ಉಡುಪಿ ರೈಲು ನಿಲ್ದಾಣದಲ್ಲಿ ಪತ್ತೆಯಾದ ಬಾಲಕ ಹೆತ್ತವರ ಮಡಿಲು ಸೇರಿದ
Team Udayavani, Sep 11, 2017, 8:05 AM IST
ಉಡುಪಿ: ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಸೆ. 1ರಂದು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕ ಹೆತ್ತವರ ಮಡಿಲಿಗೆ ಸೇರಿದ್ದಾರೆ.
ಬಾಲಕ ಕಾಣೆಯಾದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ವಿಷಯ ತಿಳಿದುಕೊಂಡು ಬಾಲಕನ ತಂದೆ ಹನುಮಂತಪ್ಪ ಅವರು ಬಾದಾಮಿಯಿಂದ ಉಡುಪಿಗೆ ಆಗಮಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಬಾಲಕನ ತಂದೆಗೆ ಬಾಲಕನನ್ನು ಹಸ್ತಾಂತರಿಸಿ¨ªಾರೆ. ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಅವರು ಬಾಲಕನನ್ನು ರಕ್ಷಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ದಾಖಲಿಸಿದ್ದರು.
ಸಾಲ ಮಾಡಿ ಬಂದೆ: ಬಾಲಕನನ ಹೆಸರು ಮುತ್ತಣ್ಣ. ಈತ ನನ್ನ ಒಬ್ಬನೇ ಮಗ. ಸಾಲ ಮಾಡಿ ಶಾಲೆಗೆ ಸೇರಿಸಿ¨ªೆ. ಹೇಳದೆ ಕೇಳದೆ ಊರು ಬಿಟ್ಟು ಬಂದಿ¨ªಾನೆ. ಮಗನ ಹುಡುಕಾಟದಲ್ಲಿ ತೋಡಗಿ¨ªೆ. ಸಾಲ ಮಾಡಿ ಉಡುಪಿಗೆ ಬಂದಿದ್ದೇನೆ ಎಂದು ಬಾಲಕನ ತಂದೆ ಹನುಮಂತಪ್ಪ ಅಳಲನ್ನು ತೋಡಿಕೊಂಡರು. ಅವರಿಗೆ ಸಮಾಜ ಸೇವಕ ವಿಶು ಶೆಟ್ಟಿ ಅವರು ಬಸ್ಸಿನ ಟಿಕೆಟು ದರ 1,000 ರೂ. ನೀಡಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.