬಂದಿತ್ತು. ಈ ವರ್ಷದ ಹರಾಜು ಪ್ರಕ್ರಿಯೆ ಶನಿವಾರ ನಡೆಯಲಿದೆ. ಅನಂತ ಚತುರ್ದಶಿ ಬಳಿಕ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ “ರಾಜಾ’ನ ಮೂರ್ತಿ ವಿಸರ್ಜನೆ ನೆರವೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.