ಮೂಲ ಜಾನಪದ ಕಲೆ ಉಳಿಯಬೇಕಿದೆ
Team Udayavani, Sep 11, 2017, 1:16 PM IST
ಧಾರವಾಡ: ಮೂಲ ಜಾನಪದ ಸಾಹಿತ್ಯ, ದಾಟಿಗಳು ಮತ್ತು ಆಶಯಗಳ ಉಳಿವಿಗೆ ಸಂಘಟಿತ ಪ್ರಯತ್ನ ನಡೆಯುವ ಅಗತ್ಯವಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಸೋಮಶೇಖರ ಇಮ್ರಾಪೂರ ಹೇಳಿದರು. ಬಸವಶಾಂತಿ ಮಿಷನ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಆಶ್ರಯದಲ್ಲಿ ಆಶ್ರಯದಲ್ಲಿ ರವಿವಾರ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಜಾನಪದ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಜಾನಪದ ಶೈಲಿಯಲ್ಲಿ ರಚನೆಯಾದಂತ ಎಲ್ಲ ಸಾಹಿತ್ಯವನ್ನು ಜಾನಪದ ಎಂದು ಪ್ರತಿಬಿಂಬಿಸಲಾಗುತ್ತಿದೆ. ಅಲ್ಲದೇ ಮೂಲ ಜಾನಪದ ದಾಟಿಯನ್ನು ಹೊರತುಪಡಿಸಿ ಸಿನಿಮಾ ಸಾಹಿತ್ಯದ ದಾಟಿಯಲ್ಲಿ ಜಾನಪದ ಕಲಾವಿದರು ಕಲೆಯ ದರ್ಶನ ನೀಡುತ್ತಿದ್ದಾರೆ. ಮೂಲ ಜಾನಪದ ದಾಟಿಯನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಕಲಾವಿದರು ಮುಂದಾಗಬೇಕು. ಜಾನಪದ ಪ್ರಪಂಚ ದೊಡ್ಡದಿದೆ. ಜಾನಪದ ಕಲೆ ನಿರಂತರ ಬದಲಾವಣೆಗೊಳ್ಳುತ್ತಿರುವ ಕಲೆ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.
ಜಾನಪದ ಚಲನಶೀಲ: ಜನರ ಬಾಯಿಂದ ಹುಟ್ಟಿದಂತ ಈ ಜಾನಪದ ಕಲೆಗೆ ಅಂತ್ಯ ಎಂಬುವುದು ಇಲ್ಲ. ಇದು ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಬದಲಾವಣೆಗೊಳ್ಳುವ ಒಂದು ಸಂಸ್ಕೃತಿ. ಇದೀಗ ಸದ್ಯದ ಆಧುನಿಕ ಬದುಕಿಗೆ ತಕ್ಕಂತೆ ಜಾನಪದ ಸಂಸ್ಕೃತಿ ಬದಲಾಗಿದೆ. ಇದನ್ನು ಪ್ರತಿಯೊಬ್ಬರು ಮೊದಲು ಅರಿತುಕೊಳ್ಳಬೇಕು. ಆದರೆ, ಇತ್ತೀಚೆಗೆ ಇದು ಯಾವುದರ ಅರಿವು ಇಲ್ಲದೆ ಜಾನಪದ ಅಳಿದು ಹೋಗುತ್ತಿದೆ. ನಾಶ ಹೊಂದುತ್ತಿದೆ ಎನ್ನುವುದು ತಪ್ಪು. ಈ ಕುರಿತು ಎಲ್ಲರೂ ಮನನ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದರು.
ಶರಣರು ಜಾನಪದ ಕಟ್ಟಿದರು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, 12ನೇ ಶತಮಾನದ ಬಸವಾದಿ ಶರಣರು ಸಹ ಈ ಜಾನಪದ ಕಲೆಗೆ ಪೊತ್ಸಾಹಿಸಿದ್ದಾರೆ. ಸಂತ ಶಿಶುವಿನಹಾಳ ಶರೀಫ್‌ರಂತ ದಾರ್ಶನಿಕರು ಅಂದು ಹಾಡಿದಂತ ತತ್ವಪದಗಳು ಇಂದಿಗೂ ನಮ್ಮ ಜೀವನದಲ್ಲಿ ಪ್ರಸ್ತುತವಾಗಿವೆ.
ಹೀಗಾಗಿ ಎಲ್ಲರೂ ಇಂದಿನ ಯಾಂತ್ರಿಕ ಬದುಕಿನಿಂದ ಹೊರ ಬಂದು ನಮ್ಮ ಸಂಸ್ಕೃತಿಯತ್ತ ಮುಖ ಮಾಡಬೇಕಿದೆ ಎಂದು ಹೇಳಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ಡಿ.ಬಿ. ನಾಯಕ, ಸದಾನಂದ ಡಂಗನವರ, ಪಂಚನಗೌಡ ದ್ಯಾಮನಗೌಡರ, ಡಾ| ಶ್ರೀಶೈಲ ಹುದ್ದಾರ, ಮಹಾದೇವ ಹೊರಟ್ಟಿ, ಬಸಲಿಂಗಯ್ಯ ಹಿರೇಮಠ, ಡಾ| ಡಿ.ಎಂ. ಹಿರೇಮಠ, ಡಾ| ಲಿಂಗರಾಜ ಅಂಗಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.