ಕೆಪಿಎಲ್: ಬೆಳಗಾವಿ ಪ್ಯಾಂಥರ್ಸ್‌ಗೆ ಕೂಟದಲ್ಲಿ ಮೊದಲ ಜಯ
Team Udayavani, Sep 9, 2017, 7:20 AM IST
ಮೈಸೂರು: ಬೆಳಗಾವಿ ಪ್ಯಾಂಥರ್ಸ್ ತಂಡ 6ನೇ ಆವೃತ್ತಿಯ ಕೆಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿದೆ. ಅದು ಶುಕ್ರವಾರ ನಡೆದ ಕೆಪಿಎಲ್‌ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 23 ರನ್‌ಗಳಿಂದ ಸೋಲಿಸಿತು.
ನಗರದ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿ ಪ್ಯಾಂಥರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ 19.3 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಯಿತು.
ಬೆಂಗಳೂರಿನ ವಿಶ್ವನಾಥ್ ವ್ಯರ್ಥ ಹೋರಾಟ:
ಬೃಹತ್ ಗುರಿಯನ್ನು ಎದುರಿಟ್ಟುಕೊಂಡು ಹೋರಾಟ ನಡೆಸಿದ ಬೆಂಗಳೂರು ಬ್ಲಾಸ್ಟರ್ಗೆ ಎಂ.ವಿಶ್ವನಾಥ್ (65) ಆಸರೆಯಾದರು. ಆದರೆ ಇವರ ಹೋರಾಟ ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ವಿಶ್ವನಾಥ್ ಅವರು ಶಿಶಿರ್ ಭವಾನೆ ಜೊತೆಗೂಡಿ 85 ರನ್ ಸಂಗ್ರಹಿಸಿದರು. ಏಕಾಂಗಿಯಾಗಿ ಬಿಜಾಪುರ ಬುಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವಿಶ್ವನಾಥ್ 35 ಎಸೆತಗಳಲ್ಲಿ 5 ¸ರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 65 ರನ್‌ಗಳಿಸಿದರು. ಈ ವೇಳೆ ರನೌಟ್ ಬಲೆಗೆ ಬಿದ್ದರು. ಇಲ್ಲಿಂದ ಬೆಳಗಾವಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಬೆಳಗಾವಿಯ ಬಿನ್ನಿ ¸ಭರ್ಜರಿ ಬ್ಯಾಟಿಂಗ್: ಕೇವಲ 32 ರನ್‌ಗಳಿಗೆ ಆರಂಭಿಕ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬೆಳಗಾವಿ ತಂಡಕ್ಕೆ ಭರವಸೆಯ ಆಟಗಾರ ಸ್ಟುವರ್ಟ್ ಬಿನ್ನಿ ಆಸರೆಯಾದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಿನ್ನಿ ಎದುರಾಳಿ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡಿದರು. ಆರಂಭದಲ್ಲಿ ನಿಧಾನಗತಿಯಲ್ಲೇ ರನ್ ಗಳಿಸುತ್ತ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ರಾಜೂ ¸ಭಟ್ಕಳ್ ಎಸೆದ ಪಂದ್ಯದ 15ನೇ ಓವರ್‌ನಲ್ಲಿ ರನ್‌ವೇಗ ಹೆಚ್ಚಿಸಿದ ಸ್ಟುವರ್ಟ್, ಒಂದೇ ಓವರ್‌ನಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 23 ರನ್ ಬಾರಿಸುವ ಮೂಲಕ ಅರ್ಧಶತಕ ಸಿಡಿಸಿ ಆರ್ಭಟಿಸಿದರು. ಒಟ್ಟು 3 ಬಾರಿ ಜೀವದಾನ ಪಡೆದ ಬಿನ್ನಿ ಕೊನೆಯ ಮೂರು ಓವರ್‌ಗಳಿವೆ ಎನ್ನುವಾಗ ಭಾರೀ ಪ್ರಮಾಣದಲ್ಲಿ ಏರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಬೆಳಗಾವಿ ಸ್ಕೋರ್ ನಿರೀಕ್ಷೆಗೆ ಮೀರಿ ಏರಿಕೆ ಕಂಡಿತ. ಕೇವಲ 45 ಎಸೆತ ಎದುರಿಸಿದ ಬಿನ್ನಿ, 8 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್ ಸಹಿತ 87 ರನ್ ಗಳಿಸಿದರು. ಪರಿಣಾಮ ಬೆಳಗಾವಿ 192 ರನ್‌ಗಳವರೆಗೆ ಏರಿಕೆ ಕಂಡಿತು. ಇದುವರೆಗೆ ಬೆಂಗಳೂರಿಗೆ ಸವಾಲೆನಿಸಿತು.
ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ 20 ಓವರ್, 192/7 (ಸ್ಟುವರ್ಟ್ ಬಿನ್ನಿ 87, ಎಸ್.ರಕ್ಷಿತ್ 29, ಮಿತ್ರಕಾಂತ್ 22ಕ್ಕೆ 2), ಬೆಂಗಳೂರು ಬ್ಲಾಸ್ಟರ್ 19.3 ಓವರ್‌ನಲ್ಲಿ 169 (ವಿಶ್ವನಾಥ್ 65, ಶಿಶಿರ್ ವಾನೆ 34, ಕಿಶೋರ್ ಕಾಮತ್ 26ಕ್ಕೆ 4).
– ಸಿ.ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಮತ್ತೆ ಬ್ಯಾಟಿಂಗ್ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ
MI: ಸೂರ್ಯ, ಹಾರ್ದಿಕ್ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್: ರೋಹಿತ್ ಹೇಳಿದ್ದೇನು?
Pro Kabaddi: ದಬಾಂಗ್ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್
India Vs Newzeland Test: ವಾಂಖೇಡೆ: ರೋಹಿತ್ ಶರ್ಮಾ ಪಡೆಗೆ ಅಗ್ನಿಪರೀಕ್ಷೆ
IPL Retention: ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು.. ಇಲ್ಲಿದೆ ಫುಲ್ ಲಿಸ್ಟ್
MUST WATCH
ಹೊಸ ಸೇರ್ಪಡೆ
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.