ಜಿಎಸ್‌ಟಿಯಲ್ಲಿ ಪಾಲಿಕೆಗೂ ಸಿಗಬೇಕು ಪಾಲು; ಸಭೆಯಲ್ಲೊಂದು ಪ್ರಸ್ತಾವ
Team Udayavani, Sep 13, 2017, 11:26 AM IST
ಬೆಂಗಳೂರು: ಬಿಬಿಎಂಪಿಗೆ ಜಿಎಸ್‌ಟಿ ವರಮಾನದಲ್ಲಿ ಕನಿಷ್ಠ ಶೇ.20ರಿಂದ 25ರಷ್ಟು ಪಾಲು ಸಿಗಬೇಕು. ಸ್ಥಳೀಯ ಸಂಸ್ಥೆ ಬಲಪಡಿಸಲು ಜಿಎಸ್‌ಟಿ ಕೌನ್ಸಿಲ್‌ಗೆ ರಾಜ್ಯ ಸರ್ಕಾರ ಹಣಕಾಸು ಇಲಾಖೆಯಿಂದ ಪತ್ರ ಬರೆಯಬೇಕು. ಈ ಬಗ್ಗೆ ಪಾಲಿಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕಿದೆ ಎಂಬ ಒತ್ತಾಯ ಬಿಬಿಎಂಪಿಯ ವಿಶೇಷ ಸಭೆಯಲ್ಲಿ ಕೇಳಿ ಬಂತು.
ಜಿಎಸ್‌ಟಿ ಕುರಿತು ಪಾಲಿಕೆ ಸದಸ್ಯರಿಗೆ ಮಾಹಿತಿ ನೀಡುವ ಸಂಬಂಧ ಮಂಗಳವಾರ ಬಿಬಿಎಂಪಿ ವಿಶೇಷ ಸಭೆ ಕರೆಯಲಾಗಿತ್ತು. ಈ ವೇಳೆ ಸ್ಥಳೀಯಾಡಳಿತದ ಬಲವರ್ಧನೆಗಾಗಿ ಜಿಎಸ್‌ಟಿಯಲ್ಲಿ ಪಾಲಿಕೆಗೂ ಪಾಲು ಸಿಗಬೇಕು ಎಂಬ ಪ್ರಸ್ತಾಪವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಸಭೆಯ ಮುಂದಿಟ್ಟರು. ಆಡಳಿತ ಪಕ್ಷದ ಈ ಪ್ರಸ್ತಾವಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಕೂಡ ದನಿಗೂಡಿಸಿದ್ದು ವಿಶೇಷವಾಗಿತ್ತು.
ಗುಣಶೇಖರ್ ಏನು ಹೇಳಿದರು?: ರಾಜ್ಯ ಸರ್ಕಾರಕ್ಕೆ ಬೆಂಗಳೂರಿನಿಂದ ಈತನಕ ವರ್ಷಕ್ಕೆ 60 ಸಾವಿರ ಕೋಟಿ ರು. ಆದಾಯ ನೀಡಲಾಗುತ್ತಿತ್ತು. ಆದರೆ, ಈಗ ಆ ವರಮಾನ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಹಂಚಿಕೆಯಾಗಿದೆ. ಕೆಎಂಸಿ ಕಾಯ್ದೆಯಡಿ ಬಿಬಿಎಂಪಿ 22 ರೀತಿಯ ಜವಾಬ್ದಾರಿ ನಿರ್ವಹಿಸಲು ಹಣಕಾಸು ಸಂಪನ್ಮೂಲ ಅವಶ್ಯಕತೆಯಿದೆ. ಸಂವಿಧಾನದ 74ನೇ ತಿದ್ದುಪಡಿ ಅನ್ವಯ ಸ್ಥಳೀಯ ಸಂಸ್ಥೆ ಬಲಪಡಿಸಲು ಜಿಎಸ್‌ಟಿ ವರಮಾನದಲ್ಲಿ ಬಿಬಿಎಂಪಿಗೆ ಸೂಕ್ತ ಪಾಲು ದೊರೆಯಬೇಕು ಎಂದರು.
ಇದಕ್ಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಬೆಂಬಲವಾಗಿ ನಿಂತರು. “ಸ್ಥಳೀಯ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಜಿಎಸ್‌ಟಿ ಲಾಭದಲ್ಲಿ ಸೂಕ್ತ ಪಾಲು ನೀಡಬೇಕು,’ ಎಂದು ಹೇಳಿದರು. ಪಾಲಿಕೆ ಸದಸ್ಯರಿಗೆ ಜಿಎಸ್‌ಟಿ ಪಾಠ; ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ತೆರಿಗೆ ಇಲ್ಲ. ಆದರೆ, ಅವೈಜಾnನಿಕ ವಿಲೇವಾರಿಗೆ ತೆರಿಗೆ ಬೀಳಲಿದೆ. ಒಂದು ವೇಳೆ ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಾದರೆ, ಅದರ ಹೊರೆ ಹೆಚ್ಚಲೂಬಹುದು.
ಅದೇ ರೀತಿ, ಸ್ವತ್ಛತೆಗೆ ತೆರಿಗೆ ಇಲ್ಲ; ಸ್ವತ್ಛತೆಗೆ ಖರೀದಿಸಿದ ಸಾಮಗ್ರಿಗಳಿಗೆ ತೆರಿಗೆ ಕಟ್ಟಬೇಕಾಗುತ್ತದೆ. ಮೋರಿಗಳ ಹೂಳು ತೆಗೆಯಲು ತೆರಿಗೆ ಪಾವತಿಸಬೇಕಿಲ್ಲ. ಆ ಕಾಮಗಾರಿಯ ಸಾಮಗ್ರಿಗಳ ಖರೀದಿಗೆ ತೆರಿಗೆ ಹೋರೆ ಬೀಳಲಿದೆ… ಹೀಗೆ ಉದಾಹರಣೆ ಸಹಿತ ಆರ್ಥಿಕ ತಜ್ಞರಾದ ಸುನೀಲ್ ಹಾಗೂ ಮಧುಕರ್ ಹಿರೇಗಂಗೆ ಪಾಲಿಕೆ ಸದಸ್ಯರಿಗೆ ಜಿಎಸ್‌ಟಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಬಿಬಿಎಂಪಿಯಲ್ಲಿ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ಯಾವುದೇ ರೀತಿಯ ವಿನಾಯ್ತಿ ಸಿಗುವುದಿಲ್ಲ. ಕೆಲವು ನಾಗರಿಕ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳಿಗೆ ತುಸು ವಿನಾಯ್ತಿ ಸಿಗಬಹುದು. ಆದರೆ, ಸಾಮಗ್ರಿಗಳ ಖರೀದಿಗೆ ಜಿಎಸ್‌ಟಿ ಪಾವತಿ ಮಾಡಲೇಬೇಕಾಗುತ್ತದೆ ಎಂದರು.
ಹಿಂದಿನ ಕಾಮಗಾರಿಗಳಿಗಿಲ್ಲ ಜಿಎಸ್‌ಟಿ: ಒಂದು ವೇಳೆ ಪಾಲಿಕೆಯಲ್ಲಿ ಜುಲೈ 1ಕ್ಕಿಂತ ಮುನ್ನ ಕಾಮಗಾರಿಗಳನ್ನು ಕೈಗೊಂಡಿದ್ದರೆ, ಅದಕ್ಕೆ ಅಂದಿನ ಕಾನೂನು ಪ್ರಕಾರ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಬೇಕಿದ್ದರೆ ಅದನ್ನು ಜಿಎಸ್‌ಟಿ ವ್ಯವಸ್ಥೆಗೆ ಒಳಪಡಿಸಿಕೊಂಡು ತೆರಿಗೆಯನ್ನು ಪಾವತಿ ಮಾಡಲೂಬಹುದು ಎಂದ ಅವರು, ಜಿಎಸ್‌ಟಿ ವ್ಯವಸ್ಥೆಯಿಂದ ಗುತ್ತಿಗೆದಾರರಿಗೆ ಹೊರೆ ಆಗುವುದಿಲ್ಲ. ಮುಂದೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಪಾಲಿಕೆ ಯಾವುದಾದರೂ ಕಟ್ಟಡದಿಂದ ಬಾಡಿಗೆಗೆ ಸಂಗ್ರಹ ಮಾಡಿದರೆ ಆಗ ಜಿಎಸ್‌ಟಿ ಪಾವತಿ ಮಾಡಲೇಬೇಕು. ಜಾಹೀರಾತು ಪ್ರದರ್ಶನ, ಒಎಫ್ಸಿ ಕೇಬಲ್ ಅಳವಡಿಕೆಗೆ ಅನುಮತಿ ನೀಡಿರುವುದರಿಂದ ಕೇಬಲ್ ಅಳವಡಿಸಿದವರು ಹಾಗೂ ಜಾಹೀರಾತು ಫಲಕ ಪ್ರದರ್ಶಿಸಿದವರೇ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ನಾಗರಿಕರಿಗೆ ಅನುಕೂಲ ಮಾಡಿಕೊಡಲು ಈಜುಕೊಳ ನಿರ್ಮಾಣ, ರಂಗಮಂದಿರ, ಆಟದ ಮೈದಾನಗಳನ್ನು ನಿರ್ಮಿಸಿ ಅದರಿಂದ ಹಣ ಸಂಗ್ರಹ ಮಾಡಿದಲ್ಲಿ ಅದಕ್ಕೂ ಜಿಎಸ್‌ಟಿ ಅನ್ವಯ ಆಗಲಿದೆ. ಒಂದು ವೇಳೆ ಅವುಗಳನ್ನು ಉಚಿತವಾಗಿ ನೀಡುತ್ತಿದ್ದರೆ, ಅದನ್ನು ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತಂದಲ್ಲಿ ವಿನಾಯ್ತಿ ಸಿಗಲಿದೆ ಎಂದರು.
ನಿಯಮ ಉಲ್ಲಂಘಿಸಿ ಸಭೆ; ಆಕ್ಷೇಪ
ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಸೆಕ್ಷನ್ 10ರ ಪ್ರಕಾರ ಚುನಾವಣೆ ಘೋಷಣೆಯಾದ ಬಳಿಕ ಸಭೆ ಕರೆಯುವಂತಿಲ್ಲ. ಕೆಲವು ನಿರ್ಣಯಗಳನ್ನು ಅನುಮೋದನೆ ಪಡೆದುಕೊಳ್ಳಲೆಂದೇ ಸಭೆ ಕರೆಯಲಾಗಿದೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ಕಾನೂನು ಕೋಶದ ಮುಖ್ಯಸ್ಥರು, ತಿಂಗಳಿಗೆ ಒಂದರಂತೆ ಸಭೆ ಕರೆಯುವುದು ಪದ್ಧತಿ.
ಅದರಂತೆ ಈ ಸಭೆ ಕರೆಯಲಾಗಿದೆ. ಈಗಾಗಲೇ ನೀತಿಸಂಹಿತೆ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಸದಸ್ಯರಿಗೆ ಜಿಎಸ್‌ಟಿ ಬಗ್ಗೆ ಗೊಂದಲವಿದೆ. ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್ ಕೃಷಿ
Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!
Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಫರ್ಹಾನ್ ಸೆರೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.