ಟೈಟಾನ್ಸ್‌ ಮುಳುಗಿಸಿದ ಕುನ್‌ ಲೀ

Team Udayavani, Sep 13, 2017, 7:20 AM IST

Bengali-Warrior,-Telugu-Tit.jpg

ಸೋನೆಪತ್‌(ಹರ್ಯಾಣ): ಕೊನೆಯ 2 ನಿಮಿಷದ ಆಟದಲ್ಲಿ ಬೆಂಗಾಲ್‌ ವಾರಿಯರ್ ಎದುರಿಗಿದ್ದ ಸೋಲು ಗೆಲುವಾಗಿ ಮಾರ್ಪಟ್ಟಿತು.

ಹೌದು, ಇಲ್ಲಿನ ಮೋತಿಲಾಲ್‌ ನೆಹರೂ ಸ್ಕೂಲ್‌ ಆಫ್ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಾಲ್‌ 32-31 ಅಂತರದ ವೀರೋಚಿತ ಗೆಲುವು ಸಾಧಿಸಿತು. ಬೆಂಗಾಲ್‌ ಗೆಲುವಿಗೆ ಕಾರಣವಾಗಿದ್ದು ಜಾಂಗ್‌ ಕುನ್‌ ಲೀ (9 ರೈಡಿಂಗ್‌ ಅಂಕ) ಮಿಂಚಿನ ರೈಡಿಂಗ್‌. ಅಲ್ಲದೆ ಮಣೀಂದರ್‌ ಸಿಂಗ್‌ (7 ರೈಡಿಂಗ್‌ ಅಂಕ) ಹಾಗೂ ಸುರ್ಜಿತ್‌ ಸಿಂಗ್‌ (5 ಟ್ಯಾಕಲ್‌ ಅಂಕ) ಅವರ ಕೊನೆಯ ನಿಮಿಷದ ಸಾಹಸಮಯ ಆಟ. ಒಂದು ಹಂತದಲ್ಲಿ 30-20 ಅಂಕದಿಂದ ಭಾರೀ ಮುನ್ನಡೆ ಪಡೆದಿದ್ದರೂ ತೆಲುಗು ಕೊನೆಯ 2 ನಿಮಿಷದ ಆಟದಲ್ಲಿ ಎಚ್ಚರ ತಪ್ಪಿ ಸೋಲು ಅನುಭವಿಸಿತು.

ಕುನ್‌ ಲೀ ಜಾದೂ: 19-23 ಆಗಿದ್ದಾಗ ಸೂಪರ್‌ ರೈಡಿಂಗ್‌ನಲ್ಲಿ ನೀಲೇಶ್‌ ಸಾಳುಂಕೆ 4 ಅಂಕ ತಂದರು. ಹೀಗಾಗಿ ಬೆಂಗಾಲ್‌ 2ನೇ ಅವಧಿಯಲ್ಲಿ ಆಟ ಮುಗಿಯಲು 7 ನಿಮಿಷ ಇದ್ದಾಗ 2ನೇ ಬಾರಿ ಆಲೌಟಾಯಿತು. ಈ ವೇಳೆ ತೆಲುಗು ಮುನ್ನಡೆ ಅಂತರವನ್ನು 10ಕ್ಕೆ ಏರಿಸಿಕೊಂಡು ಬೀಗಿತು. ಅಲ್ಲಿಂದ ಬಳಿಕ ಬೆಂಗಾಲ್‌ ಭರ್ಜರಿ ಆಟ ಪ್ರದರ್ಶಿಸಿತು. ಪಂದ್ಯ ಮುಗಿಯಲು ಇನ್ನೇನು 2 ನಿಮಿಷ ಇದೆ ಎನ್ನುವಾಗ 31-30 ರಿಂದ ಮುನ್ನಡೆ ಪಡೆದುಕೊಂಡಿತು. ಆದರೆ ಬೆಂಗಾಲ್‌ನ ಸುರ್ಜಿತ್‌ ಸಿಂಗ್‌ ಅನಾವಶ್ಯಕವಾಗಿ ವಿಕಾಸ್‌ರನ್ನು ಹಿಡಿಯಲು ಹೋಗುವುದರೊಂದಿಗೆ ಮತ್ತೆ 31-31 ಅಂಕದೊಂದಿಗೆ ಟೈ ಆಯಿತು. ಆದರೆ ಕೊನೆಯ ಮಾಡು ಇಲ್ಲವೆ ಮಡಿ ರೈಡಿಂಗ್‌ನಲ್ಲಿ ಕೊರಿಯನ್‌ ಹೀರೋ ಜಾಂಗ್‌ ಕುನ್‌ ಲೀ ರೈಡಿಂಗ್‌ನಲ್ಲಿ ಅಂಕ ತರುವುದರೊಂದಿಗೆ ಬೆಂಗಾಲ್‌ 32-31 ಅಂತರದಿಂದ ರೋಚಕ ಗೆಲುವು ಸಾಧಿಸಿತು.

ರಾಹುಲ್‌ ವೈಫ‌ಲ್ಯ, ಟೈಟಾನ್ಸ್‌ಗೆ ಸೋಲು: ತಾರಾ ರೈಡರ್‌ ರಾಹುಲ್‌ ಚೌಧರಿ ತೆಲುಗು ಟೈಟಾನ್ಸ್‌ ಪರ ಮಿಂಚಲಿಲ್ಲ. ಜತೆಗೆ ಡಿಫೆಂಡರ್‌ಗಳು ಕೂಡ ಕೈಕೊಟ್ಟರು. 14 ರೈಡಿಂಗ್‌ ಮಾಡಿದ ರಾಹುಲ್‌ ಕೇವಲ 4 ಅಂಕ ತರಲಷ್ಟೇ ಶಕ್ತರಾದರು. ಇದು ಟೈಟಾನ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.

ಮೊದಲ ಅವಧಿಯ ಆರಂಭದ ಕೆಲ ನಿಮಿಷ ಬೆಂಗಾಲ್‌ ಮಿಂಚಿನ ಆಟ ನಿರ್ವಹಿಸಿತು. ಆದರೆ ತೆಲುಗು ತಕ್ಕ ಪ್ರತ್ಯುತ್ತರ ನೀಡಿತು. ಅಲ್ಲದೆ ಒಟ್ಟಾರೆ ಮೊದಲ ಅವಧಿಯ ಮುಕ್ತಾಯಕ್ಕೆ ತೆಲುಗು 15-12 ಅಂಕದ ಮುನ್ನಡೆ ಪಡೆಯಿತು. ಈ ಅವಧಿಯಲ್ಲಿ ಬೆಂಗಾಲ್‌ 2 ಬಾರಿ ಸೂಪರ್‌ ಟ್ಯಾಕಲ್‌ ನಡೆಸಿತು. ಅಂಕಗಳಿಕೆಯಲ್ಲಿ ಸಮಸಾಧಿಸಿಕೊಂಡಿತು. ಆದರೆ ಅದೃಷ್ಟ ಬೆಂಗಾಲ್‌ ಪರ ಇರಲಿಲ್ಲ. ಕುನ್‌ ಲೀ (3 ರೈಡಿಂಗ್‌), ಸುರ್ಜಿತ್‌ ಸಿಂಗ್‌ (4 ಟ್ಯಾಕಲ್‌) ಅಂಕದ ಹೊರತಾಗಿಯೂ ಒಂದನೇ ಅವಧಿಯ ಆಟ ಮುಗಿಯಲು ಇನ್ನೇನು 2 ನಿಮಿಷ ಬಾಕಿ ಇರುವಾಗ ಬೆಂಗಾಲ್‌ ಮೊದಲ ಬಾರಿ ಆಲೌಟಾಗಿ ಹಿನ್ನಡೆ ಅನುಭವಿಸಿತು. ಟೈಟಾನ್ಸ್‌ ಪರ ನಿಲೇಶ್‌ ಸಾಳುಂಕೆ (5 ರೈಡಿಂಗ್‌) ತಂಡಕ್ಕೆ ಮುನ್ನಡೆ ನೀಡಿದ ಆಟಗಾರ ಎನಿಸಿಕೊಂಡರು. ಆದರೆ ತೆಲುಗು ತಂಡದ ರಾಹುಲ್‌, ರೋಹಿತ್‌ರಿಂದ ಈ ಅವಧಿಯಲ್ಲೂ ಗಮನಾರ್ಹ ಪ್ರದರ್ಶನ ಹೊರಬರಲಿಲ್ಲ.

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.