ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಬೆಳೆಸುವುದು ಅಗತ್ಯ
Team Udayavani, Sep 9, 2017, 12:12 PM IST
ಬಸವಕಲ್ಯಾಣ: ಶಿಕ್ಷಣದೊಂದಿಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಗಮನ ಹರಿಸಬೇಕು ಎಂದು ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಹೇಳಿದರು.
ಅನುಭವ ಮಂಟಪ ಪರಿಸರದಲ್ಲಿ ವಿಶ್ವಬಸವಧರ್ಮ ಟ್ರಸ್ಟ್, ಅನುಭವ ಮಂಟಪ ಮತ್ತು ಬಸವಕಲ್ಯಾಣ ಅಭಿವೃದ್ಧಿ
ಮಂಡಳಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶರಣ ಕಮ್ಮಟ ಮತ್ತು ಅನುಭವ ಮಂಟಪ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂಥ
ಶಿಬಿರಗಳು ಪೂರಕವಾಗುತ್ತವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರನ ಡಾ|ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲಿಯೂ ಪ್ರತಿಭೆ ಇರುತ್ತದೆ. ಪ್ರತಿಭೆ ಹೊರತರಲು ವೇದಿಕೆ ಅಗತ್ಯವಿರುತ್ತದೆ. ಇದಕ್ಕೆ ವೇದಿಕೆ ಕಲ್ಪಿಸುವ ಜತೆಗೆ ಮಕ್ಕಳ ಸರ್ವಾಂಗೀಣ ಪ್ರಗತಿಯ ದೃಷ್ಟಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಬಿರ ಆಯೋಜಿಸಿರುವುದು ಸಂತಸ ತಂದಿದೆ
ಎಂದರು.
ಬಸವಗುರು ಪೂಜೆ ನೆರವೇರಿಸಿದ ಬಿಜೆಪಿ ಮುಖಂಡ ವಿಜಯಕುಮಾರ ಮಂಠಾಳೆ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಜ್ಞಾನಗಂಗೆ ಸಂಸ್ಥೆಯಿಂದ ಬಹುಮಾನ ನೀಡುವದಾಗಿ ಪ್ರಕಟಿಸಿದರು. ಪ್ರಥಮ 5100 ರೂ., ದ್ವಿತೀಯ 3100 ರೂ. ಹಾಗೂ ತೃತೀಯ ಬಹುಮಾನ 2100 ರೂ. ನೀಡಲಾಗುವದು ಎಂದು ಪ್ರಕಟಿಸಿದರು.
ಸಾನ್ನಿಧ್ಯ ವಹಿಸಿದ್ದ ಡಾ| ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಶಾಲೆ ಶಿಕ್ಷಣದ ಜತೆಗೆ ಜೀವನ ಶಿಕ್ಷಣ ಸೀಗಬೇಕೆಂದು ಶಿಬಿರ ಏರ್ಪಡಿಸಲಾಗಿದೆ.
ಮೂರು ದಿನದ ಶಿಬಿರದಲ್ಲಿ ಹಲವಾರು ಪೂಜ್ಯರು, ಅನುಭವಿಗಳು ಮಾರ್ಗದರ್ಶನ ಮಾಡಲಿದ್ದಾರೆ. ವಿದ್ಯಾರ್ಥಿಗಳು
ಸದುಪಯೋಗ ಪಡೆಯಬೇಕು. ಈ ಶಿಬಿರದಲ್ಲಿ ಸೇವೆ, ಇಷ್ಟಲಿಂಗದ ವೈಜ್ಞಾನಿಕತೆ, ಪಂಚಾಚಾರ , ಷಟ್‌ಸ್ಥಲ, ಶಿಸ್ತು ಸ್ವತ್ಛತೆ ಮತ್ತು ಉತ್ಸಾಹ, ಆತ್ಮವಿಶ್ವಾಸ, ನೈತಿಕ ಶಿಕ್ಷಣ, ಅಷ್ಟಾವರಣ, ದೇಶಭಕ್ತಿ ಹೀಗೆ ಹಲವು
ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ ಮಾತನಾಡಿದರು. ಇದೇ ವೇಳೆ ಚೆನ್ನೈ ಶಾಂತಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಹುಲಸೂರನ ಡಾ| ಶಿವಾನಂದ ಮಹಾಸ್ವಾಮೀಜಿ ಹಾಗೂ ಗುವಿವಿಯಿಂದ ಡಾಕ್ಟರೇಟ್ ಪಡೆದ ಕಸಾಪ ತಾಲೂಕು ಅಧ್ಯಕ್ಷ ಡಾ| ರುದ್ರಮಣಿ ಮಠಪತಿ ಅವರನ್ನು ಸನ್ಮಾನಿಸಲಾಯಿತು. ಡಾ| ಎಸ್.ಬಿ. ದುರ್ಗೆ
ಸ್ವಾಗತಿಸಿದರು. ಶಿವಶಂಕರ ಹಡಪದ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.