ಕೆಪಿಎಲ್: ಬಿಜಾಪುರ ಬುಲ್ಸ್‌ಗೆ ಕೂಟದಲ್ಲಿ ಮೊದಲ ಜಯಭೇರಿ
Team Udayavani, Sep 10, 2017, 7:50 AM IST
ಮೈಸೂರು: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಅಭಿಮನ್ಯು ಮಿಥುನ್ ಅವರ ಆಲ್‌ರೌಂಡ್ ಆಟದಿಂದ ಬಿಜಾಪುರ ಬುಲ್ಸ್ 6ನೇ ಆವೃತ್ತಿಯ ಕೆಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು. ಶನಿವಾರ ನಡೆದ ಕೆಪಿಎಲ್‌ನ ಮೊದಲ ಪಂದ್ಯದಲ್ಲಿ ಬಳ್ಳಾರಿ ಟಸ್ಕ್ರ್ಸ್ ತಂಡವನ್ನು 4 ವಿಕೆಟ್‌ಗಳ ಸೋಲಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ನಗರದ ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್ ಒಡೆಯರ್(ಗ್ಲೆàಡ್ಸ್) ಮೈದಾನದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತು. ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್ ನಾಯಕ ಭರತ್ ಚಿಪ್ಲಿ (63), ಎಂ.ನಿದೀಶ್ (ಅಜೇಯ 33) ಹಾಗೂ ಅಭಿಮನ್ಯು ಮಿಥುನ್ (ಅಜೇಯ 30) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 19.3 ಓವರ್‌ನಲ್ಲಿ 174 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಚಿಪ್ಲಿ ಉತ್ತಮ ಬ್ಯಾಟಿಂಗ್: ಎದುರಾಳಿ ತಂಡದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಬಿಜಾಪುರ ಬುಲ್ಸ್‌ಗೆ ಭರತ್ ಚಿಪ್ಲಿ ಆಸರೆಯಾದರು. ತಂಡದ ಪರ ಇನಿಂಗ್ಸ್ ಆರಂಭಿಸಿದ ನಾಯಕ ಚಿಪ್ಲಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆರಂಭದಿಂದಲೂ ಹೊಡಿಬಡಿ ಆಟವಾಡುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿದರು. ಕೇವಲ 35 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳಿಂದ 63 ರನ್‌ಗಳಿಸಿ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದರು. ಆದರೆ ಇನಿಂಗ್ಸ್‌ನ 10ನೇ ಓವರ್‌ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಭರತ್ ಚಿಪ್ಲಿ ತಂಡದ ಮೊತ್ತ 89 ರನ್‌ಗಳಿದ್ದಾಗ ಅನಿಲ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇವರ ನಿರ್ಗಮನದ ಬಳಿಕ ಬಂದ ಎಂ.ಜಿ.ನವೀನ್ (17), ಎಚ್.ಎಸ್.ಶರತ್ (5), ದಿಕ್ಷಾ$Ìಂಶು ನೇಗಿ (10) ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದ ಪರಿಣಾಮ ತಂಡ ಸೋಲಿನತ್ತ ಮುಖಮಾಡಿತ್ತು.
ಮಿಂಚಿದ ನಿದೀಶ್-ಮಿಥುನ್: ನಾಯಕ ಭರತ್ ಚಿಪ್ಲಿ ಅವರ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ತಂಡ ಬಿಜಾಪುರ ಬುಲ್ಸ್ 17ನೇ ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 119 ರನ್‌ಗಳಿಸಿತ್ತು. ಹೀಗಾಗಿ ಕಡೆಯ 3 ಓವರ್‌ನಲ್ಲಿ ಗೆಲುವಿಗಾಗಿ 53 ರನ್‌ಗಳಿಸಬೇಕಿತ್ತು. ಈ ವೇಳೆ 7ನೇ ವಿಕೆಟ್‌ಗೆ ಜತೆಯಾದ ಎಂ.ನಿದೀಶ್ (16 ಎಸೆತ, ಅಜೇಯ 33 ರನ್) ಹಾಗೂ ಅಭಿಮನ್ಯು ಮಿಥುನ್ (10 ಎಸೆತ, ಅಜೇಯ 30 ರನ್) ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಬ್ಬರು ಆಟಗಾರರು ಕೇವಲ 17 ಎಸೆತಗಳಲ್ಲಿ 55 ರನ್ ಸಿಡಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಇವರಿಬ್ಬರ ಜೊತೆಯಾಟದಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿ ಒಳಗೊಂಡಿತ್ತು. ಬಳ್ಳಾರಿ ಪರ ಜಹೂರ್ ಫರೂಕಿ 2 ವಿಕೆಟ್ ಪಡೆದರು.
ಬಳ್ಳಾರಿಗೆ ಗೌತಮ್ ಆಸರೆ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಳ್ಳಾರಿ ಟಸ್ಕರ್ಸ್ ಮೊದಲ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್‌ಗಳಿಸಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ ಸಿ.ಎಂ.ಗೌತಮ್ ಉತ್ತಮ ಆಟದ ಮೂಲಕ ತಂಡಕ್ಕೆ ನೆರವಾದರು. ನಿಗದಿತವಾಗಿ ಬೌಂಡರಿ, ಸಿಕ್ಸರ್ ಸಿಡಿಸುವ ಮೂಲಕ ತಂಡದ ರನ್ ವೇಗ ಹೆಚ್ಚಿಸಿದರು. ಕೊನೆಯ ಓವರ್‌ವರೆಗೂ ನೆಲಕಚ್ಚಿ ಆಡಿದ ಪವನ್ 20 ಓವರ್‌ಗಳಲ್ಲಿ 172 ರನ್‌ಗಳ ಸವಾಲಿನ ಮೊತ್ತ ದಾಖಲಿಸಲು ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಅಮಿತ್ ವರ್ಮಾ (46) ಸಹ ವೇಗವಾಗಿ ಆಡಿದ ತಂಡ ಮೊತ್ತ ಏರಲು ನೆರವಾದರು. ಇವರ ನಿಗರ್ಮನದ ಬಳಿಕ ಬಂದ ಅಭಿನವ್ ಮನೋಹರ್ (35) ಅವರು ಕೆ.ಬಿ.ಪವನ್ ಜತೆಗೂಡಿ ಅಂತಿಮ ಹಂತದಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಚಚ್ಚಿ ಅಬ್ಬರಿಸಿದರು. ಈ ಜೋಡಿ 5ನೇ ವಿಕೆಟ್‌ಗೆ 24 ಎಸೆತದಲ್ಲಿ 46 ರನ್‌ಗಳನ್ನು ಸೇರಿಸಿತು.
ಸಂಕ್ಷಿಪ್ತ ಸ್ಕೋರ್: ಬಳ್ಳಾರಿ ಟಸ್ಕರ್ಸ್ 20 ಓವರ್, 172ಕ್ಕೆ 6 (ಸಿ.ಎಂ.ಗೌತಮ್ 50, ಅಮಿತ್ ವರ್ಮಾ 46, ಅಭಿಮನ್ಯು ಮಿಥುನ್ 26ಕ್ಕೆ 2), ಬಿಜಾಪುರ ಬುಲ್ಸ್ 19.3 ಓವರ್‌ಗಳಲ್ಲಿ 174ಕ್ಕೆ 6 (ಭರತ್ ಚಿಪ್ಲಿ 63, ಎಂ.ನಿದೀಶ್ 33, ಅಭಿಮನ್ಯು ಮಿಥುನ್ 30, ಜಹೂರ್ ಫರೂಖೀ 41ಕ್ಕೆ 2)
ಕೆಪಿಎಲ್‌ನಲ್ಲೂ ಬೆಟ್ಟಿಂಗ್: ಐವರ ಬಂಧನ
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಟ್ಟಿಂಗ್ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡು ಸಮಸ್ಯೆಗೆ ಕಾರಣವಾಗಿದೆ. ಆ ಸಮಸ್ಯೆ ಅಲ್ಲಿಗೆ ಮಾತ್ರವಲ್ಲ ಕೆಪಿಎಲ್‌ಗೂ ಕಾಲಿಟ್ಟಿದೆ ಎನ್ನುವುದು ಇದೀಗ ಕಾರಣವಾಗಿದೆ. ಮೈಸೂರಿನ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಕೆಪಿಎಲ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಐವರು ಯುವಕರು ಬಂಧನಕ್ಕೊಳಗಾಗಿದ್ದಾರೆ.
ಶನಿವಾರ ಮಧ್ಯಾಹ್ನ ನಡೆದ ಬಳ್ಳಾರಿ ಟಸ್ಕರ್ಸ್ ಮತ್ತು ಬಿಜಾಪುರ ಬುಲ್ಸ್ ಪಂದ್ಯದ ವೇಳೆ ಮೈದಾನದಲ್ಲೇ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐದಕ್ಕೂ ಹೆಚ್ಚು ಮಂದಿಯನ್ನು ಸ್ಥಳದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಮೈಸೂರಿನಲ್ಲಿ ನಡೆದ ಕೆಪಿಎಲ್ ಪಂದ್ಯಾವಳಿ ವೇಳೆಯೂ ಮೈದಾನದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಐದಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
– ಸಿ. ದಿನೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಕರ್ನಾಟಕ ವಿರುದ್ಧ 218 ರನ್ ಹಿನ್ನಡೆಯಲ್ಲಿ ಚಂಡೀಗಢ
Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ
Australia vs Pakistan T20: ಪಾಕ್ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.