ಸತತ 6 ಸೋಲಿನ ಬಳಿಕ ಬುಲ್ಸ್‌ಗೆ ಜಯ
Team Udayavani, Sep 11, 2017, 7:40 AM IST
ಸೋನೆಪತ್ (ಹರ್ಯಾಣ): ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಸತತ 6 ಸೋಲುಗಳಿಂದ ಬಳಲಿದ್ದ ಬೆಂಗಳೂರು ಬುಲ್ಸ್ ಕೊನೆಗೂ ಜಯದ ಹಳಿಗೆ ಮರಳಿದೆ.
ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಬುಲ್ಸ್ 24-20 ರಿಂದ ಪುನೇರಿ ತಂಡವನ್ನು ಮಣಿಸಿತು. ಬೆಂಗಳೂರು ಗೆಲುವಿಗೆ ಕಾರಣವಾಗಿದ್ದು ಡಿಫೆಂಡರ್‌ಗಳ ಆಟ. ಅದರಲ್ಲೂ ಸುನೀಲ್ ಜೈಪಾಲ್ (4 ಅಂಕ), ಮಹೀಂದರ್ ಸಿಂಗ್ (4 ಅಂಕ) ಹಾಗೂ ಅಜಯ್ ಕುಮಾರ್ (3 ಅಂಕ) ಬುಲ್ಸ್ ಗೆಲುವಿನ ರೂವಾರಿಗಳು. ತಾರಾ ರೈಡರ್ ರೋಹಿತ್ ಕುಮಾರ್ ಮೊದಲ ಅವಧಿಯಲ್ಲಿ ಸಂಪೂರ್ಣ ವಿಫಲರಾದರೂ ಈ ಅವಧಿಯಲ್ಲಿ ಬುಲ್ಸ್ ರಕ್ಷಿಸಿದ್ದು ಡಿಫೆಂಡರ್‌ಗಳ ಆಟ. ಆದರೆ 2ನೇ ಅವಧಿಯಲ್ಲಿ ರೋಹಿತ್ (3 ಅಂಕ) ಮರಳಿ ಫಾರ್ಮ್ಗೆ ಬಂದಾಗ ಡಿಫೆಂಡರ್‌ಗಳ ಹೋರಾಟ ಮತ್ತಷ್ಟು ಬಲವಾಯಿತು. ಇದು ಬೆಂಗಳೂರು ಗೆಲುವಿಗೆ ಪ್ರಮುಖ ಕಾರಣವಾಯಿತು.
ಕೊನೆಗೆ ಚಾರ್ಚ್ ಆದ ಬೆಂಗಳೂರು:
ಮೊದಲ ಅವಧಿಯಲ್ಲಿ 8-10 ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು 2ನೇ ಅವಧಿಯ ಆರಂಭದಲ್ಲೇ ಸಿಡಿಯಲು ಶುರು ಮಾಡಿತು. ಫಾರ್ಮ್ ಕಳೆದುಕೊಂಡಿದ್ದ ಬುಲ್ಸ್‌ನ ರೈಡರ್ ರೋಹಿತ್ ಕುಮಾರ್ ಮತ್ತೆ ಚಾರ್ಜ್ ಆದರು. ಹೀಗಾಗಿ ಬೆಂಗಳೂರು 20-15 ರಿಂದ ಮುನ್ನಡೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲ ಇದೇ ಅಂತರವನ್ನು ಕೊನೆ ತನಕ ಕಾಪಾಡಿಕೊಂಡಿತು.
ಮೊದಲ ಅವಧಿಯಲ್ಲಿ ರೋಹಿತ್ ಶೂನ್ಯ:
ಇದಕ್ಕೂ ಮೊದಲು ಬೆಂಗಳೂರು ನಾಯಕ ರೋಹಿತ್ ಕುಮಾರ್ ಮೊದಲ ಅವಧಿಯ ಆಟದಲ್ಲಿ ಸಂಪೂರ್ಣ ವಿಫಲರಾದರು. ರೋಹಿತ್ ಒಟ್ಟಾರೆ ಮೊದಲ ಅವಧಿಯಲ್ಲಿ 6 ರೈಡಿಂಗ್ ಮಾಡಿದರು. 4 ರೈಡಿಂಗ್ ಔಟ್ ಹಾಗೂ 2 ರೈಡಿಂಗ್ ಅನ್ನು ವ್ಯರ್ಥ ಮಾಡಿದರು. ಇವರ ಅನುಪಸ್ಥಿತಿಯಲ್ಲಿ ಡಿಫೆಂಡರ್‌ಗಳಾದ ಸುನಿಲ್ ಜೈಪಾಲ್ ಟ್ಯಾಕಲ್‌ನಿಂದ ಅಂಕ ತಂದುಕೊಟ್ಟರು. ಇವರಿಗೆ ಮಹೀಂದರ್ ಹಾಗೂ ಅಜಯ್ ಕುಮಾರ್ ಟ್ಯಾಕಲ್ ಮೂಲಕ ಸಾಥ್ ನೀಡಿದರು.
ಪುನೇರಿ ಪಲ್ಟಾನ್ ಪಲ್ಟಿ:
ಕನ್ನಡಿಗ ಬಿ.ಸಿ.ರಮೇಶ್ ಗರಡಿಯಲ್ಲಿ ಪಳಗಿರುವ ಪುನೇರಿ ಪಲ್ಟಾನ್ ತಂಡ ಮೊದಲ ಅವಧಿಯಲ್ಲಿ 10-8ರಿಂದ ಮುನ್ನಡೆ ಹೊಂದಿತ್ತು. ಆದರೆ ನಂತರದ ಹಂತದಲ್ಲಿ ತಾರಾ ಆಟಗಾರರಾದ ದೀಪಕ್ ಹೂಡಾ (2 ಅಂಕ), ರಾಜೇಶ್ ಮೊಂದಲ್ (2 ಅಂಕ) ವಿಫಲರಾದರು. ಸ್ವಲ್ಪ ಮಟ್ಟಿಗೆ ಟ್ಯಾಕಲ್‌ನಲ್ಲಿ ಧರ್ಮರಾಜ್ ಚೆರಾÉಥನ್ (4 ಅಂಕ) ಹಾಗೂ ಸಂದೀಪ್ ನರ್ವಲ್ (3 ಅಂಕ) ಪುನೇರಿ ಗೆಲುವಿಗೆ ಪ್ರಯತ್ನ ನಡೆಸಿದರಾದರೂ ಅದು ಸಾಧ್ಯವಾಗಲಿಲ್ಲ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.