ಮುಂಬೈನ ಅ-19 ತಂಡಕ್ಕೆ ಸಚಿನ್ ಪುತ್ರ ಅರ್ಜುನ್ ಆಯ್ಕೆ
Team Udayavani, Sep 11, 2017, 7:15 AM IST
ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬಯಿಯ 19 ವರ್ಷದೊಳಗಿನ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಅರ್ಜುನ್ ಮುಂಬಯಿಯ ಅಂಡರ್ 14 ಮತ್ತು ಅಂಡರ್16 ತಂಡದಲ್ಲಿ ಆಡಿದ ಅನುಭವ ಹೊಂದಿದ್ದರು.
ಸೆ.16ರಿಂದ ಸೆ.23ರವರೆಗೆ ಜೆವೈ ಲೆಲೆ ಅಖೀಲ ಭಾರತ ಅಂಡರ್ 19 ಏಕದಿನ ಸರಣಿ ಆರಂಭವಾಗಲಿದೆ. ಮುಂಬಯಿ ತಂಡ ಮೊದಲ ಪಂದ್ಯವನ್ನು ಬರೋಡ ವಿರುದ್ಧ ಆಡಲಿದೆ. ಎಡಗೈ ವೇಗದ ಬೌಲರ್ ಆಗಿರುವ ಅರ್ಜುನ್ ಇತ್ತೀಚೆಗೆ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ಅಭ್ಯಾಸ ನಡೆಸಿದ್ದರು. ಮಹಿಳಾ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಭಾರತದ ಆಟಗಾರ್ತಿಯರು ನೆಟ್ಸ್ ಅಭ್ಯಾಸ ನಡೆಸುವಾಗ ಅರ್ಜುನ್ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದರು. ಅದು ಮಾತ್ರವಲ್ಲ ಇಂಗ್ಲೆಂಡ್ ಬ್ಯಾಟ್ಸ್ಮನ್ ಜಾನಿ ಬೇರ್ಸ್ಟೋಗೆ ಅರ್ಜುನ್ ಯಾರ್ಕರ್ನಿಂದ ಗಾಯವಾಗಿ ದೊಡ್ಡ ಸುದ್ದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.