ಬ್ಯಾಂಕಿಂಗ್‌ ಕರೆಸ್ಪಾಂಡೆಂಟ್‌ ಅಂದ್ರೆ ಗೊತ್ತಾ?


Team Udayavani, Sep 11, 2017, 5:20 PM IST

banking.jpg

ಇದೊಂದು ನವೀನ ಬ್ಯಾಂಕಿಂಗ್‌ ಪರಿಕಲ್ಪನೆ. ಮನೆಯ ಹತ್ತಿರ ಬ್ಯಾಂಕ್‌ ಇಲ್ಲದವರಿಗೆ , ಮನೆಬಾಗಿಲಿನಲ್ಲಿಯೇ ಈ ಸೌಲಭ್ಯವನ್ನು ಕಲ್ಪಿಸುವ  ಯೋಜನೆ. ಬ್ಯಾಂಕ್‌ ಕೆಲಸಕ್ಕಾಗಿ ಅಲೆದಾಡುವ ಪ್ರಯಾಸವನ್ನು ತಪ್ಪಿಸುತ್ತದೆ. ಆದರೆ, ಇದು ಕೇವಲ ಸಣ್ಣ ಪ್ರಮಾಣದ ದಿನನಿತ್ಯದ  ಬ್ಯಾಂಕಿಂಗ್‌ಗೆ ಸೀಮಿತ.   ಬ್ಯಾಂಕಿಂಗ್‌ ವ್ಯವಹಾರದ ಮೊತ್ತ  ಸೀಮಿತವಾಗಿದ್ದು, ದೊಡ್ಡ ಮೊತ್ತದ ವ್ಯವಹಾರವಿದ್ದರೆ  ಮೂಲ ಬ್ಯಾಂಕಿಗೆ ಹೋಗ ಬೇಕಾಗುತ್ತದೆ. 
—-
ಭಾರತದಲ್ಲಿ ಆರು ಲಕ್ಷಹಳ್ಳಿಗಳು ಇವೆ. ಇದರಲ್ಲಿ ಸುಮಾರು  51,830  ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್‌ ಶಾಖೆಗಳು ಇವೆ. 5000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ  ಪ್ರತಿಹಳ್ಳಿಗಳಲ್ಲಿ ಮಾರ್ಚ್‌ 2017ರ ಒಳಗೆ   ಬ್ಯಾಂಕ… ಶಾಖೆಗಳು ಇರಬೇಕು ಎನ್ನುವ ಸರ್ಕಾರದ ಮಹಾ ಉದ್ದೇಶ ಈಡೇರಿದಂತೆ ಕಾಣುತ್ತಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಪ್ರತಿಯೊಬ್ಬರ ಮನೆಬಾಗಿಲಿಗೆ ತರಬೇಕು  ಎನ್ನುವ  ಇಂದಿರಾ ಗಾಂಧಿಯವರ ಸಾಮಾಜಿಕ ಬ್ಯಾಂಕಿಂಗ್‌ ಪರಿಕಲ್ಪನೆ  ಬ್ಯಾಂಕ್‌ ರಾಷ್ಟ್ರೀಕರಣದ ಮೂಲಕ ಅನುಷ್ಠಾನಗೊಂಡು, ಅದರ ಅಡಿಯುಲ್ಲಿ  ಪ್ರತಿ ಮೂರು ಹಳ್ಳಿ ಶಾಖೆಗಳಿಗೆ ಒಂದು ಪಟ್ಟಣ ಎನ್ನುವಂತೆ ಅನುಮತಿ ಎನ್ನುವ ನಿಬಂಧನೆ ಜಾರಿಯಾದಾಗ,  ಹಳ್ಳಿಗಳು ಬ್ಯಾಂಕಿಂಗ್‌ ಸೇವೆಯನ್ನು ಪಡೆಯತೊಡಗಿದವು. ಅದರ ಫ‌ಲವೇ ಇಂದು ಸುಮಾರು 52,000 ಹಳ್ಳಿಗಳು ಬ್ಯಾಂಕ್‌ ಶಾಖೆಯನ್ನು  ಹೊಂದಲು ಸಾಧ್ಯವಾಯಿತು. ಅದರೆ,  ತೊಂಭತ್ತರ ದಶಕದ  ಆರ್ಥಿಕ ಸುಧಾರಣೆ, ಉದಾರೀಕರಣ ಮತ್ತು ಜಾಗತೀಕರಣ ನಂತರದ ಬ್ಯಾಂಕಿಂಗ್‌ ಟ್ರೆಂಡ್‌ ಬದಲಾಗಿದೆ.  ಬ್ಯಾಂಕುಗಳು  ಸಾಮಾಜಿಕ  ಬ್ಯಾಂಕಿಂಗ್‌ ನಿಂದ ಕಮರ್ಶಿಯಲ…  

ಬ್ಯಾಂಕಿಂಗ್‌ ನತ್ತವಾಲುತ್ತಿವೆ.  ಪ್ರತಿಯೊಂದು ಹಳ್ಳಿಯಲ್ಲೂ ವ್ಯವಹಾರಿಕವಾಗಿ ಬ್ಯಾಂಕ್‌ ಶಾಖೆ  ತೆರೆಯುವುದು ಸಾಧ್ಯವಿಲ್ಲ.  ಬ್ಯಾಂಕ್‌ ಶಾಖೆ ತೆರೆಯುವ ಮಾನದಂಡದ ಪ್ರಕಾರ ಕನಿಷ್ಠ 5,000 ಜನಸಂಖ್ಯೆ ಇರಬೇಕು.  ನಮ್ಮ ದೇಶದಲ್ಲಿ ಮುಖ್ಯವಾಗಿ ಕರ್ನಾಟಕದ  ಮಲೆನಾಡು  ಮತ್ತು ಉತ್ತರ ಭಾರತದ ಗುಡ್ಡಗಾಡು ಪ್ರದೇಶದಲ್ಲಿ  ಒಂದು ಮನೆ ಇರುವ ಹಳ್ಳಿಗಳೂ ಇವೆ. ಹಳ್ಳಿಗಳು ಹತ್ತಿರವಿಲ್ಲದಿರುವುದರಿಂದ ನಾಲ್ಕಾರು ಹಳ್ಳಿಗಳನ್ನು ಸೇರಿಸಿ ಬ್ಯಾಂಕ್‌  ಶಾಖೆ ತೆರೆಯುವುದೂ ಅಸಾಧ್ಯ.  ಪಟ್ಟಣಕ್ಕೆ ಹತ್ತಿರ  ಇರುವ ಹಳ್ಳಿಗಳಿಗೆ  ಹೇಗಾದರೂ ಸಿಬ್ಬಂದಿ ನಿಯೋಜನೆ ಮಾಡಬಹುದು. ಆದರೆ, ದೂರದ ಹಳ್ಳಿಗಳಿಗೆ ಕಷ್ಟಸಾಧ್ಯ. ಅಂತೆಯೇ ಗ್ರಾಮೀಣ ಜನತೆ  ಬ್ಯಾಂಕಿಂಗ್‌ ಸೇವೆಯಿಂದ ವಂಚಿತರಾಗುತ್ತಿದ್ದು, ಅವರಿಗೆ ಕನಿಷ್ಟ  ಬ್ಯಾಂಕಿಂಗ… ಸೇವೆ ನೀಡಲು ರಿಸರ್ವ ಬ್ಯಾಂಕ… ನ  ಆಗಿನ ಡೆಪ್ಯುಟಿ ಗವರ್ನರ್‌ ಎಚ್‌.ಆರ್‌. ಖಾನ್‌ 2006ರಲ್ಲಿ ಸಲ್ಲಿಸಿದ ಶಿಫಾರಸ್ಸಿನ ಅಧಾರದ ಮೇಲೆ ರೂಪುಗೊಂಡ ಈ ವ್ಯವಸ್ಥೆ,  ಇನ್ನೊಬ್ಬ ಡೆಪ್ಯುಟಿ ಗವರ್ನರ್‌ ಡಾ.ಸಿ.ರಂಗರಾಜನ್‌ರಿಂದ ಸ್ವಲ್ಪ ಮಾರ್ಪಾಡಾಗಿ 2008ರಲ್ಲಿ  ಜಾರಿಗೆ ಬಂದಿತು. ಇವರನ್ನು ಸಂಕ್ಷಿಪ್ತವಾಗಿ BC ಎಂದು ಕರೆಯುತ್ತಾರೆ. ಸುಮಾರು 650 ಮಿಲಿಯನ್‌, ಅಂದರೆ ಸುಮಾರು ಶೇ.65  ಜನತೆ   ಬ್ಯಾಂಕಿಂಗ್‌ ಸೇವೆ ಇಂದ ವಂಚಿತರಾಗಿದ್ದು, ಈ ವ್ಯವಸ್ಥೆ ಅವರ ಸಹಾಯಕ್ಕೆ ಬಂದಿದೆ. ಇದನ್ನು ಗ್ರಾಹಕರ ಸೇವಾ ಕೇಂದ್ರ ಎಂದೂ ಕರೆಯುವರು.

ಬಿಸಿ ಹಾಗೆಂದರೇನು?
ಬ್ಯಾಂಕುಗಳು ಇಲ್ಲದ ಸ್ಥಳದಲ್ಲಿ, ಜನತೆಗೆ  ಕನಿಷ್ಟ ಬ್ಯಾಂಕಿಂಗ್‌ ಸೇವೆ ಒದಗಿಸಲು, ಸ್ವಂತ ಕಟ್ಟಡವಿಲ್ಲದ ಮತ್ತು ಬ್ಯಾಂಕಿನಿಂದ (ಕಮರ್ಶಿಯಲ್ ಬ್ಯಾಂಕ್‌,  ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಲೋಕಲ್ ಏರಿಯಾ ಬ್ಯಾಂಕ್‌) ನಿಂದ ನೇಮಿಸಲ್ಪಟ್ಟು ನಡೆಸುವ ಬ್ಯಾಂಕಿಂಗ್‌ ವ್ಯವಹಾರದ ವ್ಯವಸ್ಥೆ. ಇವರು ಒಬ್ಬ ವ್ಯಕ್ತಿ ಇರಬಹುದು ಅಥವಾ ಸಣ್ಣ entity ಇರಬಹುದು. ಈ ವ್ಯವಸ್ಥೆ ಬ್ಯಾಂಕುಗಳು ಮತ್ತು ಏಟಿಎಂ ಇಲ್ಲದ ಸ್ಥಳದಲ್ಲಿ, ಮುಖ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕಾಣುತ್ತವೆ. ಈ ವ್ಯಕ್ತಿ ಅಥವಾ entity ಆ ಬ್ಯಾಂಕಿನ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ  ಇವರದೇ ಆದ ಖಾಯಂ ಕಟ್ಟಡ ಇರುವುದಿಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತು ತಮಗೆ ವಹಿಸಿದ ಬ್ಯಾಂಕಿಂಗ್‌ ಕಾರ್ಯವನ್ನು ನಿರ್ವಹಿಸುತ್ತಾರೆ. ಈ ಪ್ರತಿನಿಧಿ ಮಾಡುವ ಕಾರ್ಯಕ್ಕೆ ಸಂಬಂಧಪಟ್ಟ ಬ್ಯಾಂಕುಗಳೇ ಹೊಣೆ ಮತ್ತು ಜವಾಬ್ದಾರಿ.

ಅವರು ನಿರ್ವಹಿಸುವ ಕಾರ್ಯಗಳೇನು?
ಅವರು ಜನರಲ್ಲಿ ಬ್ಯಾಂಕಿನ ವಿವಿಧ ಹಣಕಾಸು ಚಟುವಟಿಕೆಗಳ ಬಗೆಗೆ ಮುಖ್ಯವಾಗಿ ಉಳಿತಾಯ, ಸಾಲ ಸೌಲಭ್ಯದ ಬಗೆಗೆ ಜನರಿಗೆ ವಿವರಿಸುತ್ತಾರೆ. ವೈಯಕ್ತಿಕ ಫೈನಾನ್ಸ್‌ ಬಗೆಗೆ ಸಲಹೆ ನೀಡುತ್ತಾರೆ ಮತ್ತು  ಹಣಕಾಸು ಸೇರ್ಪಡೆ  ಬಗೆಗೆ ಲಕ್ಷ್ಯವಹಿಸಿ ಹೆಚ್ಚು ಜನರು ಬ್ಯಾಂಕಿಂಗ ಸೌಲಭ್ಯವನ್ನು ಪಡೆಯುವಂತೆ ಪ್ರಯತ್ನಿಸುತ್ತಾರೆ.

ಬ್ಯಾಂಕಿನವರು ನಿಗದಿಪಡಿಸಿದ ಸಣ್ಣ ಮೊತ್ತದ ಠೇವಣಿಯನ್ನು ಸ್ವೀಕರಿಸುತ್ತಾರೆ. ಹಾಗೆಯೇ ಸಣ್ಣ ಮೊತ್ತದ ಸಾಲವನ್ನೂ ಕೊಡುತ್ತಾರೆ. ಸಣ್ಣ ಮೊತ್ತದ ಹಣ ಸ್ವೀಕಾರ ಮತ್ತು ರವಾನೆ ಮಾಡುತ್ತಾರೆ. ಈ ಮೊತ್ತ ಬ್ಯಾಂಕಿನಿಂದ  ಬ್ಯಾಂಕಿಗೆ ಬೇರೆಯಾಗಿರುತ್ತದೆ. ಸಾಲದ ಮೇಲಿನ ಅಸಲು ಮತ್ತು ಬಡ್ಡಿಯನ್ನು ವಸೂಲು ಮಾಡುತ್ತಾರೆ. ಸಾಲಗಾರರನ್ನು ಗುರುತಿಸುವುದು, ಸಾಲದ ಅರ್ಜಿಯನ್ನು ಸ್ವೀಕರಿಸುವುದು ಮತ್ತು ಮೊದಲ ಹಂತದ ಪ್ರಾರಂಭಿಕ ಪರಿಷ್ಕರಣೆಯನ್ನು ಮಾಡುವುದು. ಸಾಲದ ಅರ್ಜಿದಾರರು ನೀಡಿದ  ಮಾಹಿತಿ ಮತ್ತು ಅಂಕಿ ಸಂಖ್ಯೆಗಳನ್ನು ತಮ್ಮ ಮಟ್ಟದಲ್ಲಿ ಪರಿಶೀಲಿಸುವುದು, ಅದನ್ನು ಮೂಲ ಬ್ಯಾಂಕ್‌ಗೆ ಮುಂದಿನ ಕ್ರಮಕ್ಕಾಗಿ ಕಳಿಸುವುದು. ಸಾಲ ಮಂಜೂರಿಯ ನಂತರದ ಪ್ರಕ್ರಿಯೆ ಮತ್ತು ಸಾಲ ವಸೂಲಾತಿ ಫಾಲೋ ಅಪ್‌. ಸ್ವಸಹಾಯ ಕೇಂದ್ರಗಳನ್ನು ಬಲವರ್ಧಿಸುವುದು ಮತ್ತು ಹೆಚ್ಚಿಸುವುದು ಮತ್ತು ಪ್ರೋತ್ಸಾಹ. ಗ್ರಾಹಕರ ಖಾತೆ ತೆರೆಯುವ ನಮೂನೆಯನ್ನು ತುಂಬುವುದು ಮತ್ತು ಗ್ರಾಹಕರಿಗೆ 3 ತಿಂಗಳವರೆಗಿನ ಮಿನಿ ಸ್ಟೇಟ್‌ಮೆಂಟ್‌ ನೀಡುವುದು.

ಯಾರು ಬ್ಯಾಂಕಿಂಗ… ಕರೆಸ್ಪಾಂಡೆಂಟ್‌ ಅಗಬಹುದು?
ಸರ್ಕಾರೇತರ  ಸಂಘಗಳು, ನಿವೃತ್ತ ಬ್ಯಾಂಕರುಗಳು, ಶಿಕ್ಷಕರು, ಸರ್ಕಾರಿ ನೌಕರರು, ಮಾಜಿ ಸೈನಿಕರು, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು,  ಕಿರಾಣ ಅಂಗಡಿ ಮತ್ತು ಮೆಡಿಕಲ್  ಶಾಪ್‌  ಮಾಲೀಕರು,  ನ್ಯಾಯಬೆಲೆ ಅಂಗಡಿಗಳು, ಪಬ್ಲಿಕ್‌ ಕಾಲ್ ಆಫೀಸ್‌ ಮಾಲೀಕರು, ಪೆಟ್ರೋಲ್ ಬ್ಯಾಂಕ್‌ ಮಾಲೀಕರು, ಸಣ್ಣ ಉಳಿತಾಯ ಯೋಜನೆ ಮತ್ತು ಜೀವವಿಮಾ ಪ್ರತಿನಿಧಿಗಳು ಮತ್ತು ಸುವ್ಯವಸ್ಥಿತವಾಗಿ ನಡೆಯುವ   ಸ್ವಸಹಾಯ ಸಂಸ್ಥೆಗಳು  ಬ್ಯಾಂಕುಗಳು ನಿಗದಿ ಪಡಿಸುವ ನಿಬಂಧನೆಗಳಿಗೆ ಬದ್ಧರಾಗಿದ್ದರೆ, ಅಂಥವರು ಬ್ಯಾಂಕಿಂಗ್‌ ಕರಸ್ಪಾಂಡೆಂಟ್‌ ಅಗಬಹುದು. ಹಾಗೆಯೇ ಅಂಚೆಕಚೇರಿಗಳು, ಪಂಚಾಯತ ಕಚೇರಿಗಳು, ಸಿವಿಲ್ ಸೊಸೈಟಿ ಅರ್ಗನೈಸೇಷನ್‌ಗಳು, ಅಗ್ರಿ ಕ್ಲಿನಿಕ್‌ಗಳು, ವಿಲೇಜ… ಜ್ಞಾನ ಕೇಂದ್ರಗಳು, ಖಾದಿ,ವಿಲೇಜ…, 

ಉಧ್ಯಮ ಕೇಂದ್ರಗಳು  ಕೃಷಿ ವಿಜ್ಞಾನ ಕೇಂದ್ರಗಳು, ಸಮುದಾಯ ಕೇಂದ್ರಗಳು, ಫಾರ್ಮರ್ಸ್‌ ಕ್ಲಬ್‌ಗಳು, ಠೇವಣಿ ತೆಗೆದುಕೊಳ್ಳದ  ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರಿ ಸಂಘಗಳು ಮತ್ತು  ಕಂಪನಿ ಕಾನೂನು 2013 ಅಡಿಯಲ್ಲಿ ನೊಂದಾಯಿಸಲ್ಪಟ್ಟ  ಮತ್ತು ವಿಸ್ತ್ರತವಾಗಿ  ಔಟ ಲೆಟ್‌ಗಳನ್ನು ಹೊಂದಿದ  ಕಂಪನಿಗಳೂ ಕೂಡಾ ಬ್ಯಾಂಕಿಂಗ್‌ ಕರೆಸ್ಪಾಂಡೆಂಟ್‌  ಅಗಬಹುದು.

ಇದೊಂದು ನವೀನ ಬ್ಯಾಂಕಿಂಗ್‌ ಪರಿಕಲ್ಪನೆ. ಮನೆಯ ಹತ್ತಿರ ಬ್ಯಾಂಕ್‌ ಇಲ್ಲದವರಿಗೆ , ಮನೆಬಾಗಿಲಿನಲ್ಲಿಯೇ ಈ ಸೌಲಭ್ಯವನ್ನು ಕಲ್ಪಿಸುವ  ಯೋಜನೆ. ಬ್ಯಾಂಕ್‌ ಕೆಲಸಕ್ಕಾಗಿ ಅಲೆದಾಡುವ ಪ್ರಯಾಸವನ್ನು ತಪ್ಪಿಸುತ್ತದೆ. ಆದರೆ, ಇದು ಕೇವಲ ಸಣ್ಣ ಪ್ರಮಾಣದ ದಿನನಿತ್ಯದ  ಬ್ಯಾಂಕಿಂಗ್‌ಗೆ ಸೀಮಿತ.   ಬ್ಯಾಂಕಿಂಗ್‌ ವ್ಯವಹಾರದ ಮೊತ್ತ  ಸೀಮಿತವಾಗಿದ್ದು, ದೊಡ್ಡ ಮೊತ್ತದ ವ್ಯವಹಾರವಿದ್ದರೆ ಮೂಲ ಬ್ಯಾಂಕಿಗೆ ಹೋಗ ಬೇಕಾಗುತ್ತದೆ. ಹಾಗೆಯೇ ಎÇÉಾ ತರದ ಬ್ಯಾಂಕಿಂಗ್‌ ಚಟುವಟಿಕೆಗಳು ಇಲ್ಲಿ ನಡೆಯುವುದಿಲ್ಲ. ಚಟುವಟಿಕೆಗಳು ಸಣ್ಣ ಠೇವಣಿ, ಸಣ್ಣ ಸಾಲ, ಸಣ್ಣ ಮೊತ್ತದ  ಹಣ ರವಾನೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಗ್ರಾಹಕರಿಗೆ ಯಾವದೇ ರೀತಿಯ ಶುಲ್ಕ ವಿಧಿಸುವಂತಿಲ್ಲ. ಸಂಬಂಧಪಟ್ಟ  ಬ್ಯಾಂಕ್‌ ಇವರಿಗೆ  ಕಮೀಷನ್‌ ನೀಡುತ್ತಿದ್ದು, ಇದನ್ನು ಆಗಾಗ  ರಿವ್ಯೂ ಮಾಡುತ್ತದೆ. ಇವರ ಚಟುವಟಿಕೆಗಳು ಮಾತ್ರ ಬ್ಯಾಂಕ್‌ ಶಾಖೆಯಿಂದ  ಹಳ್ಳಿಗಳಲ್ಲಿ 30 ಕಿ.ಮೀಗೆ ಮತ್ತು ಪಟ್ಟಣಗಳಲ್ಲಿ 5 ಕಿ.ಮೀಗೆ  ಮೀರಬಾರದು. ಹಣಕಾಸು ಸೇರ್ಪಡೆಗೆ ಇನ್ನೊಂದು ರಹದಾರಿ ಎಂದು ಬಣ್ಣಿಸುವ  ಈ ವ್ಯವಸ್ಥೆಯಲ್ಲಿ ಈಗಾಗಲೇ 3 ಲಕ್ಷಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ  ಸುಮಾರು  2-7ರ  ಕರಸ್ಪಾಂಡೆಂಟ… ಗಳು ಇ¨ªಾರಂತೆ. ಸುಮಾರು  7ಲಕ್ಷ ಗಣಕೀಕೃತ ಮಿನಿಮಷಿನ್‌ಗಳು ಕೆಲಸಮಾಡುತ್ತವೆಯಂತೆ.

ಎಲ್ಲವೂ ಮನೆ, ಮನಕೆ ಬ್ಯಾಂಕ್‌ ತಲುಪಿಸುವುದಕ್ಕೆ. 

– ರಮಾನಂದ ಶರ್ಮಾ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.