ವೈಚಕುರಹಳ್ಳಿ ಪ್ರಥಮ ಹೊಗೆರಹಿತ ಗ್ರಾಮ
Team Udayavani, Sep 9, 2017, 11:28 AM IST
ಬೆಂಗಳೂರು: ದೇಶದ ಮೊಟ್ಟ ಮೊದಲ ಹೊಗೆರಹಿತ ಗ್ರಾಮದ ಖ್ಯಾತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ “ವೈಚಕುರಹಳ್ಳಿ’ ಸೇರುವ ಮೂಲಕ 2017ರ ಲಿಮ್ಕಾ ದಾಖಲೆಗೆ ಪ್ರವೇಶಿಸಿದೆ. ಗ್ರಾಮದ ಪ್ರತಿ ಮನೆಯಲ್ಲಿ ಅಡುಗೆ ಮಾಡಲು ಸೌದೆ ಅಥವಾ ಇನ್ನಿತರ ವಸ್ತುಗಳ ಬಳಕೆಗೆ ಬದಲಾಗಿ ಶೇ.100ರಷ್ಟು ಎಲ್‌ಪಿಜಿ ಇಂಧನ ಬಳಸುತ್ತಿರುವುದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಲು ಕಾರಣವಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ., (ಐಒಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ರಾಜ್ಯ ಸಂಯೋ ಜಕ (ಆಯಿಲ್ ಇಂಡಸ್ಟ್ರಿ) ಎಸ್. ವರದಾಚಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಜೀವನ ಮಟ್ಟ ಸುಧಾರಣೆಗೆ ಈ ದಾಖಲೆ ನಮಗೆ ಮತ್ತಷ್ಟು ಪ್ರೇರಣೆ ನೀಡಿದೆ. ವೈಚಕುರ ಹಳ್ಳಿ ಗ್ರಾಮದ ಎಲ್ಲ 274 ಮನೆಗಳು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯಡಿ ಸಂಪೂರ್ಣ ವಾಗಿ ಎಲ್‌ಪಿಜಿ ಬಳಸುವ ಮೂಲಕ ಹೊಗೆರಹಿತ ಗ್ರಾಮವಾಗಿಸಿರುವುದು ಸಂತಸ ತಂದಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಗ್ರಾಮವನ್ನು 2015ರ ಡಿ.8ರಂದೇ ದೇಶದ ಹೊಗೆರಹಿತ ಗ್ರಾಮ ಎಂದು ಘೋಷಿಸಿತ್ತು. ಈಗ 2017ರ ಲಿಮ್ಕಾ ಬುಕ್ ಆಫ್ ರೆಕಾಡ್ಸ್‌ಗೆ ಸೇರಿದ ಸಾಧನೆ ಗಾಗಿ ಇಂಡಿಯನ್ ಆಯಿಲ್ ಪರ ವಾಗಿ ಕರ್ನಾಟಕದಲ್ಲಿರುವ ಪ್ರತಿಯೊ ಬ್ಬರಿಗೂ, ಪ್ರಮುಖವಾಗಿ ವೈಚಕುರ ಹಳ್ಳಿಯ ಗ್ರಾಮಸ್ಥರಿಗೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.