ಎಂ.ಬಿ.ಪಾಟೀಲ್ರದ್ದು ವಿನಾಶ ಕಾಲೇ ವಿಪರೀತ ಬುದ್ಧಿ
Team Udayavani, Sep 13, 2017, 11:15 AM IST
ಬಾಗಲಕೋಟೆ: ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಸಿದ್ಧಗಂಗಾ ಶ್ರೀಗಳ ಹೆಸರು ಎಳೆತಂದ ವಿಚಾರಕ್ಕೆ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ”ಎಂ.ಬಿ.ಪಾಟೀಲರದ್ದು ವಿನಾಶ ಕಾಲೇ ವಿಪರೀತ ಬುದ್ಧಿ. ಈ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಹೆಸರು ಎಳೆತರಬಾರದಿತ್ತು.ಅವರ ಬಗ್ಗೆ ಮಾತನಾಡಿದರೆ ಎಲ್ಲರೂ ಖಂಡಿಸುತ್ತಾರೆ. ಹೀಗಾಗಿ ಮೌನವಾಗಿದ್ದರೆ ಅವರಿಗೂ ಗೌರವ” ಎಂದರು.
ವೀರಶೈವ ಮಹಾಸಭಾ ನಿರ್ಧಾರಕ್ಕೆ ನಾವು ಬದ್ಧ
”ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ವೀರಶೈವ ಮಹಾಸಭಾ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಗೊಂದಲ ಸೃಷ್ಟಿಸುವುದು ಬೇಡ” ಎಂದರು.
ಭ್ರಷ್ಟಾಚಾರದ ಚಾರ್ಜ್ ಶೀಟ್ ರೆಡಿ
”ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬಂಧುಗಳು ಮಾಡಿರುವ ಭ್ರಷ್ಟಾಚಾರದ ಕುರಿತಾಗಿನ ಚಾರ್ಜ್ ಶೀಟ್ ಸಿದ್ದಪಡಿಸಿದ್ದು ಮುಂದಿನ ನಾಲ್ಕಾರು ದಿನಗಳಲ್ಲಿ ಹಗರಣವನ್ನು ಬಯಲು ಮಾಡುತ್ತೇನೆ” ಎಂದು ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ.
ರಾಹುಲ್ರದ್ದು ತಿರುಕನ ಕನಸು
”ಅಮೆರಿಕದಲ್ಲಿ ವಿದ್ಯಾರ್ಥಿಗಳ ಎದುರು ದೇಶದ ಮಾನ ಕಳೆದಿರುವ ರಾಹುಲ್ ಗಾಂಧಿ ಅವರು ಪ್ರಧಾನಿ ಯಾಗುವುದು ತಿರುಕ ಕಂಡ ಕನಸಿನಂತಿದೆ.ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಬಾಲಿಷವಾಗಿ ವರ್ತಿಸುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾ.. ಕೇಜ್ರಿವಾಲ್ ಹೇಳಿದ್ದೇನು?
ED Summons: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಡಿ ಸಮನ್ಸ್
Telangana ಪೊಲೀಸರ ಎನ್* ಕೌಂಟರ್ – ಕಮಾಂಡರ್ ಸೇರಿ ಏಳು ನಕ್ಸಲೀಯರ ಹ*ತ್ಯೆ
Noida: ಹಾಲಿಡೇ ಪ್ಯಾಕೇಜ್ ದಂಧೆಯ ನಕಲಿ ಕಾಲ್ ಸೆಂಟರ್ಗೆ ಪೊಲೀಸ್ ದಾಳಿ; 32 ಜನರ ಬಂಧನ
Digital Arrest; ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.