ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮರಣ: ಆರೋಪ
Team Udayavani, Sep 10, 2017, 3:40 PM IST
ಹುಣಸಗಿ: ಇಲ್ಲಿನ ಸರಕಾರಿ ವೈದ್ಯರ ನಿರ್ಲಕ್ಷದಿಂದ ನವಜಾತ ಶಿಶುವೊಂದು ಮೃತಪಟ್ಟಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ)ಯ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಶಿಶುವಿನ ಶವ ಸಮೇತ ಹುಣಸಗಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದ.ಸಂ. ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಲಕ್ಷ್ಮೀ
ನಿಂಗಪ್ಪ ಹೊಸಮನಿ ಎಂಬ ದಲಿತ ಮಹಿಳೆಯು ತನ್ನ ಎರಡನೇ ಹೆರಿಗೆಗಾಗಿ ತವರೂರು ಕಲ್ಲದೇವನಹಳ್ಳಿಗೆ ಆಗಮಿಸಿದ್ದರು. ಸೆ.7ರಂದು ರಾತ್ರಿ 9 ಗಂಟೆಗೆ ಹೆರಿಗೆಗಾಗಿ ಹುಣಸಗಿಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅಂದು ರಾತ್ರಿಯೇ ಅವರಿಗೆ ಸಹಜ ಹೆರಿಗೆಯು ಆಗಿದೆ. ಆದರೆ ಈ ಸಮಯದಲ್ಲಿ ಸರಕಾರಿ ವೈದ್ಯರು ಬಾಣಂತಿಯ ಹಾಗೂ ಮಗುವಿನ ಆರೋಗ್ಯದ ತಪಾಸಣೆ ನಡೆಸದೇ ನಿರ್ಲಕ್ಷé ತೋರಿದ್ದಾರೆ. ಹೀಗಾಗಿ ಸೆ. 8ರ ಮಧ್ಯಾಹ್ನದ ಬಳಿಕ ಶಿಶುವಿನ ಆರೋಗ್ಯದ ಸ್ಥಿತಿ ತೀರ ಹದೆಗೆಡುತ್ತ ಬಂದಿದೆ. ಆದರೂ ಸೂಕ್ತ ಚಿಕಿತ್ಸೆ ನೀಡದೆ ಉದಾಸೀನ ತೋರಿದ್ದಾರೆ. ನಂತರ ಚಿಕಿತ್ಸೆಗಾಗಿ ಬೇರೆ ಕಡೆಗೆ ಕರೆದೊಯ್ಯಲು ತಿಳಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ತಾಳೊಕೋಟೆಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಮಾರ್ಗ ಮಧ್ಯ ಶಿಶು ಮೃತಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ್ದ ಸುರಪುರ ಟಿಎಚ್‌ಒ ಡಾ|
ಆರ್.ವಿ. ನಾಯಕ ಅವರಿಗೆ ಸಲ್ಲಿಸಿದರು. ದ.ಸಂ. ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಹುಣಸಗಿ ಪೊಲೀಸ್
ಠಾಣೆಗೆ ತೆರಳಿ ಸರಕಾರಿ ವೈದ್ಯರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದರು.
ಸಂಘಟನೆ ಸುರಪುರ ತಾಲೂಕು ಸಂಚಾಲಕ ಶಿವಶಂಕರ್ ಹೊಸಮನಿ, ಸಂಚಾಲಕ ದೇವು ಕನ್ನೆಳ್ಳಿ, ದಲಿತ ಖಂಡರಾದ ಮಲ್ಲಣ್ಣ ಕಟ್ಟಿಮನಿ, ಮರಲಿಂಗಪ್ಪ ನಾಟೇಕಾರ್, ಪರಶುರಾಮ ದ್ಯಾಪೂರ್ ಹಾಗೂ ಜುಮ್ಮಣ್ಣ ಬಲಶೆಟ್ಟಿಹಾಳ್, ನಂದಕುಮಾರ್ ತಾಳಿಕೋಟೆ ಸೇರಿದಂತೆ ಅನೇಕ ಜನ ದ.ಸಂ. ಸ ಕಾರ್ಯಕರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.