ಸಿಎಜಿ ಪ್ರಧಾನ ನಿರ್ದೇಶಕಿ ವಿರುದ್ಧ ಸಿಬಿಐ ಎಫ್ಐಆರ್
Team Udayavani, Sep 11, 2017, 6:35 AM IST
ಬೆಂಗಳೂರು: ಸುಮಾರು 15 ವರ್ಷ ಹಿಂದೆ ಬೆಂಗಳೂರಿನ ಕಾಫಿ ಬೋರ್ಡ್‌ನಲ್ಲಿ ನಡೆದಿದ್ದ ಬೋರ್ಡ್‌ಗೆ ಸೇರಿದ ಕೋಟ್ಯಂತರ ರೂ. ಹೆಚ್ಚುವರಿ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಮರುಜೀವ ಬಂದಿದ್ದು, ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ಪ್ರಧಾನ ನಿರ್ದೇಶಕಿ ಶಾರದಾ ಸುಬ್ರಮಣಿಯಮ್ ಅವರಿಗೆ ಸಿಬಿಐ ತನಿಖೆಯ ಉರುಳು ಸುತ್ತಿಕೊಂಡಿದೆ.
1998ರಿಂದ 2003ರ ಅವಧಿಯಲ್ಲಿ ಕಾಫಿ ಬೋರ್ಡ್‌ನ ಹಣಕಾಸು ವಿಭಾಗದ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್ ಹಾಗೂ ಇತರೆ ಇಬ್ಬರು ಅಧಿಕಾರಿಗಳು ಕಾಫೀ ಬೋರ್ಡ್‌ನಲ್ಲಿದ್ದ 16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಬೋರ್ಡ್‌ನ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಲ್ಲದೆ, ಸ್ವಂತಕ್ಕೆ ಲಾಭ ಪಡೆದುಕೊಂಡ ಆರೋಪ ಸಂಬಂಧ ಸಿಬಿಐ ಐವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಈ ಕುರಿತು ದಾಖಲಾದ ದೂರಿನ ಅನ್ವಯ ಸಿಎಜಿ ಪ್ರಧಾನ ನಿರ್ದೇಶಕಿ ಶಾರದಾ ಸುಬ್ರಮಣಿಯಮ್, ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಯಾಗಿದ್ದ ಅವರ ಪತಿ ಸಂದೀಪ್ ದಾಸ್, ಕಾಫಿಬೋರ್ಡ್‌ನ ಅಂದಿನ ಹಣಕಾಸು ಅಧಿಕಾರಿಗಳಾದ ನಾಗರಾಜನ್ , ಜಿ.ಆನಂದ್, ಖಾಸಗಿ ಮ್ಯೂಚುವಲ್ ಫಂಡ್ ಕಂಪೆನಿಯ ಆಡಳಿತ ಪಾಲುದಾರ ಎಂ.ಗುರುರಾಜ್ ಎಂಬುವವರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ವಂಚನೆ (ಐಪಿಸಿ 420, 120 (ಬಿ) 409, 477 (ಎ)) ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿರುವ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಕಾಫೀಬೋರ್ಡ್‌ಗೆ 53.25 ಲಕ್ಷ ರೂ. ನಷ್ಟ !
ಕಾಫಿಬೋರ್ಡ್‌ನ ಅಂದಿನ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್ ಹಾಗೂ ಇತರೆ ಇಬ್ಬರು ಹಣಕಾಸು ವಿಭಾಗದ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ನಿಯಮಾವಳಿಗಳನ್ನು ಉಲ್ಲಂ ಸಿ ಬೋರ್ಡ್‌ನಲ್ಲಿದ್ದ 16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಪ್ರಕರಣದ ನಾಲ್ಕನೇ ಆರೋಪಿ ಗುರುರಾಜ್ ಆಡಳಿತ ಪಾಲುದಾರರಾಗಿರುವ ಗ್ರೀನ್ ಹೋಮ್ಸ್ ಇಂಡಿಯಾ ಅಂಡ್ ಪ್ರೊಪ್ರೈಟರ್, ಜಿ.ಎಸ್.ಪೈನಾನ್ಷಿಯಲ್ ಸರ್ವೀಸಸ್ ಕಂಪೆನಿ ಸೇರಿದಂತೆ ಇತರೆ ಕಂಪೆನಿಗಳ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರು. ಈ ಅಕ್ರಮಕ್ಕೆ ಶಾರದಾ ಅವರ ಪತಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂದಿನ ಆರ್ಥಿಕ ಸದಸ್ಯ ಸಂದೀಪ್ ದಾಸ್ ಸಾಥ್ ನೀಡಿದ್ದಾರೆ ಎಂದು ಸಿಬಿಐ ಶಂಕಿಸಿದೆ. ಈ ಅವ್ಯವಹಾರದಿಂದ ಕಾಫಿಬೋರ್ಡ್‌ನ ಬೊಕ್ಕಸಕ್ಕೆ ಅಧಿಕೃತವಾಗಿ 53.25 ಲಕ್ಷ ರೂ. ನಷ್ಟವುಂಟಾಗಿದೆ. ಅಲ್ಲದೆ, ಐವರೂ ಆರೋಪಿಗಳು ವೈಯಕ್ತಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸಂದೀಪ್ ದಾಸ್ ವಿರುದ್ಧ ಹಗರಣಗಳ ಸರಮಾಲೆ!
ಶಾರದಾ ಸುಬ್ರಮಣಿಯಮ್ ಪತಿ ಭಾರತೀಯ ಲೆಕ್ಕಪರಿಶೋಧನಾ ಸೇವೆ (ಐಸಿಎಎಸ್) ಅಧಿಕಾರಿಯಾಗಿರುವ ಸಂದೀಪ್ ದಾಸ್ ವಿರುದ್ಧ ಹಗರಣಗಳ ಸರಮಾಲೆಯೇ ಇದೆ. 1994ರಿಂದ 2004ರವರೆಗೆ ಬಿಡಿಎ ಆರ್ಥಿಕ ಸದಸ್ಯರಾಗಿದ್ದ ಸಂದೀಪ್ ದಾಸ್, ಬಿಡಿಎಯಲ್ಲಿದ್ದ 2000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿ ಅವ್ಯವಹಾರ ನಡೆಸಿದ್ದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಸಿಐಡಿ ಪೊಲೀಸರು, ಸಂದೀಪ್ ದಾಸ್‌ರನ್ನು 2015ರ ಆಗಸ್ಟ್‌ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಆರೋಪಿ ಸಂದೀಪ್ ದಾಸ್ ಸೇರಿದಂತೆ ಇನ್ನಿತರರ ವಿರುದ್ಧ ಕಳೆದ ಫೆಬ್ರವರಿ ಅಂತ್ಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಗಳ ನಡುವೆ ಕೆಂದ್ರ ಹಣಕಾಸು ಇಲಾಖೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್ ಅವರನ್ನು ಮೇ 5ರಂದು ಸೇವೆಯಿಂದ ವಜಾಗೊಳಿಸಲಾಗಿದೆ.
– ಮಂಜುನಥ್ ಲಗುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.