ಸ್ವಯಂ ಉದ್ಯೋಗಿಯಾಗಲು ಯುವಕರಿಗೆ ಭೂಸನೂರ ಸಲಹೆ
Team Udayavani, Sep 9, 2017, 3:31 PM IST
ಸಿಂದಗಿ: ಯುವಕರು ಶಿಕ್ಷಣ ಕಲಿಕೆಯೊಂದಿಗೆ ತಮ್ಮಲ್ಲಿರುವ ಕೌಶಲ್ಯದಿಂದ ಸ್ವಯಂ ಉದ್ಯೋಗ ಹೊಂದಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಶುಕ್ರವಾರ ಪಟ್ಟಣದ ತಾಪಂ ಆವರಣದಲ್ಲಿ ಜಿಪಂ, ತಾಪಂ ವತಿಯಿಂದ ದೀನ್ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಹಮ್ಮಿಕೊಂಡ ತಾಲೂಕು ಮಟ್ಟದ ಕೌಶಲ್ಯ ತರಬೇತಿಗಾಗಿ ಅಭ್ಯರ್ಥಿಗಳನ್ನು ಒಗ್ಗೂಡಿಸುವಿಕೆ ಮತ್ತು ಉದ್ಯೋಗ ಮೇಳ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಸರಕಾರದಿಂದ ಉದ್ಯೋಗ ಸಿಗುವುದು ಸಾಧ್ಯವಿಲ್ಲ. ಆದ್ದರಿಂದ ಯುವಕ, ಯುವತಿಯರು ತಮ್ಮಲ್ಲಿರುವ ಕೌಶಲ್ಯಬಗ್ಗೆ ಅರಿತುಕೊಳ್ಳಬೇಕು. ಸರಕಾರದಿಂದ ಸಿಗುವ ಸೌಲ್ಯಗಳ ಸದುಪಯೋಗ ಪಡೆಸಿಕೊಂಡು ಉದ್ಯೋಗ ಪ್ರಾರಂಭಿಸಬೇಕು. ನೀವು ಉದ್ಯೋಗ ಮಾಡುವ ಜೊತೆಗೆ ಇತರರಿಗೂ ಉದ್ಯೋಗ ದೊರಕಿಸುವ ಕಾರ್ಯಮಾಡಲು
ಮುಂದಾಗಬೇಕು ಎಂದರು.
ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಪ್ರತಿಭಾವಂತರು, ಪ್ರಾಮಾಣಿಕರು, ಶ್ರಮಜೀವಿಗಳು ಆದರೇ ಅವರಲ್ಲಿ ಸಂದರ್ಶನ ನೀಡುವ ಕೌಶಲ್ಯದಕೊರತೆಯಿಂದ ಉದ್ಯೋಗ ಪಡೆಯುವಲ್ಲಿ ಹಿಂದೆ ಬಿಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿರುದ್ಯೋಗ ಹೋಗಲಾಡಿಸಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೌಶಲ್ಯ ತರಬೇತಿ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಿದಂತೆ ಸಿಂದಗಿ ತಾಲೂಕಿನ ಯುವಕ, ಯುವತಿಯರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಉದ್ಯೋಗ ಮೇಳ ಅತ್ಯಂತರ ಯಶಸ್ವಿಯಾಯಿತು. ಈ ಮೇಳದ ಸದುಪಯೋಗವನ್ನು ಸಾವಿರಾರು ಯುವಕ, ಯುವತಿಯರು ಪಡೆದುಕೊಂಡಿದ್ದಾರೆ ಎಂದರು.
ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಮಾತನಾಡಿ, ಯುವಕರನ್ನು ನೀರುದ್ಯೋಗಿಗಳಾಗಬಾರದು ಎಂದು ಅವರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವಕಾಶಗಳನ್ನು ನೀಡಲು ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಲು ಯುವಕರು ಮುಂದಾಗಬೇಕು. ಸರಕಾರಿ ನೌಕರಿ ಒಂದೇ ನೌಕರಿಯಲ್ಲ. ಉದ್ಯೋಗ ಮಾಡುವುದು ಒಂದು ನೌಕರಿ. ಸ್ವಯಂ ಉದ್ಯೋಗ ಮಾಡುವುದರಿಂದ ನೀವು ಕೆಲಸ ಮಾಡುವ
ಜೊತೆಗೆ ಇತರರಿಗೂ ಕೆಸಲ ನೀಡಿದ ಹಾಗೇ ಆಗುತ್ತದೆ ಎಂದರು.
ವಿಜಯಪೂರದ ರೂಡ್‌ಶೇಡ್‌ದ ರಮೇಶ ಅವರು ಮಾತನಾಡಿದರು. ತಾಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಕಾರ್ಯನಿರ್ವಾಹಕ ಅಧಿಕಾರಿ ಬಿ.ಡಿ.ಬಾಲರೆಡ್ಡಿ, ಜಿಲ್ಲಾ ಪಂಚಾಯತಿ ಇಲಾಖೆಯ ಸಿ.ಬಿ.ಕುಂಬಾರ, ಅಂಬಣ್ಣ ,
ಎಪಿಎಂಸಿ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ ಅವರು ವೇದಿಕೆ ಮೇಲೆ ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳ ಪ್ರತಿನಿಧಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಯುವಕ, ಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿದರು.
ತಾಪಂ ಸದಸ್ಯ ಶ್ರೀಶೈಲ ಚಳ್ಳಗಿ, ಸಂತೋಷ ಪಾಟೀಲ ಡಂಬಳ, ಬಸವರಾಜ ಸಜ್ಜನ ಇದ್ದರು. ಭಾರತಿ ಹೊಸಮನಿ ಪ್ರಾರ್ಥನೆ ಹಾಡಿದರು. ರಾಜಶೇಖರ ಹಿರೇಕುರಬರ ಸ್ವಾಗತಿಸಿದರು. ಜಗದೀಶ ಸಿಂಗೆ ನಿರೂಪಿಸಿದರು. ಕ್ರೀಡಾಧಿಕಾರಿ ಈಶ್ವರಕುಮಾರ ಲಕ್ಕೊಂಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.