ಇಂದಿನಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ: ಭಾಗೀರಥಿ
Team Udayavani, Sep 11, 2017, 12:22 PM IST
ಮೈಸೂರು: ಪ್ರತಿವರ್ಷದಂತೆ ಈ ವರ್ಷವೂ ರಂಗಾಯಣದಲ್ಲಿ ಬಿ.ವಿ.ಕಾರಂತ ಕಾಲೇಜು ರಂಗೋತ್ಸವವನ್ನು ಸೋಮವಾರದಿಂದ ಸೆ.28ರವರೆಗೆ ಆಯೋಜಿಸಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದರು.
ರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸೋಮವಾರ ಸಂಜೆ 5.30ಕ್ಕೆ ರಂಗಾಯಣದ ಭೂಮಿ ಗೀತದಲ್ಲಿ ನಡೆಯುವ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಕಾಲೇಜು ರಂಗೋತ್ಸವ ಉದ್ಘಾಟಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಶಾಂತಾ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸೋಮವಾರ ಯತೀಶ್ ನಿರ್ದೇಶನದಲ್ಲಿ ಸಂಕ್ರಾಂತಿ ನಾಟಕವನ್ನು ಮೈಸೂರಿನ ಸಂಗೀತ ವಿವಿ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. 12ರಂದು ಡಾ.ಡಿ.ಶೀಲಾಕುಮಾರಿ ನಿರ್ದೇಶನದಲ್ಲಿ ಏಕಚಕ್ರ ನಗರಿ ನಾಟಕವನ್ನು ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು, 13ರಂದು ತಲಕಾಡು ಗುರುರಾಜ್ ನಿರ್ದೇಶನದಲ್ಲಿ ಗ್ರಾಮ್ಯದೇವತೆ ನಾಟಕವನ್ನು ಸೇಂಟ್ ಫಿಲೋಮಿನಾ ಪದವಿ ಕಾಲೇಜು ವಿದ್ಯಾರ್ಥಿಗಳು,
14ರಂದು ವಿನೋದ ರಂಗ ನಿರ್ದೇಶನದಲ್ಲಿ ಅರಿಶಿಣ ಕುಂಕುಮ ನಾಟಕವನ್ನು ತಿ.ನರಸೀಪುರದ ಪಿ.ಆರ್.ಎಂ. ವಿಜಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, 15ರಂದು ಕಾರ್ತಿಕ್ ಎಸ್. ನಿರ್ದೇಶನದಲ್ಲಿ ಲೇಡಿ ಮ್ಯಾಕ್‌ಬೆತ್ ನಾಟಕವನ್ನು ಎಂ.ಎಂ.ಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜು ವಿದ್ಯಾರ್ಥಿಗಳು, 16ರಂದು ಕು.ಪಲ್ಲವಿ ನಿರ್ದೇಶನದಲ್ಲಿ ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕವನ್ನು ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, 17ರಂದು ವಿಕಾಸ್ ಚಂದ್ರ ನಿರ್ದೇಶನದಲ್ಲಿ ಚಿತ್ರಪಟ ನಾಟಕವನ್ನು ಮೈಸೂರಿನ ಮಹಾಜನ ಪದವಿ ಕಾಲೇಜು ವಿದ್ಯಾರ್ಥಿಗಳು,
18ರಂದು ರಿಯಾಜ್ ಸಿಹಿಮೊಗೆ ನಿರ್ದೇಶನದಲ್ಲಿ ಬೆಪ್ಪು$ತಕ್ಕಡಿ ಬೋಳೆ ಶಂಕರ ನಾಟಕವನ್ನು ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, 19 ರಂದು ಶ್ವೇತಾರಾಣಿ ಎಚ್.ಕೆ. ನಿರ್ದೇಶನದಲ್ಲಿ ಡಂಪ್ಡ್ ನಾಟಕವನ್ನು ಹುಣಸೂರಿನ ಟ್ಯಾಲೆಂಟ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಸೆ.20ರಂದು ರವಿಕುಮಾರ್ ಕೆ. ನಿರ್ದೇಶನದಲ್ಲಿ ರೈತರುಧಿರ ನಾಟಕವನ್ನು ಹುಣಸೂರು ತಾಲೂಕು ಗಾವಡಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆಂದರು.
22ರಂದು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ನಿನಗೆ ನೀನೆ ಗೆಳತಿ ನಾಟಕವನ್ನು ಮೈಸೂರಿನ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, 24ರಂದು ಪ್ರವೀಣ್ ಬೆಳ್ಳಿ ನಿರ್ದೇಶನದಲ್ಲಿ ಮೂವರು ಮುಠಾuಳರು ನಾಟಕವನ್ನು ವಿಜಯವಿಠಲ ಸಂಯುಕ್ತ ಪಿಯು ಕಾಲೇಜು ವಿದ್ಯಾರ್ಥಿಗಳು, 26ರಂದು ಗೋಪಾಲ್ ಬಿ.ನಿರ್ದೇಶನದಲ್ಲಿ ಅಭಿಜ್ಞಾನ ಶಾಕುಂತಲ ನಾಟಕವನ್ನು ಬದರಿಪ್ರಸಾದ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು,
27ರಂದು ಸತೀಶ್ ನಿರ್ದೇಶನದಲ್ಲಿ ನವಿಲೂರು ನಿಲ್ದಾಣ ನಾಟಕವನ್ನು ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ರಂಗನಾಥ್ ವಿ. ನಿರ್ದೇಶನದಲ್ಲಿ ಮೈಸೂರಿನ ಜಿಎಸ್‌ಎಸ್‌ಎಸ್ ಮಹಿಳೆಯರ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಲಮೇಲಮ್ಮನ ಶಾಪ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ವಿವರಿಸಿದರು.
ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗೋತ್ಸವದ ಸಂಚಾಲಕ ಸಂತೋಷ್ ಕುಮಾರ್ ಕುಸನೂರು, ಕಲಬುರ್ಗಿ ರಂಗಾಯಣದ ನಿರ್ದೇಶಕ ಮಹೇಶ್ ವಿ.ಪಾಟೀಲ, ಧಾರವಾಡ ರಂಗಾಯಣದ ನಿರ್ದೇಶಕ ಪ್ರಕಾಶ್ ಹುಡಗಿ ಇದ್ದರು.
500 ಯುವ ಕಲಾವಿದರು ಭಾಗಿ
ಕಾಲೇಜು ರಂಗೋತ್ಸವಕ್ಕಾಗಿ ಮೈಸೂರು ನಗರ, ಹುಣಸೂರು, ತಿ.ನರಸೀಪುರ ಸೇರಿದಂತೆ 15 ಕಾಲೇಜುಗಳಲ್ಲಿ ಕಳೆದ ಒಂದು ತಿಂಗಳಿಂದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ನಡೆಸಲಾಗಿದ್ದು ಸುಮಾರು 500 ಜನ ಯುವ ಕಲಾವಿದರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಪ್ರತಿ ದಿನ ಸಂಜೆ 6.30ರಿಂದ ರಂಗಾಯಣದ ಭೂಮಿಗೀತದಲ್ಲಿ ಕಾಲೇಜು ರಂಗೋತ್ಸವ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.