ಕೆರೆ ನೀರು ಕಲುಷಿತ: ಹೆಚ್ಚಿದ ದುರ್ಗಂಧ
Team Udayavani, Sep 9, 2017, 11:28 AM IST
ಕೆ.ಆರ್.ಪುರ: ದೊಡ್ಡನೆಕ್ಕುಂದಿ ಕೆರೆಗೆ ರಾಸಾಯನಿಕ ಮಿಶ್ರಿತ ನೀರು ಸೇರಿ ಸಾವಿರಾರು ಮೀನುಗಳು ಹಾಗೂ ಜಲಚರಗಳು ಸಾವಿಗೀಡಾಗಿದ್ದು, ಕೆರೆ ಸುತ್ತ ದುರ್ನಾತ ಹೆಚ್ಚಿದೆ.
ಕಗ್ಗದಾಸಪುರ, ವಿಭೂತಿಪುರ, ವಿಜ್ಞಾನನಗರ, ಎಚ್ಎಎಲ್ ಸೇರಿದಂತೆ ಸುತ್ತಲ ಪ್ರದೇಶಗಳಲ್ಲಿನ ಬಹುತೇಕ ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಹಾಗೂ ಕಾರ್ಖಾನೆಗಳ ರಸಾಯನಿಕ ಮಿಶ್ರಿತ ನೀರು ದೊಡ್ಡನೆಕ್ಕುಂದಿ ಕೆರೆ ಸೇರುತ್ತಿದ್ದು, ಕರೆ ನೀರು ಕಲುಶಿತಗೊಂಡಿದೆ. ಇದರಿಂದ ಕೆರೆಯಲ್ಲಿ ಸಾಕಿದ್ದ ಸಾವಿರಾರು ಮೀನುಗಳು ಮೃತಪಟ್ಟಿದ್ದು, ಮೀನುಗಾರರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.
ಕೆರೆಗೆ ಕೊಳಚೆ ನೀರು ಸೇರದಂತೆ ಕೋಟ್ಯಾಂತರ ರೂ. ವೆಚ್ಚದಲ್ಲಿ ಪ್ರತ್ಯೇಕ ಕಾಲುವೆ ನಿರ್ಮಿಸಲಾಗಿದೆ. ಆದರೆ ಕಾಲುವೆ ನಿರ್ಮಾಣ ಅವೈಜ್ಞಾನಿಕವಾಗಿರುವ ಕಾರಣ ಕೊಳಚೆ ನೀರು ಕೆರೆಗೆ ಸೇರುವುದು ನಿಂತಿಲ್ಲ ಎಂಬುದು ಸ್ಥಳೀಯರ ಆರೋಪ. ನಾಗರಿಕರ ವಾಯೂವಿಹಾರಕ್ಕೆ ಪೂರಕವಾಗಿ ಕೆರೆಯಂಗಳದಲ್ಲಿ ವಾಕಿಂಗ್ ಟ್ರ್ಯಾಕ್, ಐಲ್ಯಾಂಡ್ ನಿರ್ಮಾಣ ಮಾಡಲಾಗಿದೆ.
ಆದರೆ ಕೆರೆ ಕಲುಷಿತಗೊಂಡಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಇದರೊಂದಿಗೆ ಮೀನುಗಳು ಕೊಳೆತು, ದುರ್ವಾಸನೆ ಬೀರುತ್ತಿರುವುದರಿಂದ ಸಾಂಕ್ರಮಿಕ ರೋಗ ಹರುಡುವ ಭೀತಿ ಕೂಡ ಎದುರಾಗಿದೆ. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.