ನಾನು ಹುಚ್ಚನಂತೆ ಎದುರು ನಿಲ್ಲೋದು ನಿಂಗೆ ಇಷ್ಟವಾಗುತ್ತಾ?


Team Udayavani, Sep 12, 2017, 8:25 AM IST

nanu-huchanante.jpg

ನಿನ್ನ ಮನೆಯೆದುರು ದೀನನಂತೆ ದಿನವಿಡೀ ಕಾದರೂ ಕಠೊರ ಬಾಗಿಲುಗಳು ಒಂದು ಬಾರಿಯೂ ನಿನ್ನನ್ನು ತೋರಿಸುವುದೇ ಇಲ್ಲ. ನಿನ್ನ ತಂದೆ ದೂರ್ವಾಸ ಮುನಿಯಂತೆ ಕೆಕ್ಕರಿಸಿಕೊಂಡು ನೋಡುತ್ತಿರುತ್ತಾರೆ. ನಿನ್ನ ತಾಯಿ ಮಾತ್ರ ತನ್ನ ಅಸಹಾಯಕ ನಿಲುವನ್ನು ಮೋರೆಯಲ್ಲಿ ವ್ಯಕ್ತಪಡಿಸುತ್ತಾಳೆ. 

ನನ್ನ ನಡುಮಧ್ಯಾಹ್ನದ ಹಗಲುಗಳು ಕಳೆಯುವುದೇ ಹಾಗೆ. ಗುಬ್ಬಿ ಗೂಡಿನಂಥ ಕೋಣೆಯಲ್ಲಿ ತಿರುಗುವ ಫ್ಯಾನಿನಡಿಯಲ್ಲಿ, ಅಂಗಾತ ಬಿದ್ದುಕೊಂಡು, ಬಿಟ್ಟಕಂಗಳ ಬಿಟ್ಟ ಹಾಗೆ ನಿನ್ನ ಜೊತೆ ಕಳೆದ, ಇನ್ನೆಂದೂ ಬಾರದ ಆ ಸವಿಘಳಿಗೆಗಳನ್ನು ಕಣ್ಣಿಗೆ ತುಂಬಿಕೊಳ್ಳುತ್ತಾ ಕಣ್ಣೀರಾಗುವುದು. ಹೊರಗಿನ ಕೋಣೆಯಲ್ಲಿ ಮನೆಮಂದಿಯೆಲ್ಲ ಯಾವುದೋ ಲವ್‌ಸ್ಟೋರಿಯ ಸಿನಿಮಾವನ್ನು ಆಸಕ್ತಿಯಿಂದ ನೋಡುತ್ತಿರುವ ಹೊತ್ತಿನಲ್ಲೇ, ನಾನು ನನ್ನ ಕೋಣೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಮುರಿದು ಬಿದ್ದ ಪ್ರೀತಿಯ ತಲೆ ನೇವರಿಸುತ್ತಾ ನೋವು ತಿನ್ನುತ್ತಿರುತ್ತೇನೆ. ಹೇಳು ಈ ನೋವು ನ್ಯಾಯವೇ?

ಅದೆಷ್ಟೋ ಬಾರಿ ನಿನ್ನ ಮೊಬೈಲಿಗೆ ರಿಂಗ್‌ ಮಾಡಿದರೂ ಅದು ನಿರ್ಜಿàವ. ಕಳುಹಿಸಿದ ಮೆಸೇಜುಗಳೆಲ್ಲ ತಿರುಗಿ ಔಟ್‌ ಬಾಕ್ಸ್‌ಗೆ ಬಂದು ಅಣಕಿಸುತ್ತವೆ. ನಿನ್ನ ಮನೆಯೆದುರು ದೀನನಂತೆ ದಿನವಿಡೀ ಕಾದರೂ ಕಠೊರ ಬಾಗಿಲುಗಳು ಒಂದು ಬಾರಿಯೂ ನಿನ್ನನ್ನು  ತೋರಿಸುವುದೇ ಇಲ್ಲ. ನಿನ್ನ ತಂದೆ ದೂರ್ವಾಸ ಮುನಿಯಂತೆ ಕೆಕ್ಕರಿಸಿಕೊಂಡು ನೋಡುತ್ತಿರುತ್ತಾರೆ. ನಿನ್ನ ತಾಯಿ ಮಾತ್ರ ತನ್ನ ಅಸಹಾಯಕ ನಿಲುವನ್ನು ಮೋರೆಯಲ್ಲಿ ವ್ಯಕ್ತಪಡಿಸುತ್ತಾಳೆ.

ಮುರಿದುಕೊಳ್ಳುವುದೇ ಆದರೆ ನೀನು ಪ್ರೀತಿಸಿದ್ದು ಏಕೆ ಎಂಬ ಅರ್ಥವಿಲ್ಲದ ಪ್ರಶ್ನೆ ತಲೆ ಕೊರೆಯುತ್ತದೆ. ನಮ್ಮ ಪ್ರೀತಿಗೆ ಜಾತಿ ಅಡ್ಡ ಬರಲಿಲ್ಲ, ದುಡ್ಡು ಹೊರೆಯಾಗಲಿಲ್ಲ, ವಯಸ್ಸು ತೊಂದರೆ ಕೊಡಲಿಲ್ಲ, ನೌಕರಿ ಲಕ್ಷ್ಮಣ ರೇಖೆ ಹಾಕಲಿಲ್ಲ. ಆದರೆ, ಅದ್ಯಾರೋ ರೌಡಿ ಹುಡುಗರ ಜೊತೆ ನಾನಿದ್ದೆ ಎನ್ನುವ ಒಂದೇ ಒಂದು ಕಾರಣಕ್ಕೆ ನಿಮ್ಮಪ್ಪ ನಮ್ಮಿಬ್ಬರ ಪ್ರೀತಿಗೆ ಎಳ್ಳು ನೀರು ಬಿಟ್ಟು ಬಿಟ್ಟರು. ಸಾಕಷ್ಟು ಸಲ ಸಮಜಾಯಿಷಿ ನೀಡ ಹೋದರೂ, “ಒಬ್ಬ ರೌಡಿಗೆ ನಾವು ಮಗಳನ್ನು ಕೊಡೋದಿಲ್ಲ’ ಎನ್ನುವ ಸ್ಪಷ್ಟ ನಿರ್ಧಾರ ಸಾರಿಬಿಟ್ಟರು.

ಅಲ್ಲಿಯವರೆಗೆ ಸಾವಿರ ದೇವರುಗಳ ಮೇಲೆ ಆಣೆ ಮಾಡಿ, ನದಿ-ಸಾಗರಗಳ ನೀರನ್ನು ತಲೆಗೆ ಸುರುವಿಕೊಂಡು, ಭೂಮಿ-ಆಗಸದ ಸಾಕ್ಷಿ ಕೊಟ್ಟು, ಅಮರಪ್ರೇಮಿಗಳ ವಕಾಲತ್ತು ವಹಿಸಿ ಎಂದೆಂದಿಗೂ ಅಗಲದ ದೃಢ ನಿರ್ಧಾರ ತಳೆದಿದ್ದ ನೀನು, ನಿಮ್ಮಪ್ಪ ಹಾಕಿದ ಒಂದೇ ಆವಾಜಿಗೆ ಹೆದರಿ ಒಳಕೋಣೆ ಸೇರಿಬಿಟ್ಟೆ. ಮತ್ತು ಆ ಕ್ಷಣದಿಂದಲೇ ನಾನು ದಿಕ್ಕೆಟ್ಟ ಪರದೇಶಿ ಆಗಿಬಿಟ್ಟೆ.

ನಿಜಕ್ಕೂ ಅವತ್ತೇನಾಯ್ತು ಗೊತ್ತಾ..? ನನ್ನ ಜೀವದ ಗೆಳೆಯನನ್ನು ಯಾರೋ ಪೋಲಿಗಳು ಕೆಣಕಿದ್ದರಂತೆ. ನಾವೆಲ್ಲ ಸೇರಿ ಅವರಿಗೆ ಎಚ್ಚರಿಕೆ ಕೊಡೋಣಾಂತ ಬೈಕ್‌ ಮೇಲೆ ಮೂರು ಮೂರು ಜನ ಕೂತ್ಕೊಂಡು, ಕೈಯಲ್ಲಿ ಹಾಕಿ ಸ್ಟಿಕ್‌ ಹಿಡ್ಕೊಂಡು ಜೋರಾಗಿ ಅರಚಾ¤ ಹೋಗ್ತಿದ್ವಿ. ಅದನ್ನು ನೋಡಿದ ನಿಮ್ಮಪ್ಪ ನನ್ನನ್ನೇ ರೌಡಿ ಅಂತ ನಂಬಿ ಬಿಡೋದಾ?
ಬೇಡ ಚಿನ್ನು, ನಿನ್ನ ಗಾಢ ಮೌನ ಎದೆಯ ಮೇಲೆ ಕಾದ ಕಬ್ಬಿಣದ ಸೀಸದಂತೆ ಬರೆ ಎಳೆಯುತ್ತಿದೆ. ನಿನ್ನ ಬಿಟ್ಟಿರಲಾರದ ನಾನು ಒಂದಲ್ಲ ಒಂದಿವ್ಸ ಚೆಲುವಿನ ಚಿತ್ತಾರದ ಗಣೇಶ್‌ನ ಹಾಗೆ ಹುಚ್ಚನಂತೆ, ತಲೆ ಕೆದರಿಕೊಂಡು  ನಿನ್ನೆದುರು  ಬಂದರೆ ಚೆನ್ನಾಗಿರುತ್ತಾ ಹೇಳು?

-ನಾಗೇಶ್‌ ಜೆ.ನಾಯಕ 

ಟಾಪ್ ನ್ಯೂಸ್

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Rishab Shetty: ʼಜೈ ಹನುಮಾನ್‌ʼ ಬಳಿಕ ಮತ್ತೊಂದು ತೆಲುಗು ಸಿನಿಮಾದಲ್ಲಿ ರಿಷಬ್‌ ಶೆಟ್ಟಿ?

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Kambala: ಶಿರ್ವ ನಡಿಬೆಟ್ಟು ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Belthangady-River

Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!

4

Karkala: ನಲ್ಲೂರು; ಮಹಿಳೆ ಆತ್ಮಹ*ತ್ಯೆ

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

TAMATE MOVIE: ಟೀಸರ್‌ನಲ್ಲಿ ತಮಟೆ ಸದ್ದು

Shirasi-1

Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Jalandhara Kannada Movie: ಜಲಂಧರ ಮೇಲೆ ಪ್ರಮೋದ್‌ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.