ಪುನರುಜ್ಜೀವನಕ್ಕೆ ರಾಷ್ಟ್ರೀಯ ಜಲನೀತಿ ಅತ್ಯಗತ್ಯ


Team Udayavani, Sep 9, 2017, 7:00 AM IST

Sadhguru-Jaggi-Vasudev.jpg

ಮೈಸೂರು: ನದಿ ನೀರು ಹಂಚಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ನಡೆಯುತ್ತಿರುವ ಜಗಳ ತಪ್ಪಿಸಲು, ನದಿಗಳನ್ನು ರಕ್ಷಿಸುವುದೊಂದೇ ಮಾರ್ಗ. ಇದಕ್ಕಾಗಿ ನದಿಗಳ ಪುನರುಜ್ಜೀವನಕ್ಕಾಗಿ ರಾಷ್ಟ್ರೀಯ ಜಲ ನೀತಿ ರೂಪಿಸಬೇಕಾದ ಅಗತ್ಯವಿದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.

ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ “ನದಿಗಳನ್ನು ರಕ್ಷಿಸಿ’ ರಾಷ್ಟ್ರಯಾತ್ರೆ ಕೈಗೊಂಡಿರುವ ಸದ್ಗುರು, ಶುಕ್ರವಾರ
ಮೈಸೂರು ತಾಲೂಕಿನ ಮೀನಾಕ್ಷಿಪುರದಲ್ಲಿ ಕೆಆರ್‌ಎಸ್‌ ಜಲಾಶಯದ ಹಿನ್ನೀರಿಗೆ ಬಾಗಿನ ಅರ್ಪಿಸಿದ ನಂತರ ನಡೆದ
ಕರ್ನಾಟಕ-ತಮಿಳುನಾಡು ರೈತರನ್ನೊಳಗೊಂಡ ಕಾವೇರಿ ನದಿ ತೀರದ ರೈತರ ಸಭೆಯಲ್ಲಿ ಮಾತನಾಡಿದರು.

ತಮಿಳುನಾಡು ಕೃಷಿ ವಿವಿಯ ವಿಜ್ಞಾನಿಗಳು ಸೇರಿ ಸುಮಾರು 27 ಮಂದಿ ಜಲ ಮತ್ತು ಪರಿಸರ ವಿಜಾnನಿಗಳ ಜತೆ ಚರ್ಚಿಸಿ ನಮ್ಮ ಜಲನೀತಿ ಹೇಗಿರಬೇಕೆಂಬ ಕರಡು ಸಿದಟಛಿಪಡಿಸಲಾಗುತ್ತಿದೆ. ಅಕ್ಟೋಬರ್‌ 2ರಂದು ದೆಹಲಿಯಲ್ಲಿ
ನಮ್ಮ ರಾಷ್ಟ್ರಯಾತ್ರೆ ಸಂಪನ್ನಗೊಳ್ಳುವ ದಿನ ಕರಡು ನೀತಿಯನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು.

ನದಿ ನೀರು ಹಂಚಿಕೊಳ್ಳುವುದಷ್ಟೆ ಜಲ ನೀತಿಯಲ್ಲ. ನದಿಗಳಲ್ಲಿ ಎಷ್ಟು ನೀರು ಇರಬೇಕು ಎಂಬುದು ಕೂಡ ನೀತಿಯೇ ಎಂದು ಪ್ರತಿಪಾದಿಸಿದ ಅವರು, ಕಾವೇರಿ ಕೊಳ್ಳದ ರಾಜ್ಯಗಳ ಜನತೆ ಈ ವಿಷಯದಲ್ಲಿ ಭಾವನಾತ್ಮಕವಾಗಿ ಹೆಚ್ಚು ಮಾತನಾಡುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಜಗಳಗಳಾಗುತ್ತಿವೆ.

ಜಗಳಗಳಾಗುವುದರಿಂದ ರಕ್ತ ಹರಿಯುತ್ತದೆಯೇ ಹೊರತು, ನೀರು ಹರಿಯುವುದಿಲ್ಲ. ನಮಗೆಷ್ಟು- ನಿಮಗೆಷ್ಟು ಅನ್ನುವ
ಬದಲು, 50 ವರ್ಷಗಳ ಹಿಂದೆ ಕಾವೇರಿಯಲ್ಲಿ ಎಷ್ಟು ನೀರಿತ್ತು ಎಂದು ತಿಳಿದುಕೊಂಡರೆ ಜಗಳ ಬರಲ್ಲ. ಇದಕ್ಕಾಗಿ ಕಾವೇರಿ ನದಿ ಪಾತ್ರದ ರೈತರ ಸಂಘ ರಚನೆ ಮಾಡಿ, ನೀರು ಹಂಚಿಕೆ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು. ಅಣ್ಣ-ತಮ್ಮಂದಿರ ನಡುವೆಯೇ ಆಸ್ತಿಗಾಗಿ ಜಗಳವಾಗುತ್ತೆ. ಕಾವೇರಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಕರ್ನಾಟಕ-ತಮಿಳುನಾಡು ಮಧ್ಯೆ ಜಗಳವಾಗುತ್ತಿದೆ. ನದಿಯಲ್ಲಿ ನೀರು ಹೆಚ್ಚು ಹರಿದರೆ ಜಗಳವೇ ಆಗಲ್ಲ ಎಂದರು. ದೇಶದ 16 ರಾಜ್ಯಗಳಲ್ಲಿ ವ್ಯವಸಾಯವೇ ಪ್ರಧಾನವಾಗಿರುವುದರಿಂದ ನದಿಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ ಎಂದು ಹೇಳಿದರು.

ನದಿಗಳನ್ನು ರಕ್ಷಿಸಿ ಆಂದೋಲನದ ಭಾಗವಾಗಿ ಸಾರ್ವಜನಿಕರು 8000980009ಗೆ ಮಿಸ್ಡ್ ಕಾಲ್‌ಕೊಡುವ ಮೂಲಕ ಆಂದೋಲನಕ್ಕೆ ಬೆಂಬಲ ಸೂಚಿಸುವಂತೆ ಕೋರಲಾಗಿತ್ತು, ನಮ್ಮ ನಿರೀಕ್ಷೆಗೂ ಮೀರಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಬರುತ್ತಿದ್ದು, ಪ್ರತಿ ನಿತ್ಯ 2-3 ಲಕ್ಷ ಮಿಸ್ಡ್ಕಾಲ್‌ ಬರುತ್ತಿದೆ.
– ಸದ್ಗುರು ಜಗ್ಗಿ ವಾಸುದೇವ್‌

ಟಾಪ್ ನ್ಯೂಸ್

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.