ಒಂದೇ ದಿನ 990 ರೂ. ಜಿಗಿತ: ಚಿನ್ನ 10 ಗ್ರಾಮಿಗೆ 31,350 ರೂ.
Team Udayavani, Sep 8, 2017, 5:21 PM IST
ಮುಂಬಯಿ : ಚಿನ್ನದ ಧಾರಣೆ ಇಂದು ಒಂದೇ ದಿನದಲ್ಲಿ 990 ರೂ. ಏರಿದ್ದು 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿದೆ.
ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಎತ್ತರ ಇಂದಿನದ್ದಾಗಿದೆ. ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿರುವುದು ಹಾಗೂ ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿರುವುದು ವಿಶ್ವಾದ್ಯಂತ ಚಿನ್ನದ ಧಾರಣೆ ಗಗನ ಮುಖೀಯಾಗಲು ಕಾರಣವಾಗಿದೆ.
ಕಳೆದ ಎರಡು ದಿನಗಳಲ್ಲಿ ಚಿನ್ನದ ಧಾರಣೆ ಸುಮಾರು 240ರೂ.ಗಳಷ್ಟು ಕುಸಿದಿತ್ತು. ಇಂದು ಒಂದೇ ದಿನ ಅದು ಹತ್ತು ತಿಂಗಳ ಎತ್ತರಕ್ಕೆ ಏರಿತು.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಅಕ್ಟೋಬರ್ ಪೂರೈಕೆ ಚಿನ್ನವು 10 ಗ್ರಾಮಿಗೆ 30,380ರ ದರದಲ್ಲಿ, ಎಂದರೆ 98 ರೂ. ಹೆಚ್ಚಿನ ದರದಲ್ಲಿ (ಶೇ.0.32) ವ್ಯವಹಾರವಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SU7; ಭಾರತಕ್ಕೂ ಶೀಘ್ರ ಬರಲಿದೆ ಶಿಯೋಮಿ ಎಲೆಕ್ಟ್ರಿಕ್ ಕಾರು!
Bajaj Freedom: ಬಜಾಜ್ ಫ್ರೀಡಂ 125 CNG ಬೈಕ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?
Tesla; ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿ ಮಸ್ಕ್ ಹಿಂದೇಟು
Tax ಸ್ಟಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂ.ಗೆ ಏರಿಕೆ?
Stock Market: ಬಿಎಸ್ ಇ, ನಿಫ್ಟಿ ಭಾರೀ ಏರಿಕೆ-ಸೆಬಿಗೆ CJI ಚಂದ್ರಚೂಡ್ ಕೊಟ್ಟ ಸಲಹೆ ಏನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.