ತಾರಾ ಎಸ್‌.ರಾವ್‌ ಅವರಿಗೆ ಶ್ರದ್ಧಾಂಜಲಿ ಸಭೆ


Team Udayavani, Sep 13, 2017, 4:32 PM IST

11-Mum01a.jpg

ಮುಂಬಯಿ: ಗೋಕುಲ ಕಲಾಶ್ರೀ ಬಿರುದಾಂಕಿತ ನಾಟ್ಯಮಯೂರಿ, ಕಲಾವಿದೆ, ಸಮಾಜ ಸೇವಕಿ ತಾರಾ ಎಸ್‌. ರಾವ್‌ ಅವರಿಗೆ ಶ್ರದ್ಧಾಂಜಲಿ ಸಭೆಯು ಚೆಂಬೂರು ಛೆಡ್ಡಾ ನಗರದ ಶ್ರೀ ಸುಬ್ರಹ್ಮಣ್ಯ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಸೆ.10ರಂದು ನಡೆಯಿತು.

ಪ್ರಾರಂಭದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಧರ್ಮೋದಕ,ಏಕೋದಿಷ್ಟ, ಸಪಿಂಡಿಕರಣ,ಇತ್ಯಾದಿ ಕಾರ್ಯಕ್ರಮಗಳು ಪತಿ ಸುಬ್ರಹ್ಮಣ್ಯ ರಾವ್‌ ಬಾಳ, ಪುತ್ರಿ ತೃಪ್ತಿ ಎಸ್‌. ರಾವ್‌ ಮತ್ತು ಕುಟುಂಬಿಕರ ನೇತೃತ್ವದಲ್ಲಿ ಜರ ಗಿತು. ವೇದಮೂರ್ತಿ ಶ್ರೀಪತಿ ಭಟ್‌ ಕೊಡಂಜ ಅವರು ವಿಷ್ಣುಪೂಜೆ ನೇರವೇರಿಸಿ ತೀರ್ಥಪ್ರಸಾದ ನೀಡಿ ಹರಸಿದರು. ಭವಾನಿಶಂಕರ್‌ ಭಟ್‌ ಮತ್ತು ಮುರಳೀಧರ್‌ ಭಟ್‌ ಪೂಜೆಗೆ ಸಹಕರಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್‌ ಮತ್ತು ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನ ಪರವಾಗಿ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಅವರು ಮಾತನಾಡಿ, ಪ್ರೀತಿವಾತ್ಸಲ್ಯ ಸಾಮರಸ್ಯದ ಬದುಕಿನ ಪ್ರತೀಕವಾಗಿದ್ದ ತಾರಾ ರಾವ್‌ ಅನಾರೋಗ್ಯದ ಮಧ್ಯೆಯೂ ಸಂಸ್ಕೃತಿ, ಭಜನೆ, ಕಲಾರಾಧನೆಯನ್ನು ಅಸ್ವಾಧಿಸುತ್ತಾ ಸಾಂಸ್ಕೃತಿಕ ರಾಯಭಾರಿ ಎಂದೆಣಿಸಿ ಕಲಾಭಿಮಾನ ಮೆರೆದಿದ್ದರು. ತನ್ನ ಜೀವ ಕ್ಕಿಂತ ಪರರ ಬಗೆಗಿನ ಚಿಂತೆ ಮತ್ತು ಎಲ್ಲರೂ ತನ್ನವರು ಎನ್ನುವ ಅಪಾರ ಕಾಳಜಿ ಅವರಲ್ಲಿತ್ತು. ಇಂತಹ ತಾರಕ್ಕ ನಮ್ಮಿಂದ ಮರೆಯಾಗಿರಬಹುದು. ಆದರೆ ಅವರಲ್ಲಿನ ಸೇವಾ ಮನೋಭಾವ, ಸಂಸ್ಕೃತಿಪ್ರಿಯತೆ, ಸದ್ಗುಣಗಳು ನಮಗೆಲ್ಲರ ಬದುಕಿಗೆ ನೀತಿಪಾಠವಾಗಿ ಉಳಿಸಿ ಹೋಗಿದ್ದಾರೆ. ಇವು ಗಳೆಂದೂ ನಮ್ಮಲ್ಲಿ ಅಳಿಯಲಾರವು. ಇಂತಹ ಪ್ರತಿಭಾನ್ವಿತೆಯ ಅಗಲಿಕೆಯಿಂದ ಗೋಕುಲವೂ  ಮೌನವಾಗಿದೆ ಎಂದರು.

ಭಾಂಡೂಪ್‌ನ ಸೆಂಟ್ರಲ್‌ ಹೆಲ್ತ್‌ ಹೋಮ್‌ನ ವೈದ್ಯಾಧಿಕಾರಿ ಡಾ| ಕೆ. ರತ್ನಾಕರ್‌ ಶೆಟ್ಟಿ, ಗ್ರೇಟ್‌ಈಸ್ಟರ್ನ್ ಗಾರ್ಡನ್ಸ್‌ ಅಪಾರ್ಟ್‌ ಮೆಂಟ್ಸ್‌ ಅಸೋಸಿಯೇಶನ್‌ ಸತೀಶ್‌ ಪರ್ಚುನ್‌, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಗೌರವಾ ಧ್ಯಕ್ಷ ಡಾ| ಎ.ಎಸ್‌ ರಾವ್‌, ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಬಿ. ನಾಗರಾಜ್‌, ಡಾ| ಮಾಧುರಿ ಸಾವಂತ್‌, ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ವತಿಯಿಂದ ಸುನಂದಾ ಸದಾನಂದ ಉಪಾಧ್ಯಾಯ, ಕೆ. ಸುಬ್ಬಣ್ಣ ರಾವ್‌, ಎಂ. ನರೇಂದ್ರ, ಪ್ರಹ್ಲಾದ್‌ ರಾವ್‌, ಸಿಎ ಹರಿದಾಸ್‌ ಭಟ್‌, ಶ್ರೀನಿವಾಸ ರಾವ್‌ ಪರೇಲ್‌, ಸುಧೀರ್‌ ಆರ್‌. ಎಲ್‌ ಶೆಟ್ಟಿ, ನ್ಯಾಯವಾದಿ ಗೀತಾ ಆರ್‌. ಎಲ್‌. ಭಟ್‌, ಚಿತ್ರಾ ಮೇಲ್ಮನೆ, ಬಾಲಕೃಷ್ಣ ಪಿ. ಭಂಡಾರಿ, ಡಾ| ಸುಮನ್‌ ರಾವ್‌ ಅವರ ಮೊದಲಾದವರು ಉಪಸ್ಥಿತರಿದ್ದರು.

ಕಲಾವಿದರ ಪರವಾಗಿ ಬಿ. ಬಾಲಚಂದ್ರ ರಾವ್‌ ಮಾತನಾಡಿ,  ಈಕೆ ನಮ್ಮ ಗೋಕುಲದ ಧ್ರುವತಾರೆಯಾಗಿದ್ದರು. ಅವರ ಬಗ್ಗೆ ಬರೆದರೆ ಬೃಹತ್‌ ಗ್ರಂಥ ವೊಂದು ನಿರ್ಮಾಣವಾಗಬಹುದು. ಸರ್ವರ ಆಪ್ತಮಿತ್ರೆಯಾಗಿದ್ದ ತಾರಾ ಕಲಾ ಜೀವನಶೈಲಿಯೂ ವರ್ಣಿಸಲು ಅಸಾಧ್ಯ. ಕಲಾ ಕಣಜವಾಗಿದ್ದ ಈಕೆ ಸಂಗೀತವನ್ನು ಅರಸಿ ಮನೆಮನಗಳಲ್ಲಿ ಭಜನೆ ಬೆಳೆಸಿದ ಪ್ರವೀಣೆ ಎಂದು ನುಡಿದರು.

ಮನೆಮನೆಯಲ್ಲಿ ಭಜನೆ ಮಾಡಿಸುವಲ್ಲಿ ಪ್ರೇರಕರಾದ ತಾರಾ ನಿಧನದಿಂದ ಇಂದು ಮನಮನಗಳಲ್ಲೂ ಅವರದ್ದೇ ಸ್ಮರಣೆ ಮಾಡುವಂತಾಗಿದೆ. ನಮ್ಮನ್ನಗಲಿ ಮರಣದಲ್ಲಿ ಒಂದಾದರೂ ನಕ್ಷತ್ರಪ್ರಾಯರಾಗಿದ್ದಾರೆ. ಯಾವುದೇ ಕೆಲಸವನ್ನೂ ಲವಲವಿಕೆಯಿಂದ ಮಾಡುತ್ತಾ ಎಲ್ಲರನ್ನೂ ಉತ್ತೇಜಿಸುವ ಸದ್ಗುಣ ಅನನ್ಯವಾದದ್ದು. ಪ್ರತಿಯೋಂದು ಕಲೆಗಳನ್ನೂ ಕರಗತಗೊಳಿಸಿ ಕಲಾಜೀವಿಯಾಗಿಯೇ ಬದುಕಿದ ಅಪರೂಪದ ಕಲಾವಿದೆ ಎಂದು ತಾರಾ ಜತೆ ನಟಿಸಿದ ಹಿರಿಯ ಕಲಾವಿದ, ಬಾಲಿವುಡ್‌ ನಟ ಹರೀಶ್‌ ವಾಸು ಶೆಟ್ಟಿ ಅವರು ನುಡಿನಮನಗೈದರು.

ಕಾರ್ಯಕ್ರಮದಲ್ಲಿ ರವಿ ರಾವ್‌, ಗಣೇಶ್‌ ಆಚಾರ್ಯ, ಡಾ| ವ್ಯಾಸರಾಯ ನಿಂಜೂರು, ಬಿ.ರಮಾನಂದ ರಾವ್‌ ಕಲೀನ, ಕೃಷ್ಣ  ವೈ. ಆಚಾರ್ಯ, ಅವಿನಾಶ್‌ ಶಾಸ್ತ್ರಿ, ವಾಮನ ಹೊಳ್ಳ, ಪಿ. ಉಮೇಶ್‌ ರಾವ್‌, ಪಿ. ಸಿ. ಎನ್‌ ರಾವ್‌, ವೈ. ಗುರುರಾಜ್‌ ಭಟ್‌, ಅವಿನಾಶ್‌ ಶಂಕರ್‌ ಶಾಸ್ತ್ರಿ, ಪ್ರಶಾಂತ್‌ ಆರ್‌. ಹೆರ್ಲೆ, ಡಾ| ಸಹನಾ ಎ. ಪೋತಿ, ಚಂದ್ರಶೇಖರ್‌ ಭಟ್‌, ಐ. ಕೆ. ಪ್ರೇಮಾ ಎಸ್‌.ರಾವ್‌, ಯು. ರವೀಂದ್ರ ರಾವ್‌, ವಿದ್ಯಾ ಆರ್‌. ರಾವ್‌, ಕಡೆಕಾರು ಶ್ರೀಶ‌ ಭಟ್‌, ವಿಷ್ಣು ಕಾರಂತ್‌ ಚೆಂಬೂರು, ಎ. ಬಿ. ರಾವ್‌ ಖಾರ್‌, ಕಲಾವಿದರಾದ ಪದ್ಮನಾಭ ಸಸಿಹಿತ್ಲು, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ  ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಅರ್ಪಿಸಿದರು.

ಆರಂಭದಲ್ಲಿ ಸಂಕೀರ್ತನೆ, ಭಾವಗೀತೆ, ಭಜನೆ ನಡೆಸಲಾಯಿತು. ಚಂದ್ರಾವತಿ 
ರಾವ್‌ ತನ್ನ ಕವಿತೆಯಲ್ಲಿ ತಾರಾ ಜೀವನ ವೈಶಿಷ್ಟÂತೆಗಳನ್ನು  ಮೆಲುಕು ಹಾಕುತ್ತಾ  ನೆರೆದ ತಾರಾಭಿಮಾನಿಗಳನ್ನು ಮೂಕಪ್ರೇಕ್ಷಕರನ್ನಾಗಿಸಿದರು. ಬಿಎಸ್‌ಕೆಬಿ ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ. ಪೋತಿ ಕಾರ್ಯಕ್ರಮ ನಿರ್ವಹಿಸಿದರು.

ತಾರಾ ಎಸ್‌.ರಾವ್‌ ಕೃತಿ ಪ್ರಕಟ ತಾರಾ ಎಸ್‌. ರಾವ್‌ ಅವರ ಸಿದ್ಧಿ-ಸಾಧನೆಗಳ ಬಗ್ಗೆ ಭವಿಷ್ಯತ್ತಿನ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಸಾಹಿತ್ಯ ಬಳಗ ಮುಂಬಯಿ ಕೃತಿಯೊಂದನ್ನು ಪ್ರಕಟಿಸಲು ನಿರ್ಧರಿಸಿದೆ. ತಾರಾ ಅವರ  ಬಗೆಗಿನ ಚಿತ್ರ ಲೇಖನ, ಅವರ ಬಗೆಗಿನ ಒಡನಾಟದ ಒಂದಷ್ಟು ವಿಚಾರಗಳು ಸಹೃದಯಿಗಳು  ನೀಡಿದಲ್ಲಿ ಕೃತಿಯಲ್ಲಿ ಪ್ರಕಾಶಿಸಲಾಗುವುದು. ವಿವರಗಳಿಗಾಗಿ ಮನುಶ್ರೀ, ಸಿ-42/2/2, ಸೆಕ್ಟರ್‌ 29, ವಾಶಿ, ನವಿಮುಂಬಯಿ ಅಥವಾ  ದೂರವಾಣಿ 022-27880671, 9969533123 ಸಂಖ್ಯೆ ಗಳನ್ನು ಸಂಪರ್ಕಿಸಬಹುದು ಎಂದು ಎಚ್‌. ಬಿ. ಎಲ್‌. ರಾವ್‌ ಅವರು ತಿಳಿಸಿದ್ದಾರೆ.

 ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.