ಇರ್ಮಾ ಸಂತ್ರಸ್ತ 170 ಭಾರತೀಯರ ಸುರಕ್ಷಿತ ಸ್ಥಳಾಂತರ
Team Udayavani, Sep 13, 2017, 11:57 AM IST
ಹೊಸದಿಲ್ಲಿ : ಇರ್ಮಾ ಚಂಡಮಾರುತದ ಪ್ರತಾಪಕ್ಕೆ ಗುರಿಯಾಗಿ ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ಭಾರತ ಸರಕಾರ ಸುರಕ್ಷಿತವಾಗಿ ಕ್ಯಾರಿಬಿಯನ್ ದ್ವೀಪ ಸಮೂಹದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ ಕರೆತರಲಾಗಿದೆ.
ಇರ್ಮಾ ಸುಂಟರಗಾಳಿ ಸಂತ್ರಸ್ತರಾದ 170 ಭಾರತೀಯರೊಂದಿಗೆ ಇತರ 60 ಮಂದಿಯನ್ನು ಕೂಡ ಪಾರುಗೊಳಿಸಲಾಗಿದೆ ಎಂದು ವೆನಜುವೆಲಾದಲ್ಲಿನ ಭಾರತೀಯ ರಾಭಾರಿ ರಾಹುಲ್ ಶ್ರೀವಾಸ್ತವ ತಿಳಿಸಿರುವುದಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ.
ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮೂಲಕ, “ನಿನ್ನೆ ಮಂಗಳವಾರ ರಾತ್ರಿ 110 ಭಾರತೀಯರನ್ನು ಮತ್ತು ಭಾರತ ಸಂಜಾತ ಸಂತ್ರಸ್ತರನ್ನು ಸೈಂಟ್ ಮಾರ್ಟಿನ್ನಿಂದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.