ಲಿಂಗಾಯತ ಮಹಾಸಮಾವೇಶ ಯಶಸ್ಸಿಗೆ ಸಿದ್ಧತೆ
Team Udayavani, Sep 11, 2017, 7:05 AM IST
ಕಲಬುರಗಿ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಸರ್ಕಾರದ ಸವಲತ್ತು ಪಡೆಯುವುದಕ್ಕಾಗಿ
ಸೆ. 24ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಮಹಾರ್ಯಾಲಿ -ಮಹಾಸಮಾವೇಶಕ್ಕೆ ಲಿಂಗಾಯತ ಧರ್ಮದಲ್ಲಿದ್ದುಕೊಂಡು ದೂರ ಉಳಿದವರೆಲ್ಲರನ್ನು ಒಗ್ಗೂಡಿಸಿ ಯಶಸ್ವಿ ಸಮಾವೇಶಕ್ಕೆ ಎಲ್ಲರೂ ಯತ್ನಿಸೋಣ ಹಾಗೂ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಕರೆ ನೀಡಿದರು.
ಭಾನುವಾರ ಶಹಾಬಜಾರ ಸುಲಫಲ ಮಠದಲ್ಲಿ ಲಿಂಗಾಯತ ಮಹಾ ಸಮಾವೇಶದ ಅಂಗವಾಗಿ ನಡೆದ ನಾಡಿನ ವಿವಿಧ ಮಠಾಧೀಶರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತಸ್ವತಂತ್ರ ಧರ್ಮವಾದಲ್ಲಿ ಸಿಗುವ ಸೌಲತ್ತುಗಳ ಕುರಿತು ಸಹೋದರರಿಗೆ ತಿಳಿಸಿ ಹೇಳಿ, ಅವರನ್ನು ಜತೆಗೆ ಕರೆಯುವ ನಿಟ್ಟಿನ ಪ್ರಮುಖ ಕಾರ್ಯ ನಮ್ಮಿಂದ ಹಾಗೂ ಮಠಾಧೀಶರಿಂದ ಆಗಬೇಕಿದೆ ಎಂದು ಹೇಳಿದರು.
ಲಿಂಗಾಯತಸ್ವತಂತ್ರ ಧರ್ಮ ಪಡೆಯಲು ನಮ್ಮಲ್ಲಿ ತತ್ವವಿದೆ. ಧರ್ಮದ ಮಾನ್ಯತೆಗಾಗಿ ಇರುವ ವಚನ ಸಾಹಿತ್ಯವಿದೆ. ಧರ್ಮಗ್ರಂಥ, ಧರ್ಮಗುರು ಎಲ್ಲವೂ ಇದೆ. ಹೀಗಾಗಿ ನಾಡಿನ ಮಠಾಧೀಶರು ತಮ್ಮ ಗ್ರಾಮಗಳಲ್ಲಿರುವ ಭಕ್ತರಿಗೆ
ತಿಳಿ ಹೇಳುವುದರ ಜತೆಗೆ ಸೆ. 24ರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯಿತರನ್ನು ಸೇರಿಸಲು ಶ್ರಮಿಸಬೇಕು ಎಂದರು.
ಈ ಸಮಾವೇಶಕ್ಕೆ ರಾಜ್ಯವಲ್ಲದೇ ದೇಶದ ವಿವಿಧ ಭಾಗಗಳ ಸಮಾಜದ ಮುಖಂಡರು, ಅಭಿಮಾನಿಗಳು
ಪಾಲ್ಗೊಳ್ಳಲಿದ್ದಾರೆ. ಜತೆಗೆ ಗದಗ ತೋಂಟದಾರ್ಯ,ನಾಗನೂರು, ಚಿತ್ರದುರ್ಗ ಶ್ರೀಗಳು ನಾಡಿನ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ನಮ್ಮೂರು ಜಾತ್ರೆ ಹಾಗೂ ಮನೆಯಲ್ಲಿ ಕಾರ್ಯಕ್ರಮ ಇದ್ದಾಗ ಹೇಗೆ ಜನರನ್ನು ಕರೆಯಿಸಿಕೊಳುತ್ತೇವೆಯೋ ಅದೇ ರೀತಿ ಸಮಾವೇಶಕ್ಕೂ ಜನರನ್ನು ಕರೆದುಕೊಂಡು ಬರಬೇಕೆಂಬ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.