ಡೇರಾ ಐಟಿ ಮುಖ್ಯಸ್ಥ ಸೆರೆ; ಹನಿಪ್ರೀತ್‌ಗಾಗಿ ಬಿರುಸಿನ ಶೋಧ
Team Udayavani, Sep 13, 2017, 3:08 PM IST
ಸಿರ್ಸಾ : ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರು ಡೇರಾ ಸಚ್ಚಾ ಸೌಧಾದ ವಿವಾದಾತ್ಮಕ ದೇವ ಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ವಿರುದ್ಧದ ಕಾನೂನು ಕ್ರಮಗಳು ತೀವ್ರವಾಗಿರುವ ನಡುವೆಯೇ ಹರಿಯಾಣ ಪೊಲೀಸರು ಇಂದು ಬುಧವಾರ ಡೇರಾ ಪಂಗಡದ ಐಟಿ ಮುಖ್ಯಸ್ಥನನ್ನು ಸಿರ್ಸಾದಿಂದ ಬಂಧಿಸಿದ್ದಾರೆ.
ಎಎನ್‌ಐ ವರದಿಯ ಪ್ರಕಾರ ಬಂಧನಕ್ಕೆ ಗುರಿಯಾಗಿರುವ ಡೇರಾ ಐಟಿ ಮುಖ್ಯಸ್ಥನನ್ನು ವಿನೀತ್ ಎಂದು ಗುರುತಿಸಲಾಗಿದೆ. ಡೇರಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾದ ಬಳಿಕ ತಲೆಮರೆಸಿಕೊಂಡಿದ್ದ ಐಟಿ ಮುಖ್ಯಸ್ಥ ವಿನೀತ್ ನನ್ನು ಹರಿಯಾಣ ಪೊಲೀಸರು ಇಷ್ಟು ದಿನವೂ ಶೋಧಿಸುತ್ತಿದ್ದರು. ಕೊನೆಗೂ ಆತ ಸೆರೆಯಾಗಿರುವುದು ಗಮನಾರ್ಹವಾಗಿದೆ.
ಇದೇ ವೇಳೆ ಇನ್ನೂ ತಲೆ ಮರೆಸಿಕೊಂಡಿರುವ ಡೇರಾ ಮುಖ್ಯಸ್ಥನ ದತ್ತು ಪುತ್ರಿ ಮತ್ತು ಆತನ ಸಕಲ ದುಷ್ಕೃತ್ಯಗಳಿಗೆ ನೆರವಾಗುತ್ತಿದ್ದ ಹನಿಪ್ರೀತ್ ಸಿಂಗ್ ಗಾಗಿ ಪೊಲೀಸರ ಶೋಧ ಕಾರ್ಯ ಚುರುಕಿನಿಂದ ಸಾಗಿದೆ. ಪಂಚಕುಲ ನ್ಯಾಯಾಲಯದಲ್ಲಿ 20 ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟವಾದಾಗ ಕೋರ್ಟ್ ಆವರಣದಿಂದಲೇ ಡೇರಾ ಮುಖ್ಯಸ್ಥನ ಪಲಾಯನಕ್ಕೆ ಸಂಚು ರೂಪಿಸಿದ್ದ ಹನಿಪ್ರೀತ್ ಸಿಂಗ್ ಪೊಲೀಸರಿಗೆ ಅಂದಿನಿಂದ ಬೇಕಾದವಳಾಗಿದ್ದಾಳೆ.
ಇದಕ್ಕೆ ಮೊದಲು ಪಂಜಾಬ್ ಪೊಲೀಸರು ಭಟಿಂಡಾ ಜಿಲ್ಲೆಯ ಶಲಬತ್‌ಪುರದಲ್ಲಿನ ಡೇರಾ ಸಚ್ಚಾ ಸೌಧಾ ಕೇಂದ್ರದ ಪ್ರಭಾರ ಮುಖ್ಯಸ್ಥನಾಗಿರುವ ಝೋರಾ ಸಿಂಗ್‌ನನ್ನು ಬಂಧಿಸಿರುವುದಾಗಿ ಭಟಿಂಡಾ ವಲಯದ ಐಟಿ ಎಂ ಎಸ್ ಛಿನ್ನ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.