ಇನ್ನು ಅಪಾರ್ಟ್‌ಮೆಂಟ್ ಖರೀದಿದಾರರೂ ಟ್ರಸ್ಟಿ?
Team Udayavani, Sep 11, 2017, 8:20 AM IST
ಹೊಸದಿಲ್ಲಿ: ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮೊದಲು ಹಣ ನೀಡಿ ವಂಚನೆಗೆ ಒಳಗಾಗಿರುವವರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ಸುದ್ದಿ ಇಲ್ಲಿದೆ. ನಿಗದಿತ ಬಿಲ್ಡರ್ ಅಥವಾ ಅಪಾ ರ್ಟ್‌ಮೆಂಟ್ ನಿರ್ಮಾಣ ಸಂಸ್ಥೆ ತಾವು ದಿವಾಳಿಯಾಗಿರುವುದಾಗಿ ಹೇಳಿಕೊಂಡರೆ, ಆಗ ಖರೀದಿದಾರರ ಹೂಡಿಕೆ ನಷ್ಟವಾಗದಂತೆ ದಿವಾಳಿ ಕಾನೂನಿಗೆ ತಿದ್ದುಪಡಿ ತರಲು ಸರಕಾರ ಮುಂದಾಗಿದೆ.
ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಾಗ ಅವರ ಹೂಡಿಕೆ ನಷ್ಟವಾಗದಂತೆ ಮತ್ತು ಖರೀದಿದಾರರನ್ನು ಕಂಪೆನಿಯಲ್ಲಿ ಟ್ರಸ್ಟಿಗಳನ್ನಾಗಿ ಮಾಡಿ ಅವರ ಮೊತ್ತಕ್ಕೆ ಕಾನೂನಿನ ಮೂಲಕ ರಕ್ಷಣೆ ನೀಡುವ ಎರಡು ಪ್ರಸ್ತಾವಗಳ ಬಗ್ಗೆ ಚಿಂತನೆ ನಡೆಸುತ್ತಿದೆ. ಜೇಪಿ ಇನಾ#†ಟೆಕ್, ಆಮ್ರಪಾಲಿ ಕಂಪೆನಿಗಳ ಪ್ರಕರಣದಲ್ಲಿ 31 ಸಾವಿರ ಖರೀದಿದಾರರಿಗೆ ವಂಚನೆ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಕೇಂದ್ರ ಮುಂದಾಗಿದೆ. ಈಗಿರುವ ನಿಯಮದಂತೆ, ಆಸ್ತಿ ಮುಟ್ಟುಗೋಲಿನ ಅನಂತರ ವಿಲೇ ಮಾಡಿ ಬಂದ ಹಣದಿಂದ ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳ ಬಾಕಿ, ಉದ್ಯೋಗಿಗಳ ಸಂಬಳ ನೀಡಲಾಗುತ್ತದೆ. ಖರೀದಿದಾರರಿಗೆ ಇಲ್ಲಿ ಕೊನೇ ಅವಕಾಶ ಮಾತ್ರ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.