ಜಯಾ ಎಐಎಡಿಎಂಕೆ ಶಾಶ್ವತ ಕಾರ್ಯದರ್ಶಿ, ಶಶಿಕಲಾ, ದಿನಕರನ್ ವಜಾ
Team Udayavani, Sep 13, 2017, 8:30 AM IST
ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಅವರೇ ಪಕ್ಷದ “ಶಾಶ್ವತ ಪ್ರಧಾನ ಕಾರ್ಯದರ್ಶಿ’ ಎಂದು ಆಡಳಿತ ಪಕ್ಷ ಎಐಎಡಿಎಂಕೆ ಘೋಷಿಸಿದೆ. ಹಾಗೇ ನಿರೀಕ್ಷೆಯಂತೆ ವಿ.ಕೆ.ಶಶಿಕಲಾ ಹಾಗೂ ಅವರ ಸಂಬಂಧಿ ಟಿ.ಟಿ.ವಿ.ದಿನಕರನ್‌ರನ್ನು ಪಕ್ಷದಿಂದ ವಜಾ ಮಾಡಿ, ಮಂಗಳವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಮೂಲಕ ಡಿಸಿಎಂ ಓ.ಪನ್ನೀರ್‌ಸೆಲ್ವಂ ನೇತೃತ್ವದಲ್ಲಿ ಪಕ್ಷದ ಎಲ್ಲ ವ್ಯವಹಾರಗಳು ನಡೆಯಲಿದ್ದು, ಸಿಎಂ ಇ.ಪಳನಿಸ್ವಾಮಿ ಸಹಾಯಕರಾಗಿರಲಿದ್ದಾರೆ. ಇದರೊಂದಿಗೆ ಪಕ್ಷದ ಚಟುವಟಿಕೆಗಳ ನಿರ್ವಹಣೆಗೆ 11 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಉಪ ಕಾರ್ಯದರ್ಶಿ ಸ್ಥಾನದಿಂದ ದಿನಕರನ್ ವಜಾಗೊಂಡಿದ್ದಾರೆ.
ಮಂಗಳವಾರ ನಡೆಯಲಿದ್ದ ಸಭೆಗೆ ಅವಕಾಶ ನೀಡದಂತೆ ಕೋರಿ ದಿನಕರನ್ ಬಣ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ ಸೋಮವಾರ ಈ ಅರ್ಜಿ ವಜಾಗೊಳಿಸಿದ್ದ ನ್ಯಾಯಾಲಯ, ಸಭೆ ನಡೆಸಲು ಅನುಮತಿ ನೀಡಿತ್ತು. ಸಭೆ ನಡೆದರೆ ತಮ್ಮನ್ನು ಪಕ್ಷದಿಂದ ಕಿತ್ತೆಸೆಯುತ್ತಾರೆ ಎಂಬ ಶಶಿಕಲಾ ಬಣದ ಆತಂಕ ನಿಜವಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಬಂಡಾಯ ಬಣದ ಇಬ್ಬರೂ ನಾಯಕರನ್ನು ವಜಾ ಮಾಡಲಾಗಿದೆ. ಮಂಗಳವಾರ ನಡೆದ ಸಭೆಗೆ ಶಶಿಕಲಾ ಬಣದ 18 ಬೆಂಬಲಿಗರು ಬಂದಿರಲಿಲ್ಲ. ಆದರೂ ಈ ಪೈಕಿ 9 ಮಂದಿ ಸಿಎಂ ಪಳನಿಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಎಐಎಡಿಎಂಕೆ ಹೇಳಿಕೊಂಡಿದೆ.
ಬಹುಮತ ಖಚಿತ? 234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ 117 ಸದಸ್ಯರ ಬೆಂಬಲ ಬೇಕಿದೆ. ಪಕ್ಷದ ಪ್ರಕಾರ ಸರ್ಕಾರಕ್ಕೆ 124 ಶಾಸಕರ ಬೆಂಬಲವಿದ್ದು, ವಿಶ್ವಾಸಮತ ಪರೀಕ್ಷೆ ನಡೆದರೆ ಸರ್ಕಾರಕ್ಕೇನೂ ಧಕ್ಕೆಯಿಲ್ಲ ಎನ್ನಲಾಗಿದೆ. ಆದರೆ ಸರ್ಕಾರ ಅಧಿವೇಷನ ಕರೆದರೆ ಮಾತ್ರ ಪ್ರತಿಪಕ್ಷ ಡಿಎಂಕೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿರಲಿದೆ.
ಕೊಡಗಿನಲ್ಲಿ ತಮಿಳುನಾಡು ಶಾಸಕರಿಗೆ ಶೋಧ
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಬಳಿಯಲ್ಲಿನ ಪ್ಯಾಡಿಗ¾ಂಟನ್ ರೆಸಾರ್ಟ್‌ನಲ್ಲಿ ತಮಿಳುನಾಡು ಶಾಸಕರ ಹೈಡ್ರಾಮ ನಡೆದಿದೆ. ಟಿ.ಟಿ.ವಿ. ದಿನಕರನ್ ಬಣಕ್ಕೆ ಸೇರಿದ 17 ಶಾಸಕರು ಕೆಲವು ದಿನಗಳಿಂದ ಇಲ್ಲಿ ರಹಸ್ಯವಾಗಿ ಆಶ್ರಯ ಪಡೆದಿದ್ದಾರೆ. ಆದರೆ, ಶಾಸಕರೊಬ್ಬರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ, ಅಕ್ರಮವಾಗಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಿದ್ದರು. ಹೀಗಾಗಿ ತಮಿಳುನಾಡು ಪೊಲೀಸ್ ತಂಡ ಮಂಗಳವಾರ ಮಧ್ಯಾಹ್ನ ರೆಸಾರ್ಟ್‌ಗೆ ಧಾವಿಸಿ ಮಾಹಿತಿ ಸಂಗ್ರಹಿ ಸಿದೆ. ಮಂಗಳವಾರ ಸಂಜೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಬಂದ ತಮಿಳುನಾಡು ಪೊಲೀಸರು ತಮ್ಮ ತಪಾಸಣೆ ಸಂಬಂಧಿತ ಮಾಹಿತಿ ನೀಡಿದ್ದಾರೆ.
ಕೊಯಮತ್ತೂರಿನ ಡಿಸಿಪಿ ಸೇರಿ ಇಬ್ಬರು ಎಸ್ಪಿ ಗಳು, 5 ಇನ್ಸ್‌ಪೆಕ್ಟರ್ ಗಳು, 20 ಪೊಲೀಸ್ ಅಧಿಕಾರಿ ಗಳು ತಮಿಳುನಾಡು ಪೊಲೀಸ್ ತಂಡದಲ್ಲಿದ್ದಾರೆ ಎನ್ನಲಾಗಿದೆ. ಆದರೆ, ತಮಿಳುನಾಡು ಪೊಲೀಸ್ ತಂಡ ತಪಾಸಣೆ ಮಾಡಿರುವ ಬಗ್ಗೆ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಶಾಸಕನಿಗಾಗಿ ಹುಡುಕಾಟ: ಮತ್ತೂಂದು ಬೆಳವಣಿಗೆಯಲ್ಲಿ ಪ್ರಕರಣವೊಂದರ ವಿಚಾರಣೆಗೆ ಅಗತ್ಯವಾಗಿದ್ದು, ತಲೆಮರೆಸಿಕೊಂಡಿರುವ ತಮಿಳು ನಾಡಿನ ಶಾಸಕರೊಬ್ಬರ ಪತ್ತೆಗಾಗಿ ನೆರೆ ರಾಜ್ಯದ ಪೊಲೀಸರು ಏಳನೇಹೊಸಕೋಟೆಯ ರೆಸಾರ್ಟ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.