ಸಾವಯವ ಕೃಷಿಯನ್ನೇ ನಂಬಿ ಜೀವನ ನಡೆಸೋ ಕುಟುಂಬ
Team Udayavani, Sep 12, 2017, 6:10 AM IST
ಸಿದ್ದಾಪುರ: ಭಾರತದ ಸಾವಿರಾರೂ ರೈತರು ಇಂದು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ ಬೆಚ್ಚಳ್ಳಿ ಭೋಜ ಪೂಜಾರಿ ಹಾಗೂ ಅವರ ಕುಟುಂಬ ಒಂದಾಗಿದೆ.
ಉತ್ತಮವಾದ ಫಸಲು
ಭೋಜ ಪೂಜಾರಿ ಹಾಗೂ ಅವರ ಕುಟುಂಬ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರು ಈ ಎರಡು ಬೆಳೆಗಳಿಗೆ ಯಾವುದೇ ರಾಸಾಯನಿಕ ಔಷಧಗಳನ್ನು ಬಳಸದೆ ಸಾವಯವ ಗೊಬ್ಬರಗಳ ಬಳಕೆ ಮಾಡಿ, ಈ ಮೂಲಕ ಉತ್ತಮವಾದ ಫಸಲು ಪಡೆಯುತ್ತಿದ್ದಾರೆ. ಅವರು ಬೆಚ್ಚಳ್ಳಿ ಹಾಗೂ ಕಾವ್ರಾಡಿ ಗ್ರಾಮದ ಮುಂಭಾರಿನಲ್ಲಿ ಕೂಡ ಕೃಷಿ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಉತ್ತಮವಾಗಿ ಕೃಷಿಯನ್ನು ಮಾಡುತ್ತಿರುವುದರಿಂದ ಭೋಜ ಪೂಜಾರಿ ಅವರು ಸಾವಯವ ಕೃಷಿಯಲ್ಲಿ ಪ್ರಗತಿ ಪರ ಕೃಷಿಕರೆನ್ನಿಸಿಕೊಂಡಿದ್ದಾರೆ. ಅವರು ಮುಖ್ಯವಾಗಿ ತರಕಾರಿ ಬೆಳೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತರಕಾರಿ ಭೋಜ ಪೂಜಾರಿ ಎಂದೇ ಪ್ರಖ್ಯಾತಿ ಗಳಿಸಿದ್ದಾರೆ.
ತಂದೆಯಂತೆ ಮಗನೂ
ಭೋಜ ಪೂಜಾರಿ ಅವರ ಮಗ ರಾಜೇಂದ್ರ ಪೂಜಾರಿ ಅವರು ಬಿ.ಎಡ್. ಪದವಿಧರರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್. ಪದವಿ ಮುಗಿಸಿರುವ ಅವರಿಗೆ ಸರಕಾರಿ ಉದ್ಯೋಗ ಅರಸಿ ಬಂದರೂ, ಅದನ್ನು ಬಿಟ್ಟು ಕೃಷಿಯಲ್ಲಿ ಮುಂದುವರಿದಿದ್ದಾರೆ. ಅವರು ಸ್ವತಃ ಕೃಷಿಯೊಂದಿಗೆ ಮಾರುಕಟ್ಟೆ ಕೂಡ ಮಾಡುತ್ತಿದ್ದಾರೆ. ಪ್ರತಿ ಬುಧವಾರ ಸಿದ್ದಾಪುರ ಸಂತೆ ಮತ್ತು ಪ್ರತಿ ಶನಿವಾರ ಕುಂದಾಪುರ ಸಂತೆಯಲ್ಲಿ ತಾವು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರುತ್ತಾರೆ.
ಸಾವಯವ ಕೃಷಿ
ಭೋಜ ಪೂಜಾರಿ ಅವರ ಇಡೀ ಕುಟುಂಬವು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಚಿಕ್ಕು, ದುಡ್ಲೆಕಾಯಿ, ದಿವೆಲ್ಸಿನಕಾಯಿ, ಕಾಳು ಮೆಣಸು, ಕಬ್ಬು, ತರಕಾರಿ ಬೆಳೆಗಳಾದ ಸುವರ್ಣಗಡ್ಡೆ, ಮರಸನಗಡ್ಡೆ, ಅನಾನಸು, ಪಪ್ಪಾಯಿ, ನುಗ್ಗೆಕಾಯಿ, ಆವಟೆಕಾಯಿ ಇದರಲ್ಲಿ ಸಿಹಿ ಮತ್ತು ಹುಳಿ, ಮರಗೆಣಸು, ಕೆಸ, ಬೆಂಡೆ, ಪಡವಲಕಾಯಿ, ಅಲಸಂಡೆ, ಇಬ್ಬುಡ್ಲು, ಮುಳ್ಳುಸೌತೆ, ಹಾಗಲಕಾಯಿ, ಸಾಂಬರ್‌ಸೌತೆ, ಹರಿವೆಸೊಪ್ಪು ಇದರಲ್ಲಿ ಕೆಂಪು ಮತ್ತು ಬಿಳಿ, ಬಸಳೆಸೊಪ್ಪು, ಮೆಣಸು, ಬದನೆಕಾಯಿ, ಸಿಹಿ ಮತ್ತು ಬೂದುಗುಂಬಳಕಾಯಿ, ತೊಂಡೆಕಾಯಿ, ಶುಂಠಿ ಮತ್ತು ಅವಾಡೆಕಾಯಿಗಳನ್ನು ಬೆಳೆಯುತ್ತಿದ್ದಾರೆ. ಇದರೊಂದಿಗೆ ಯಾಂತ್ರೀಕೃತ ಭತ್ತದ ಬೇಸಾಯ ಕೂಡ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ.
ಕೃಷಿಯಿಂದ ಮನೋಲ್ಲಾಸ ಲಭ್ಯವಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೆ ಅದರ ಬಗ್ಗೆ ಆಸಕ್ತಿ, ಮಾಹಿತಿ ಇರಬೇಕು. ಅದರೊಂದಿಗೆ ಮಣ್ಣಿನ ಗುಣಮಟ್ಟ ತಿಳಿದುಕೊಂಡು ಆಯಾಯ ಮಣ್ಣಿನ ಅನುಗುಣವಾಗಿ ಕೃಷಿ ಮಾಡಿದರೆ, ಉತ್ತಮ ಆದಾಯ ಗಳಿಸಬಹುದಾಗಿದೆ. ಆಗ ಮಾತ್ರ ಕೃಷಿಯಲ್ಲಿ ನಷ್ಟ ಇರುವುದಿಲ್ಲ. ಕೃಷಿಕರು ಯಾವಾಗಲೂ ಒಂದೇ ಕೃಷಿಯನ್ನು ನಂಬಿಕೊಂಡ ಇರಬಾರದು. ಮಿಶ್ರ ಕೃಷಿ ಪದ್ಧತಿಯನ್ನು ಆಳವಡಿಸಿಕೊಳ್ಳುವುದು ಉತ್ತಮ.
– ಭೋಜ ಪೂಜಾರಿ ಬೆಚ್ಚಳ್ಳಿ, ಪ್ರಗತಿಪರ ಕೃಷಿಕ
ಜೀವನೋಪಾಯಕ್ಕೆ ಶಿಕ್ಷಣ ಬೇಕು. ಆ ಶಿಕ್ಷಣದಿಂದಲೇ ಸರಕಾರಿ ಉದ್ಯೋಗಕ್ಕೆ ಹೋಗಿ ಜೀವನ ಸಾಗಿಸಬೇಕು ಎಂಬ ನಿರೀಕ್ಷೆ ಬೇಡ. ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆ ಮೂಲಕ ಸಂಪಾದನೆ ಮಾಡಬೇಕು. ಹಣಕ್ಕಾಗಿ ಅನ್ಯಾಯದ ಮಾರ್ಗ ಹಿಡಿಯದೆ, ಕಷ್ಟ ಪಟ್ಟು ಸಂಪಾದನೆ ಮಾಡಬೇಕು. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.
– ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ಪ್ರಗತಿಪರ ಕೃಷಿಕ
– ಸತೀಶ ಆಚಾರ್ ಉಳ್ಳೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್ಅಪ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.