ಬ್ಯಾಡ್ಮಿಂಟನ್: ಭಾರತದ ನಂದಗೋಪಾಲ್ಗೆ ಅವಳಿ ಪ್ರಶಸ್ತಿ
Team Udayavani, Sep 11, 2017, 7:30 AM IST
ಖಾರ್ಕೀವ್ (ಉಕ್ರೈನ್): ಭಾರತದ ಪುರುಷರ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ಆಟಗಾರರು ಉಕ್ರೈನಿನ ಖಾರ್ಕೀವ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟದಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಕೆ. ನಂದಗೋಪಾಲ್ ಮತ್ತು ರೋಹನ್ ಕಪೂರ್ ಅವರು ಸ್ನೇಹಿತರಾದ ಫ್ರಾನ್ಸಿಸ್ ಅಲ್ವಿನ್ ಮತ್ತು ಕೋನ ತರುಣ್ ಅವರನ್ನು 18-21, 24-22, 21-18 ಗೇಮ್ಗಳಿಂದ ಉರುಳಿಸಿದರು. ಈ ಪಂದ್ಯ 55 ನಿಮಿಷಗಳವರೆಗೆ ಸಾಗಿತ್ತು.
ಮಿಕ್ಸೆಡ್ ಡಬಲ್ಸ್ನಲ್ಲಿ ಕೆ. ನಂದಗೋಪಾಲ್ ತನ್ನ ಎರಡನೇ ಪ್ರಶಸ್ತಿ ಗೆದ್ದರು. ಮಹಿಮಾ ಅಗರ್ವಾಲ್ ಜತೆಗೂಡಿ ಆಡಿದ ಅವರು ಅಗ್ರ ಶ್ರೇಯಾಂಕದ ಸೌರಬ್ ಶರ್ಮ ಮತ್ತು ಅನುಷ್ಕಾ ಪರೀಖ್ ಅವರನ್ನು 21-14, 21-15 ಗೇಮ್ಗಳಿಂದ ಕೇವಲ 30 ನಿಮಿಷಗಳಲ್ಲಿ ಉರುಳಿಸಿ ಆಘಾತಗೊಳಿಸಿದರು. ಆದರೆ ವನಿತೆಯರ ಸಿಂಗಲ್ಸ್ನಲ್ಲಿ ಭಾರತದ ಶ್ರೀಕೃಷ್ಣ ಪ್ರಿಯಾ ಕುದರವಲ್ಲಿ ಸ್ವಲ್ಪದರಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾದರು. ಮೂರನೇ ಶ್ರೇಯಾಂಕದ ಅವರು ಕಠಿನ ಹೋರಾಟ ನಡೆಸಿದರೂ ಅಂತಿಮವಾಗಿ ಸ್ಥಳೀಯ ಆಟಗಾರ್ತಿ ನಟಾಲ್ಯಾ ವಾಯ್ಟೆÕಕ್ ಅವರಿಗೆ 21-18, 16-21, 21-23 ಗೇಮ್ಗಳಿಂದ ಶರಣಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.