ಮತ್ತೆ ಕನ್ನಡಕ್ಕೆ ಆಶಾ ಭೋಂಸ್ಲೆ!
Team Udayavani, Sep 11, 2017, 6:27 PM IST
ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಬಾರಿ ಅವರು “19/11′ ಎಂಬ ಹೊಸ ಕನ್ನಡ ಚಿತ್ರಕ್ಕೆ ಜೋಯೆಲ್ ಮತ್ತು ಅಭಿಲಾಷ್ ಸಂಗೀತ ನಿರ್ದೇಶನದಲ್ಲಿ “ಕಣ್ಣುಕಣ್ಣಲಿ ಬಣ್ಣಬಣ್ಣದ ಕನಸನ್ನು ಕೊಡ್ತಾಳಲ್ಲ …’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ಅವರ ಜೊತೆಗೆ ಚೇತನ್ ನಾಯಕ್ ಸಹ ಹಾಡಿದ್ದಾರೆ. ಮುಂಬೈನ ಯಶ್ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ಧ್ವನಿಮುದ್ರಣವಾಗಿದೆಯಂತೆ.
ಆಶಾ ಭೋಂಸ್ಲೆ ಅವರು ಕನ್ನಡದಲ್ಲಿ ಹಾಡುತ್ತಿರುವುದು ಇದೇ ಮೊದಲೇನಲ್ಲ. ಡಾ. ರಾಜಕುಮಾರ್ ಅಭಿನಯದ “ದೂರದ ಬೆಟ್ಟ’ ಚಿತ್ರಕ್ಕೆ ಅವರೊಂದು ಹಾಡು ಹಾಡಿದ್ದರು. ಅದಾಗಿ ಎಷ್ಟೋ ವರ್ಷಗಳ ನಂತರ ಶ್ರೀನಗರ ಕಿಟ್ಟಿ ಅಭಿನಯದ “ಮತ್ತೆ ಮುಂಗಾರು’ ಚಿತ್ರಕ್ಕೆ “ಹೇಳದೆ ಕಾರಣ …’ ಎಂಬ ಹಾಡಿಗೆ ಧ್ವನಿಯಾಗಿದ್ದರು. ಅದೇ ಸಂದರ್ಭದಲ್ಲಿ ವೀರ್ ಸಮರ್ಥ್ ಸಂಗೀತ ನಿರ್ದೇಶನದಲ್ಲಿ “ಮಾಣಿಕ್ಯ’ ಎಂಬ ಚಿತ್ರಕ್ಕೂ ಆಶಾ ಭೋಂಸ್ಲೆ ಹಾಡಿದ್ದರು.
ಆದರೆ, ಆ ಚಿತ್ರ ಶುರುವಾಗಲೇ ಇಲ್ಲ. ಕೊನೆಗೆ ಅದೇ ಹೆಸರಿನಲ್ಲಿ ಸುದೀಪ್ ಇನ್ನೊಂದು ಚಿತ್ರ ಮಾಡಿದ್ದರು. “ಮಾಣಿಕ್ಯ’ಗೆ ಹಾಡಿದ ಹಾಡನ್ನು ಕೊನೆಗೆ ರಾಕೇಶ್ ಅಡಿಗ ಅಭಿನಯದ “ಮಂದಹಾಸ’ ಎಂಬ ಚಿತ್ರಕ್ಕೆ ಬಳಸಿಕೊಳ್ಳುವ ಒಪ್ಪಂದವಾಯಿತು. ಆ ಚಿತ್ರಕ್ಕೂ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದರಿಂದ, ಮಾತುಕಥೆಯಾಗಿತ್ತು. ಆದರೆ, ಸನ್ನಿವೇಶ ಸೂಕ್ತವಾಗಿರದ ಕಾರಣ, ಆ ಹಾಡನ್ನು ಬಳಸಿಕೊಳ್ಳಲಾಗಲಿಲ್ಲ.
ಮೊದಲು “ಮಾಣಿಕ್ಯ’ ನಿರ್ದೇಶಿಸಬೇಕಿದ್ದ ಪ್ರತಾಪ್ ಗೌಡ ಅವರೇ ಈಗ ಆರ್ಯನ್ ಎಂ ಪ್ರತಾಪ್ ಎಂಬ ಹೆಸರಿನಲ್ಲಿ “19/11′ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಈಗ ಆಶಾ ಭೋಂಸ್ಲೆ ಅವರಿಂದ ಒಂದು ಹಾಡು ಹಾಡಿಸಿದ್ದಾರೆ. “ಅಮರಾವತಿ’ ಚಿತ್ರವನ್ನು ನಿರ್ಮಿಸಿದ್ದ ಮಾಧವ ರೆಡ್ಡಿ ಅವರು ಇದೀಗ, “19/11′ ಚಿತ್ರವನ್ನು ತಮ್ಮ ಶ್ರೀನಿಲಯಂ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿಮಿಧಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಪ್ರತಾಪ್. ಚಿತ್ರದಲ್ಲಿ ರಕ್ಷಕ್ ಮತ್ತು ಪಲ್ಲವಿ ನಾಯಕ್ ಎನ್ನುವವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.