ಮೈಮೂಲ್‌ಗೆ 9 ಲಕ್ಷ ಲೀ. ಹಾಲು

Team Udayavani, Sep 12, 2017, 12:13 PM IST

mys4.jpg

ಪಿರಿಯಾಪಟ್ಟಣ: ಮೈಸೂರು ಜಿಲ್ಲಾ ಹಾಲು ಒಕ್ಕೂಟಕ್ಕೆ ತಾಲೂಕಿನಿಂದ 9 ಲಕ್ಷ ಲೀಟರ್‌ ಹಾಲು ಬರುತ್ತಿದೆ ಎಂದು ಮೈಮೂಲ್‌ ನಿರ್ದೇಶಕ ಪಿ.ಎಂ.ಪ್ರಸನ್ನ ತಿಳಿಸಿದರು. ತಾಲೂಕಿನ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 2016-17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ನಮ್ಮ ತಾಲೂಕಿನಲ್ಲಿ ಹೆಚ್ಚು ಕಳಪೆ ಹಾಲು ಬರುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ 5 ರೂ. ಪ್ರೋತ್ಸಾಹ ಧನವನ್ನು ಉಪಯೋಗಿಸಿಕೊಂಡು ಗುಣಮಟ್ಟದ ಹಾಲನ್ನು ಹಾಕಬೇಕು. ಒಕ್ಕೂಟದಲ್ಲಿರುವ ಜನಶ್ರೀ ಯೋಜನೆ, ಯಶಸ್ವಿನಿ ಯೋಜನೆಗಳನ್ನು ಸಂಘದ ಸದಸ್ಯರು ಪಡೆದುಕೊಳ್ಳಬಹುದು. ಯಶಸ್ವಿನಿ ಯೋಜನೆಗೆ ನೋಂದಣಿಯಾಗಲು ನೀವು ಒಬ್ಬರಿಗೆ 200 ರೂ. ಪಾವತಿಸಿದರೆ, ಒಕ್ಕೂಟ 100 ರೂ.ಗಳನ್ನು ಪಾವತಿಸುತ್ತದೆ ಎಂದರು.

ವಿಮೆ ಮಾಡಿಸಿ: ಅಲ್ಲದೇ, ಜನಶ್ರೀ ಯೋಜನೆಗೆ ಒಳಪಡಲು ಸಂಘದ ಸದಸ್ಯ 100 ರೂ. ಪಾವತಿಸಿದರೆ, ಒಕ್ಕೂಟ 100 ರೂ. ಪಾವತಿಸುತ್ತದೆ. ಜನಶ್ರೀ ಯೋಜನೆಯಲ್ಲಿ ನೋಂದಣಿಯಾದವರು ಮರಣ ಹೊಂದಿದರೆ 1 ಲಕ್ಷ ರೂ. ಒಕ್ಕೂಟದಿಂದ ದೊರೆಯುತ್ತದೆ. ಅಲ್ಲದೇ, ಯೋಜನೆಗೊಳಪಟ್ಟ ಸದಸ್ಯರ ಮಕ್ಕಳ ವಿದ್ಯಾಭ್ಯಾಸದಲ್ಲಿ 1,200 ರೂ.ಗಳನ್ನು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಹಾಗೆಯೇ ರಾಸುಗಳಿಗೆ ವಿಮೆ ಕೂಡ ಮಾಡಿಸಿದರೆ ಉತ್ತಮ. ಇಷ್ಟೆಲ್ಲಾ ಸವಲತ್ತುಗಳು ಸಿಗುತ್ತಿವೆ ಎಂದರೆ ಹಾಲು ಒಕ್ಕೂಟ ಪ್ರಾರಂಭಿಸಿದ ಡಾ. ಕುರಿಯನ್‌ ಅವರನ್ನು ಸ್ಮರಿಸಬೇಕಾಗುತ್ತದೆ ಎಂದರು.

ವರದಿ ವಾಚನ: ಸಂಘದ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಆರ್‌.ಪ್ರಕಾಶ್‌ 2016-17ನೇ ಸಾಲಿನ ವಾರ್ಷಿಕ ವರದಿಯನ್ನು ಓದಿದರು. ಲಾಭ ವಿಲೇವಾರಿ ಹಾಗೂ 2017-18ರ ಬಜೆಟ್‌ ತಿಳಿಸಿದರು. ಸಂಘ ಒಟ್ಟು 7.23 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಬಿ.ಎಂ.ಪರಮೇಶ್ವರ, ಮಾಜಿ ಅಧ್ಯಕ್ಷ ಸಿದ್ದೇಗೌಡ, ನಿರ್ದೇಶಕರಾದ ಮಲ್ಲಿಕಾರ್ಜುನ, ಮೂರ್ತಿ, ಬಿ.ಕೆ.ಮಂಜುನಾಥ್‌, ಚಲುವಪ್ಪ, ಪುಟ್ಟರಾಜು, ಚನ್ನಯ್ಯ, ತಿಮ್ಮಾಜಮ್ಮ, ವಿಸ್ತರಣಾಧಿಕಾರಿ ಶ್ರೀಕಾಂತ್‌, ಸಂಘದ ಸಿಬ್ಬಂದಿ ಜಲೇಂದ್ರ, ತಮ್ಮೇಗೌಡ, ಪಶು ಪರಿವೀಕ್ಷಕ ನಾರಾಯಣಗೌಡ ಹಾಗೂ ಸರ್ವ ಷೇರುದಾರರು ಇದ್ದರು.

“ಸಾಲುಕೊಪ್ಪಲು ಸಂಘಕ್ಕೆ 2.38 ಲಕ್ಷ ರೂ. ಲಾಭ’
ತಾಲೂಕಿನ ಸಾಲುಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2016-17ನೇ ಸಾಲಿನ ವಾರ್ಷಿಕ ಸಭೆ ನಡೆಯಿತು. ಮೈಮೂಲ್‌ ವಿಸ್ತರಣಾಧಿಕಾರಿ ಶ್ರೀಕಾಂತ್‌ ವಾರ್ಷಿಕ ವರದಿಯನ್ನು ಓದಿ, ಸಂಘ 2.38 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಮೂಲ್‌ ನಿಧೇìಶಕ ಪಿ.ಎಂ.ಪ್ರಸನ್ನ, ಗ್ರಾಮದ ಮುಖಂಡ ಪುಟ್ಟರಾಜು ಮಾತನಾಡಿದರು.

ಸಂಘದ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ, ನಿರ್ದೇಶಕರಾದ ಗೌರಮ್ಮ, ರಾಥಾ ನೇತ್ರಾವತಿ, ಜಯಂತಿ, ಬೋರಮ್ಮ, ಪದ್ಮಮ್ಮ, ಮಂಉಳಮ್ಮ, ಪೂರ್ಣಿಮಾ, ಮಂಜುಳಾ, ತಾಯಮ್ಮ, ಮಂಜಮ್ಮ, ಜ್ಯೋತಿ, ಗ್ರಾಮದ ಮುಖಂಡ ಬಸವರಾಜು, ಕಾಂತರಾಜು, ಸಂಘದ ಸದಸ್ಯರು, ಸಿಇಒ ರತ್ನಮ್ಮ ಹಾಗೂ ಗ್ರಾಮಸ್ಥರು ಇದ್ದರು.

ಟಾಪ್ ನ್ಯೂಸ್

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

2-bng

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Andhra-Kalyan–Khandre

Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ

HD-Kumaraswamy

Congress Government: ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಂದು ಎಚ್‌ಡಿಕೆ ದಾಖಲೆ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Mysuru-Dasara

Mysuru Dasara: ಎದೆ ಝಲ್‌ ಎನ್ನಿಸಿದ ಶಬ್ದಕ್ಕೂ ಜಗ್ಗದ ಗಜಪಡೆ

2

Hunsur: ಶುಂಠಿಹೊಲದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

2-bng

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.