ಲಾಲು 165 ಕೋಟಿ ಆಸ್ತಿ ಜಪ್ತಿಗೆ ಕೊನೇ ನೋಟಿಸ್
Team Udayavani, Sep 12, 2017, 8:40 AM IST
ಹೊಸದಿಲ್ಲಿ: ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ಗೆ ಸೋಮವಾರ ಭಾರಿ ಹಿನ್ನಡೆಯಾಗಿದೆ. ನವ ದೆಹಲಿ ಮತ್ತು ಪಾಟ್ನಾಗಳಲ್ಲಿ ಅವರ ಕುಟುಂಬಕ್ಕೆ ಸೇರಿದ್ದು ಎಂದು ಹೇಳಲಾಗಿರುವ 165 ಕೋಟಿ ರೂ. ಮೌಲ್ಯದ ಆಸ್ತಿ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಂತಿಮ ನೋಟಿಸ್ ನೀಡಿದೆ. ದಕ್ಷಿಣ ದೆಹಲಿಯ ನ್ಯೂಫ್ರೆಂಡ್ಸ್ ಕಾಲೊನಿಯಲ್ಲಿರುವ ಜಮೀನು, ಎ.ಬಿ.ಎಕ್ಸ್ಪೋರ್ಟ್ಸ್ ಪ್ರೈ. ಲಿ. ಸೇರಿದಂತೆ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಪ್ರಕ್ರಿಯೆ ನಡೆದಿದೆ.
ಪಾಟ್ನಾ ನಗರದ ಸುತ್ತಮುತ್ತಲಿರುವ ಹಲವು ಜಮೀನು, ಈ ಪೈಕಿ ನಗರದ ಪ್ರಮುಖ ಕೇಂದ್ರದಲ್ಲಿ 3.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮಾಲ್ ಕೂಡ ಸೇರಿದೆ. ಅದರಿಂದಾಗಿಯೇ ಲಾಲು ಯಾದವ್ ಕುಟುಂಬದ ಐವರು ಸದಸ್ಯರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಆರೋಪಗಳು ಕೇಳಲಾರಂಭಿಸಿದ್ದವು. ಲಾಲು ಪತ್ನಿ ರಾಬಿx ದೇವಿ, ಪುತ್ರ ತೇಜಸ್ವಿ ಯಾದವ್, ಸಂಸದೆ ಮಿಸ್ಸಾ ಭಾರತಿ, ಅವರ ಪತಿ ವಿರುದ್ಧ ಐ.ಟಿ. ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.