260 ಮನೆಗಳು ವಸತಿ ಹೀನರಿಗೆ ಹಸ್ತಾಂತರ
Team Udayavani, Sep 13, 2017, 11:25 AM IST
ಕೆಂಗೇರಿ: “ಸರ್ವರಿಗೂ ಸೂರು ಎನ್ನುವ ಧ್ಯೆಯೋದ್ದೇಶದ ಗುರಿ ಹೊತ್ತು ಅಧಿಕಾರಕ್ಕೆ ಬಂದ ಕಾಂಗ್ರೆಸ್, ನುಡಿದಂತೆ ನಡೆಯುತ್ತಿದೆ,’ ಎಂದು ಶಾಸಕ ಮುನಿರತ್ನ ತಿಳಿಸಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷಿದೇವಿ ನಗರ ಬಳಿಯ ಸಂಜಯನಗರದಲ್ಲಿ ರಾಜೀವ್ ಆವಾಜ್ ಯೋಜನೆ ಅಡಿಯಲ್ಲಿ ನಿರ್ಮಿಸಿರುವ 260 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು.
“ಸೂರಿಲ್ಲದೆ ಮಳೆ, ಗಾಳಿ, ಚಳಿಯಲ್ಲಿ ಪುಟ್ಟ ಗುಡಿಸಲುಗಳಲ್ಲಿ ಜೀವಿಸುತ್ತಿರುವ ಎಲ್ಲಾ ಜಾತಿಯ ಬಡವರು ನೆಮ್ಮದಿಯ ಜೀವನ ಸಾಗಿಸಲಿ ಎಂಬ ಉದ್ದೇಶದಿಂದ ಹೆಚ್ಚುವರಿಯಾಗಿ ಒಂದು ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು 2018ರ ಜನವರಿಯಲ್ಲಿ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗುವುದು. ಉಚಿತ ಕಾವೇರಿ ನೀರು, ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ ಶಾಲೆಯನ್ನು ಸ್ಥಳೀಯವಾಗಿ ಪ್ರಾರಂಭಿಸಲಾಗಿದೆ,’ ಎಂದು ತಿಳಿಸಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, “ವಿಧಾನಸಭೆ ಹಾಗೂ ಲೋಕಸಭೆಗಳ ಚುನಾವಣಾ ಸಂದರ್ಭಗಳಲ್ಲಿ ನೀಡಿದ ಆಶ್ವಾಸನೆಗಳನ್ನು ಸರ್ಕಾರ ಈಡೇರಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಹಸಿದವರಿಗೆ ಮೂರು ಹೊತ್ತು ಊಟ, ವಿದ್ಯಾಸಿರಿ, ಆರೋಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜನರಿಗೆ ತಲುಪಿಸಿದೆ,’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.