ಚೀನದಲ್ಲಿ ಮೋದಿಯನ್ನು ಸ್ವಾಗತಿಸಿದ್ದು ಮಂಗಳೂರಿನ ಯುವಕ !
Team Udayavani, Sep 11, 2017, 8:45 AM IST
ಮಂಗಳೂರು: ಭಾರತ ಸಹಿತ ಬ್ರೆಜಿಲ್, ರಷ್ಯಾ, ಚೀನ ಮತ್ತು ದಕ್ಷಿಣ ಆಫ್ರಿಕ ದೇಶಗಳ ಕೂಟ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಕ್ಕೆ ತೆರಳಿದ್ದ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿದ ಸ್ವಾಗತ ಅತ್ಯದ್ಭುತ. ಅಲ್ಲಿ ಸೇರಿದ್ದ ಎಲ್ಲರೂ ಮೋದಿ…ಮೋದಿ…ಎಂದು ಜೈಕಾರ ಹಾಕಿ ಬಹಳ ಹೆಮ್ಮೆಯಿಂದ ಅವರಿಗೆ ಸ್ವಾಗತ ನೀಡಿದ್ದರು. ವಿಶೇಷ ಅಂದರೆ ಮೋದಿಗೆ ಈ ರೀತಿ ಭವ್ಯ ಸ್ವಾಗತ ನೀಡಿದ ಭಾರತೀಯರ ತಂಡದಲ್ಲಿ ಮುಂಚೂಣಿಯಲ್ಲಿ ಇದ್ದವರು ಮಂಗಳೂರು ಮೂಲದ ಯುವಕ ಮೋಹನ್ ಕುಲಾಲ್ !
ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಪ್ರತಿ ದೇಶದ ಮುಖ್ಯಸ್ಥರನ್ನು ಸ್ವಾಗತಿಸಲು ಚೀನದಲ್ಲಿರುವ ಆಯಾ ದೇಶಗಳ ಪ್ರಜೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ರೀತಿಯಲ್ಲಿ ಮೋದಿಯವರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ ಕೆಲವೇ ಮಂದಿ ಭಾರತೀಯರ ಪೈಕಿ ಮೋಹನ್ ಕುಲಾಲ್ ಕೂಡ ಒಬ್ಬರು. ಚೀನದ ಕ್ಸಿಯಾಮೆನ್‌ನಲ್ಲಿ ಸೆ.3ರಂದು ಇವರು ಮೋದಿ ಅವರನ್ನು ಸ್ವಾಗತಿಸಿದ್ದರು.
ಅವಕಾಶ ಸಿಕ್ಕಿದ್ದು ಹೇಗೆ ?
ಮೂಲತಃ ಮಂಗಳೂರಿನ ಪಂಡಿತ್‌ಹೌಸ್ ನಿವಾಸಿಯಾಗಿರುವ ಮೋಹನ್ 4 ವರ್ಷಗಳಿಂದ ಚೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಬಾಕ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಎಂಬ ಭಾರತೀಯ ಮೂಲದ ಗಾರ್ಮೆಂಟ್ಸ್ ಕಂಪೆನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬ್ರಿಕ್ಸ್ ಸಮ್ಮೇಳನದ ಹಿನ್ನೆಲೆಯಲ್ಲಿ ಚೀನಕ್ಕೆ ಆಗಮಿಸುವ ಪ್ರಧಾನಿ ಅವರನ್ನು ಸ್ವಾಗತಿಸಲು ಕ್ಸಿಯಾಮೆನ್‌ನಲ್ಲಿರುವ ಭಾರತೀಯರಿಗೆ ಅವಕಾಶವಿದೆ. ಹೀಗಾಗಿ ನಿಮ್ಮ ದಾಖಲೆಗಳನ್ನು ನೀಡಿ ಎಂದು ಇವರ ಕಂಪೆನಿಗೆ ಚೀನದ ಭಾರತೀಯ ರಾಯಭಾರಿ ಕಚೇರಿಯಿಂದ ಕಳೆದ ಒಂದೂವರೆ ತಿಂಗಳ ಹಿಂದೆ ಇ-ಮೇಲ್ ಬಂದಿತ್ತು.
ಅದರಲ್ಲಿ ದಾಖಲೆ ಸಹಿತ ಅರ್ಜಿ ಸಲ್ಲಿಸಲು ತಿಳಿಸಿದ್ದರು. ಬಳಿಕ ಅನೇಕ ಬಾರಿ ಇತರ ದಾಖಲೆ ಪರಿಶೀಲನೆಗಾಗಿ ಕರೆಸಿದ್ದರು. ಈ ರೀತಿ ಕೆಲವು ಮಂದಿಗೆ ಮಾತ್ರ ಈ ಸದವಕಾಶ ಸಿಕ್ಕಿತ್ತು. ಹೊರ ದೇಶದಲ್ಲಿ ನೆಲೆಸಿದ್ದರು ಕೂಡ ತಮಗೆ ಈ ರೀತಿ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ಕೊಟ್ಟಿದೆ ಎನ್ನುವುದು ಮೋಹನ್ ಅವರ ನುಡಿ.
ಮೋದಿ ಏನು ಹೇಳಿದ್ದರು?
ಮೋದಿ ಅವರನ್ನು ಸ್ವಾಗತಿಸುವುದಕ್ಕೆ ಎಲ್ಲರೂ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದು ಕಾಯುತ್ತಿದ್ದರು. ಆಗ ಆಗಮಿಸಿದ ಮೋದಿ ಅಲ್ಲಿದ್ದವರ ಕೈ ಕುಲುಕಿ “ಹೇಗಿದ್ದೀರಿ’ ಎಂದು ಕೇಳುತ್ತಿದ್ದರು. ಮೋಹನ್ ಅವರಲ್ಲಿ ಕೂಡ ಮೋದಿ ಅವರು “ಹೇಗಿದ್ದೀರಿ, ಎಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೀರಾ’? ಎಂದು ಕೇಳಿದ್ದರು.
ಮೋದಿ ಅವರನ್ನು ಸ್ವಾಗತಿಸಲು ತೆರಳುವವರಿಗೆ ಮೊಬೈಲ್, ಕೆಮರಾ ತೆಗೆದುಕೊಂಡು ಹೋಗುವಂತಿರಲಿಲ್ಲ. ಅಲ್ಲಿಯ ಸರಕಾರಿ ಅಧಿಕಾರಿಗಳು, ಮಾಧ್ಯಮಗಳ ಕೆಮರಾಗಳ ಮೂಲಕ ಮೋದಿ ಜತೆ ಎಲ್ಲರೂ ಫೋಟೊ ತೆಗೆಸಿಕೊಂಡಿದ್ದರು. ಮೋದಿ ಚೀನಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಕಳೆದ ಎರಡು ತಿಂಗಳಿನಿಂದಲೇ ಚೀನದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.
“ನಿಮ್ಮ ಲೀಡರ್ ಬರುತ್ತಾರಲ್ಲವೇ, ನಿಮಗೆ ಹೋಗಲಿಕ್ಕಿದೆಯಾ’? ಎಂದು ನಮ್ಮ ಕಂಪೆನಿಗೆ ಆಗಮಿಸುವ ಚೀನದ ಗ್ರಾಹಕರು ಕೇಳುತ್ತಿದ್ದರು. ಜತೆಗೆ ಇಲ್ಲಿನ ಮಾಧ್ಯಮಗಳು ಕೂಡ ಪ್ರಧಾನಿ ಮೋದಿ ಆಗಮನದ ದೊಡ್ಡ ಸುದ್ದಿಯನ್ನು ಬಿತ್ತರಿಸುತ್ತಿದ್ದವು ಎಂದು ಮೋಹನ್ “ಉದಯವಾಣಿ’ಗೆ ತಿಳಿಸಿದ್ದಾರೆ.
ನಮಗೇನೂ ತೊಂದರೆ ಇಲ್ಲ
ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭ ಭಾರತ-ಚೀನ ಸಂಬಂಧ ಹದಗೆಟ್ಟಿದ್ದರೂ ನಮಗೇನೂ ತೊಂದರೆ ಆಗಿರಲಿಲ್ಲ. ಚೀನದಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಸಿರುವ ಮೋಹನ್ ಪ್ರಕಾರ ಅಲ್ಲಿನ ಪರಿಸ್ಥಿತಿಯೇ ಬಹಳ ಭಿನ್ನವಾಗಿದೆ. “ನಮಗೆ ಇಲ್ಲಿ ಯಾವ ತೊಂದರೆಯೂ ಇಲ್ಲ. ಈ ಮೊದಲಿನಂತೆ ಈಗಲೂ ಆರಾಮದಲ್ಲಿದ್ದೇವೆ. ಚೀನದವರು ಭಾರತೀಯರನ್ನು ಬಹಳ ಸಂತಸದಿಂದಲೇ ಮಾತನಾಡಿಸುತ್ತಿ¤ದ್ದಾರೆ. ಆದರೆ, ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ
ನಾನು ಗಮನಿಸಿದಂತೆ ಮೋದಿ ಅವರ ಕುರಿತು ಚೀನದವರಿಗೆ ಹೆದರಿಕೆಯಿದೆ’ ಎನ್ನುವುದು ಮೋಹನ್ ಅಭಿಪ್ರಾಯ.
ಹೆಮ್ಮೆಯ ವಿಚಾರ
ವಿದೇಶದಲ್ಲಿ ದುಡಿಯುತ್ತಿರುವ ನಮಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು, ಅವರ ಕೈ ಕುಲುಕಲು ಅವಕಾಶ ಸಿಕ್ಕಿರುವುದೇ ನಮ್ಮ ಹೆಮ್ಮೆ. ನಾನು ಭಾರತದಲ್ಲಿದ್ದರೆ ಇಂತಹ ಅವಕಾಶ ಇರುತ್ತಿರಲಿಲ್ಲ. ನಾವು ಭಾರತೀಯರು ಎಂದು ಹೆಮ್ಮೆಯಿಂದಲೇ ಇಲ್ಲಿ ಹೇಳಿಕೊಳ್ಳುತ್ತಿದ್ದೇವೆ. ನಾನು ಎಂಕಾಂ ಪದವೀಧರನಾಗಿದ್ದು, ದುಬಾೖಯಲ್ಲಿರುವ ಸ್ನೇಹಿತನ ಮೂಲಕ ಚೀನದಲ್ಲಿ ಉದ್ಯೋಗಿಯಾಗುವ ಅವಕಾಶ ಸಿಕ್ಕಿದೆ.
- ಮೋಹನ್ ಕುಲಾಲ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.