ಪುಟ್ಟ ಕೈಗಳಲ್ಲಿ ಅರಳುವ ಭಿತ್ತಿ ಚಿತ್ರಕಲೆ


Team Udayavani, Sep 10, 2017, 7:05 AM IST

bitti-chitra.jpg

ತಮ್ಮನ ಮನೆಯೊಳಗೆ ಕಾಲಿಟ್ಟ ತಕ್ಷಣ ಕಂಡಿದ್ದು ಅಲ್ಲಿನ ಎಲ್ಲಾ ಗೋಡೆಗಳಲ್ಲೂ ರಾರಾಜಿಸುತ್ತಿದ್ದ  ವಿವಿಧ ಚಿತ್ತಾರಗಳು. ಆ ಬರಹಗಳ ಒಡೆಯ ನಮ್ಮ ಪುಟ್ಟ ಅಳಿಯ ಅದ್ವಿಕ್‌. ತನಗೆ ಎಟಕುವ ಮಟ್ಟದ ಗೋಡೆಯಲ್ಲಿ  ವಿವಿಧ ವೃತ್ತಗಳು, ಗೆರೆಗಳು, ಕೆಲವು ಅಕ್ಷರಗಳು ಇತ್ಯಾದಿ ಮೂಡಿಸಿದ್ದ. ನನ್ನ ಮಗನೂ ತನ್ನ 4-5 ರ ವಯಸ್ಸಿನಲ್ಲಿ ಮನೆಯ ಗೋಡೆಯಲ್ಲಿ ಪೆನ್ಸಿಲ್‌, ಪೆನ್‌, ಕ್ರೇಯಾನ್‌ಗಳಲ್ಲಿ  ಗೀಚುತ್ತಿದ್ದ.

ಮನೆಯ ಗೋಡೆಯ ಮೇಲೆ, ಮೂರು-ನಾಲ್ಕು ಅಡಿ ಎತ್ತರದ ವರೆಗೆ ಅಡ್ಡಾದಿಡ್ಡಿ ಗೆರೆಗಳು, ಬರಹಗಳು, ವೃತ್ತಗಳು ಹೀಗೆ ಅರ್ಥವಾಗದ ಚಿತ್ತಾರಗಳು ರಾರಾಜಿಸುತ್ತಿವೆಯೆಂದಾದರೆ, ಅದು ಆ ಮನೆಯ ಪುಟ್ಟ ಮಕ್ಕಳ ಗೋಡೆಬರಹವೆಂದು ಖಚಿತವಾಗಿ ಹೇಳಬಹುದು. ಮನೆಗೆ ತರಿಸುವ ವೃತ್ತಪತ್ರಿಕೆ, ಬಂದ ಆಮಂತ್ರಣ ಪತ್ರಿಕೆ, ಕೈಗೆ ಸಿಕ್ಕಿದ ಫೋನ್‌ ಬಿಲ್‌, ಅಕ್ಕ/ಆಣ್ಣಂದಿರ ಶಾಲಾಪುಸ್ತಕ, ಗೋಡೆಯಲ್ಲಿರುವ ಕ್ಯಾಲೆಂಡರ್‌ ಹೀಗೆ ಕೈಗೆ ಸಿಕ್ಕಿದ ಕಾಗದದ ಮೇಲೆ ಪೆನ್‌, ಪೆನ್ಸಿಲ್‌ ಅಥವಾ ಕ್ರೇಯಾನ್‌ ಬಣ್ಣದ ಗೆರೆ ಮೂಡಿಸುವುದರಲ್ಲಿ ಮಕ್ಕಳಿಗೆ ಅಪರಿಮಿತ ಸಂತೋಷ. ಕೆಲವು ಮಕ್ಕಳು, ಚಿತ್ರ ಮಾಡಲೆಂದೇ ಡಿಸೈನ್‌ ಪುಸ್ತಕಗಳನ್ನು ತಂದರೂ, ಅದರಲ್ಲಿ ತತ್‌ಕ್ಷಣವೇ ಬಣ್ಣ ಹಚ್ಚಿ ಮುಗಿಸಿ ಪುನಃ ಗೋಡೆಬರಹಕ್ಕೆ ತಯಾರಾಗುತ್ತಾರೆ.

ಅಂಕಲ್‌ ನೋಡ್ತಾರೆ !
ಈ ಕಾರಣಕ್ಕೇ ಮಕ್ಕಳನ್ನು ಗದರಿಸುವವರೂ ಇ¨ªಾರೆ. “ರವಿವರ್ಮನ ಕುಂಚದ ಕಲೆ..ಭಲೇ’ ಅಂತ ಹಗುರಾಗಿ ನಕ್ಕು ಪ್ರೋತ್ಸಾಹಿಸುವುದೂ ಇದೆ. ಏನಾದರೂ ಗೀಚಲಿ, ಸುಮ್ಮನೇ ಹಠ ಮಾಡುತ್ತ, ರಚ್ಚೆ ಹಿಡಿದು ಅಳದಿದ್ದರೆ ಸಾಕು… ಮಗು ಸ್ವಲ್ಪ ದೊಡ್ಡದಾದ ಮೇಲೆ ಮನೆಗೆ ಪೈಂಟ್‌ ಹೊಡೆಸಿದರಾಯಿತು ಅಂತ ಮಗುವಿಗೆ ಸ್ವಾತಂತ್ರ್ಯ ಕಲ್ಪಿಸುವವರೂ ಇ¨ªಾರೆ. ಬಾಡಿಗೆ ಮನೆಯಲ್ಲಿ ವಾಸವಿರುವವರು, “ಇಷ್ಟು ಭಾಗದ ಗೋಡೆಯಲ್ಲಿ ಮಾತ್ರ ಚಿತ್ರ ಮಾಡು…ಇಡೀ ಮನೆಯ ಗೋಡೆಯಲ್ಲಿ ಬರೆದರೆ ಓನರ್‌ ಅಂಕಲ್‌ ನೋಡ್ತಾರೆ’ ಅಂತ ಹೆದರಿಸುವುದು ಒಂದು ತಂತ್ರವಾದರೆ, ಗೋಡೆಗೆ ದೊಡ್ಡದಾಗಿ ಕಪ್ಪು ಕಾನವಾಸ್‌ ಬಟ್ಟೆಯನ್ನೋ, ಬೈಂಡ್‌ ಪೇಪರನ್ನೋ ಅಂಟಿಸಿ ಮಗುವಿನ ಗೋಡೆಬರಹಕ್ಕೆ ಪರ್ಯಾಯ ಗೋಡೆ ಸೃಷ್ಟಿಸುವುದು ಇನ್ನೊಂದು ತಂತ್ರ. ಏನೇ ಮಾಡಿದರೂ, ಜಾಣ ಮಕ್ಕಳು ಸಾಮಾನ್ಯವಾಗಿ ತಮ್ಮ ಎರಡನೆಯ ವಯಸ್ಸಿನಿಂದ ಸುಮಾರು ಏಳೆಂಟು ವರ್ಷದ ವರೆಗೆ ತಮಗೆ ಇಷ್ಟಬಂದಂತೆ ಗೋಡೆಯಲ್ಲಿ ಬರೆಯುತ್ತಾರೆ.

ಮಕ್ಕಳಿಗೆ ಗೋಡೆಯಲ್ಲಿ ಬರೆಯಬೇಕೆನಿಸುವ ತುಡಿತಕ್ಕೆ ಮನಶಾಸ್ತ್ರೀಯ ಕಾರಣಗಳಿವೆಯಂತೆ. ಬಳಪ/ಪೆನ್ಸಿಲ್‌ ನಂತಹ ವಸ್ತುಗಳನ್ನು ಬೆರಳುಗಳ ಸಹಾಯದಿಂದ ಹಿಡಿದುಕೊಳ್ಳಲು ಕಲಿತೆನೆಂದು ಮಗುವಿಗೆ ಸಂತಸವಾಗುತ್ತದೆ. ಇದಕ್ಕೆ ಪೂರಕವಾಗಿ ಕೈಗಳ ಸ್ನಾಯು ಮತ್ತು ಮಿದುಳಿನ ಆದೇಶಗಳ ಸಂಯೋಜನೆ ಉಂಟಾದಾಗ ಸಂಭ್ರಮಿಸುತ್ತ, ತನ್ನ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿ ಪಡಿಸಲು ಅಯಾಚಿತವಾಗಿ ಕಾಣಸಿಗುವ ಗೋಡೆಯನ್ನೇ ಕಾನ್ವಾಸ್‌ ಪರದೆಯಂತೆ ಬಳಸುತ್ತದೆ. ಸಹಜವಾಗಿಯೇ ಆ ವಯಸ್ಸಿನಲ್ಲಿ ಗೋಡೆಯಲ್ಲಿ ಬರೆಯಬಾರದೆಂದೂ, ಅದನ್ನು ಅಳಿಸಲು ಆಗಬಹುದಾದ ಖರ್ಚು , ಪರಿಣಾಮಗಳನ್ನೂ ಮಗು ಅರ್ಥ ಮಾಡಿಕೊಳ್ಳುವುದಿಲ್ಲ. ಮಕ್ಕಳ ಕೋಮಲ ಮನಸ್ಸಿಗೆ ಘಾಸಿಯಾಗದಂತೆ ಇದನ್ನು ನಿಭಾಯಿಸಬೇಕಾದದ್ದು ಪಾಲಕರ ಕರ್ತವ್ಯ. 

ಶಿಲಾಯುಗದ ಕಾಲದಲ್ಲಿಯೂ ಮನುಷ್ಯನು ಪ್ರಥಮವಾಗಿ ಚಿತ್ರಗಳನ್ನು ಮೂಡಿಸಿದುದು ಗುಹೆಗಳ ಗೋಡೆಗಳ ಮೇಲೆ. ಇತ್ತೀಚೆಗೆ ಬಿಡುಗಡೆಯಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಲನಚಿತ್ರದಲ್ಲಿ ಮುಖ್ಯ ನಟರೊಬ್ಬರು, ಅಲ್ಜಿಮರ್‌ ಖಾಯಿಲೆಯಿಂದ ಸ್ಮರಣ ಶಕ್ತಿಯನ್ನು ಕಳೆದುಕೊಂಡು ಎಲ್ಲೋ ಅಲೆಯುತ್ತಿದ್ದ ತನ್ನ ತಂದೆಯನ್ನು ಹುಡುಕುವ ಸಂದರ್ಭದಲ್ಲಿ , ಆಕಸ್ಮಿಕವಾಗಿ, ಆ ತಂದೆಯೇ ಕಪಾಟಿನ ಮರೆಯಲ್ಲಿ ಜಾಣತನದಿಂದ ಸಂರಕ್ಷಿಸಿ ಇಟ್ಟಿದ್ದ ತನ್ನ ಬಾಲ್ಯದ ಗೋಡೆಬರಹವನ್ನು ಕಂಡಾಗ, ಭಾವುಕರಾಗುವ ದೃಶ್ಯವಿದೆ. 

ತಮಗೆ ತೋಚಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು. ಈಗೀಗ ಕೆಲವು  ಬರಹಾಸಕ್ತರು ತಮ್ಮ ನೆನಪುಗಳು, ಅವಿಸ್ಮರಣೀಯ ಘಟನೆಗಳು, ಅಡುಗೆಮನೆಯ ಹೊಸರುಚಿ, ಪ್ರವಾಸಾನುಭವಗಳು, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದನೆ, ಅಂದದ ಚಿತ್ರಗಳು….ಹೀಗೆ ವಿವಿಧ ದಿಕ್ಕುಗಳಲ್ಲಿ ಆಲೋಚನೆಯನ್ನು ಹರಿಯ ಬಿಟ್ಟು, ಅವುಗಳಿಗೆ ಅಕ್ಷರ ರೂಪ ಕೊಟ್ಟು ಫೇಸ್‌ ಬುಕ್‌ ‘ಗೋಡೆ’ಗೆ ತಗಲಿಸುವುದು ಸಾಮಾನ್ಯ. ಈ ವಯಸ್ಸಿನಲ್ಲೂ ನಾವು “ಗೋಡೆಬರಹ’ದ ಪ್ರಿಯರು’ ಎಂಬುದಕ್ಕೆ ಇದೇ ಸಾಕ್ಷಿ !

– ಹೇಮಮಾಲಾ ಬಿ.

ಟಾಪ್ ನ್ಯೂಸ್

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.