ಆಮಿಷಗಳನ್ನು ನಂಬಲೇಬಾರದು ಸೈಬರ್‌ ವಂಚನೆ ಹೆಚ್ಚಳ


Team Udayavani, Sep 12, 2017, 7:54 AM IST

12-AN-3.jpg

ಡಿಜಿಟಲ್‌ ಇಂಡಿಯಾ ಜನಪ್ರಿಯಗೊಳಿಸಲು ನಡೆಸಿದ ಪ್ರಯತ್ನವನ್ನು ಸೈಬರ್‌ ಸುರಕ್ಷೆಯನ್ನು ಜನಪ್ರಿಯಗೊಳಿಸಲು ಮಾಡಿಲ್ಲ.

ಕೆಲ ಸಮಯದ ಹಿಂದೆ ಮುಂಬಯಿಯ ಕೆಲವು ಮಂದಿಯ ಬ್ಯಾಂಕ್‌ ಖಾತೆಯಿಂದ ಅವರಿಗೆ ಅರಿವಿಲ್ಲದಂತೆ ಹಣ ಮಾಯವಾಗತೊಡಗಿತು. ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಇದು ಬಹಳ ಜಿಗುಟು ಪ್ರಕರಣವಾಗಿ ಕಾಣಿಸತೊಡಗಿತು. ಏಕೆಂದರೆ ಹಣ ಕಳೆದುಕೊಂಡವರು ಆನ್‌ಲೈನ್‌ ವಹಿವಾಟು ಮಾಡುವಾಗ ಎಲ್ಲ ಸುರಕ್ಷಾ ಪ್ರಕ್ರಿಯೆಗಳನ್ನು ಪಾಲಿಸಿದ್ದರು. ಆದರೂ ಅದು ಹೇಗೋ ಅವರ ಬ್ಯಾಂಕ್‌ ಖಾತೆಯ ಪಾಸ್‌ವರ್ಡ್‌ ವಂಚಕರಿಗೆ ಸಿಕ್ಕಿ ಹಣ ಲಪಟಾಯಿಸಲಾಗಿತ್ತು. ತನಿಖೆ ಮುಂದುವರಿದಂತೆ ಬೆಚ್ಚಿ ಬೀಳಿಸುವ ಅಂಶವೊಂದು ಪತ್ತೆಯಾಯಿತು. ಅವರು ಮೋಸ ಹೋದದ್ದು ಕೆಲವು ಮಾಮೂಲು ಹೊಟೇಲು ಸಪ್ಲಾಯರ್‌ಗಳಿಂದ. ಹೊಟೇಲ್‌ಗೆ ಹೋದ ಅವರು ತಿಂಡಿ ತಿಂದಾದ ಬಳಿಕ ಬಿಲ್‌ ಪಾವತಿಸಲು ಕಾರ್ಡ್‌ಗಳನ್ನು ಸಪ್ಲಾಯರ್‌ಗಳ ಕೈಗೆ ಕೊಟ್ಟು ಜತೆಗೆ ಪಿನ್‌ ನಂಬರ್‌ ಕೂಡ ಹೇಳಿದ್ದರು. ಸಪ್ಲಾಯರ್‌ಗಳು ಕಾರ್ಡ್‌ ಕ್ಲೋನ್‌ ಮಾಡಿ ಪಿನ್‌ ನಂಬರ್‌ ಬರೆದಿಟ್ಟುಕೊಂಡು ಅನಂತರ ಖಾತೆಯಿಂದ ಹಣ ಲಪಟಾಯಿಸಿದ್ದಾರೆ. ಒಂದು ವ್ಯವಸ್ಥಿತ ಜಾಲವೇ ಇದರ ಹಿಂದೆ ಕಾರ್ಯಾಚರಿಸುತ್ತಿತ್ತು. ಸಪ್ಲಾಯರ್‌ಗಳ ಮೇಲಿಟ್ಟ ನಂಬಿಕೆಯೇ ಅವರಿಗೆ ಮುಳುವಾಯಿತು. ಈ ರೀತಿಯ ವಂಚನೆಗಳು ಈಗ ದಿನಂಪ್ರತಿ ಎಂಬಂತೆ ನಡೆಯುತ್ತಿರುತ್ತವೆ. ಕಳೆದ ಬರೀ ಆರು ತಿಂಗಳ ಅವಧಿಯಲ್ಲಿ ಸುಮಾರು 27,000 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿವೆ! 

ಕಳೆದ ನವಂಬರ್‌ನಲ್ಲಿ ಕಪ್ಪುಹಣ ಬಯಲಿಗೆಳೆಯಲು ಹಾಗೂ ಡಿಜಿಟಲ್‌ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ಬಳಿಕ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗಿವೆ ಎನ್ನುವುದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವೇ ಬಹಿರಂಗಪಡಿಸಿದೆ. ನೋಟು ರದ್ದುಗೊಳಿಸಿದ ಬಳಿಕ ಡಿಜಿಟಲ್‌ ವ್ಯವಹಾರಗಳನ್ನು ಜನಪ್ರಿಯಗೊಳಿಸಲು ಸರಕಾರವೇ ಅಭಿವೃದ್ಧಿ ಪಡಿಸಿದ ಭೀಮ್‌ ಆ್ಯಪ್‌ ಹಾಗೂ ಖಾಸಗಿ ವಲಯದ ಪೇಟಿಎಂ ಸೇರಿದಂತೆ ಯಾವ ಆನ್‌ಲೈನ್‌ ಮಾಧ್ಯಮಗಳು ಸಂಪೂರ್ಣ ಸುರಕ್ಷಿತವಲ್ಲ ಎಂಬುದನ್ನು ಅಧ್ಯಯನಗಳು ತಿಳಿಸುತ್ತಿವೆ. 2020ರೊಳಗೆ ದೇಶದಲ್ಲಿ 175 ದಶಲಕ್ಷ ಇ-ಶಾಪಿಂಗ್‌ ಮಾಡುವವರು ಇರುತ್ತಾರೆ. ಈಗಾಗಲೇ ಸುಮಾರು 470 ದಶಲಕ್ಷ ಇಂಟರ್‌ನೆಟ್‌ ಬಳಕೆದಾರರು ದೇಶದಲ್ಲಿದ್ದಾರೆ. ಇ-ಕಾಮರ್ಸ್‌ ವೆಬ್‌ಸೈಟ್‌ ಮತ್ತು ಆ್ಯಪ್‌ಗ್ಳು ಮೂಲಕ ಖರೀದಿ ಮಾಡುವುದು ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರ. ಡಿಜಿಟಲ್‌ ವಹಿವಾಟು ಅಧಿಕವಾದಂತೆ ಸೈಬರ್‌ ವಂಚನೆಗಳು ಹೆಚ್ಚುತ್ತಿರುವುದು ಸಹಜ. ನಗದುರಹಿತ ವಹಿವಾಟಿಗೆ ಅಗತ್ಯವಿರುವ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳದೆ ಡಿಜಿಟಲ್‌ ವ್ಯವಹಾರಗಳನ್ನು ಅವಸರದಲ್ಲಿ ಜನಪ್ರಿಯಗೊಳಿಸಲು ಮುಂದಾಗಿರುವುದರ ಪರಿಣಾಮವಿದು. 

ಈಗಲೂ ದೇಶದಲ್ಲಿ ಸಾಂಪ್ರದಾಯಿಕವಾದ ಕಂಪ್ಯೂಟರ್‌ ವ್ಯವಸ್ಥೆಯನ್ನೇ ಬಳಸುತ್ತಿದ್ದೇವೆ, ಅದೇ ಹಳೇ ಸಾಫ್ಟ್ವೇರ್‌ ಮತ್ತು ಪುರಾತನ ಹಾರ್ಡ್‌ವೇರ್‌ ಬಳಕೆಯಲ್ಲಿವೆ. ಜಗತ್ತಿನೆಲ್ಲೆಡೆ ತಿರಸ್ಕೃತವಾಗಿರುವ ಕಂಪ್ಯೂಟರ್‌ ಸಿಸ್ಟಮ್‌ ಭಾರತಕ್ಕೆ ಬರುತ್ತಿದೆ. ಹೊಸ ಮಾದರಿಯ ವೈರಸ್‌ ದಾಳಿಗಳನ್ನು ತಡೆಯುವ ಸಾಮರ್ಥ್ಯ ಈ ಕಂಪ್ಯೂಟರ್‌ಗಳಿಗಿಲ್ಲ. ಹೀಗಾಗಿ ಸೈಬರ್‌ ವಂಚಕರಿಗೆ ಭಾರತದ ಗ್ರಾಹಕರು ಸುಲಭ ತುತ್ತಾಗುತ್ತಿದ್ದಾರೆ. ಜಿಎಸ್‌ಟಿ ಜಾರಿಯಾದ ಬಳಿಕ ಮಾಮೂಲು ಕಿರಾಣಿ ಅಂಗಡಿ ಮತ್ತು ಹೊಟೇಲುಗಳಲ್ಲೂ ಕಂಪ್ಯೂಟರ್‌ ಬಳಕೆ ಅನಿವಾರ್ಯವಾಗಿದೆ. ಆದರೆ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲು ನಡೆಸಿದಷ್ಟು ಪ್ರಯತ್ನವನ್ನು ಸರಕಾರ ಸೈಬರ್‌ ಸುರಕ್ಷೆಯನ್ನು ಜನಪ್ರಿಯಗೊಳಿಸಲು ಮಾಡಿಲ್ಲ. ಈ ವಿಚಾರದಲ್ಲಿ ಜನಸಾಮಾನ್ಯರಿನ್ನೂ ಅನರಕ್ಷರಸ್ಥರಾಗಿಯೇ ಉಳಿದಿದ್ದಾರೆ. ಆಧಾರ್‌ ಲಿಂಕಿಂಗ್‌, ಬಯೋಮೆಟ್ರಿಕ್‌ ಎಂಟ್ರಿ ಇಂತಹ ಸಂದರ್ಭಗಳೆಲ್ಲ ಹೇಳಿಕೊಟ್ಟ ಸಿದ್ಧ ಮಾದರಿಯೊಂದನ್ನು ಅನುಸರಿಸುತ್ತಾರೆಯೇ ಹೊರತು ಅದರ ಸುರಕ್ಷತೆಯ ಬಗ್ಗೆ ಯಾವ ಅರಿವು ಇರುವುದಿಲ್ಲ. 

ಕದ್ದು ತಂದ ಸಾಫ್ಟ್ವೇರ್‌ಗಳನ್ನು ಅಳವಡಿಸುವ ಚಾಳಿ ಬಿಟ್ಟರೆ ಅರ್ಧದಷ್ಟು ಸೈಬರ್‌ ವಂಚನೆ ತಡೆಗಟ್ಟಬಹುದು. ಕಾಲಕಾಲಕ್ಕೆ ಸಾಫ್ಟ್ ವೇರ್‌ ಪರಿಷ್ಕರಣೆಗೊಳಪಡಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಲಾಟರಿ ಗೆದ್ದಿದ್ದೀರಿ, ಶ್ರೀಮಂತ ವ್ಯಕ್ತಿ ನಿಮಗಾಗಿ ಕೋಟಿಗಟ್ಟಲೆ ಸಂಪತ್ತು ಬಿಟ್ಟು ಹೋಗಿದ್ದಾನೆ ಎಂಬಿತ್ಯಾದಿ ಆಮಿಷಗಳನ್ನು ನಂಬಲೇಬಾರದು. ಪ್ರತಿಯೊಬ್ಬರಿಗೂ ಕನಿಷ್ಠ ಡೆಬಿಟ್‌ /ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವಾಗ ವಹಿಸಬೇಕಾಗಿರುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಹೇಳಿಕೊಡಬೇಕು. ರಾಷ್ಟ್ರೀಯ ಡಿಜಿಟಲ್‌ ಸಾಕ್ಷರತೆ ಕಾರ್ಯಕ್ರಮದಲ್ಲಿ ಈ ಮೂಲ ಅಂಶಗಳೇ ಇಲ್ಲ ಎನ್ನುವುದು ಈ ವಿಚಾರದಲ್ಲಿ ನಾವೆಷ್ಟು ಹಿಂದೆ ಇದ್ದೇವೆ ಎನ್ನುವುದನ್ನು ತಿಳಿಸುತ್ತದೆ.

ಟಾಪ್ ನ್ಯೂಸ್

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.