ಬ್ರೈಸ್ ಕಣಿವೆಯ ಬಣ್ಣದ ಶಿಲ್ಪಗಳು


Team Udayavani, Sep 14, 2017, 6:45 AM IST

vismaya.jpg

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜ್ಞಾತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. 

ಅಮೆರಿಕದ ಯುಟಾಹ್‌ದಿಂದ 50 ಮೈಲು ದೂರವಿದೆವ ಬ್ರೈಸ್ ಕಣಿವೆ ರಾಷ್ಟ್ರೀಯ ಉದ್ಯಾನವನ. ಅಲ್ಲಿರುವ ರಚನೆಗಳು ಯಾವುದೇ ರಾಜವಂಶದವರ ಪರಿಶ್ರಮದ ಫ‌ಲವಲ್ಲ. ಇಲ್ಲಿನ ಕೋಟೆಗಳು, ಶಿಲ್ಪಗಳೆಲ್ಲವನ್ನೂ ಕೆತ್ತಿರುವುದು ನಿಸರ್ಗವೇ. ಹಿಮಪಾತ ಮತ್ತು ನದಿಯ ರಭಸದ ಪ್ರವಾಹದ ಕೊರೆತ ಇದು ಎರಡರಿಂದಲೇ ಪರ್ವತಗಳ ಮಣ್ಣು ಕೊರೆದುಹೋಗಿ ಶಿಲೆಗಳಲ್ಲಿ ಸೃಷ್ಟಿಯಾದ ಬಿರುಕುಗಳೇ ಒಂದೊಂದು ಬಗೆಯ ಕಲಾರಚನೆಯನ್ನು ಮಾಡಿಬಿಟ್ಟಿವೆ.

35,835 ಎಕರೆ ಪ್ರದೇಶದಲ್ಲಿ ಈ ಉದ್ಯಾನ ಹರಡಿಕೊಂಡಿದೆ. ಅಲ್ಲೊಂದು ಅದ್ಭುತ ರಮ್ಯಲೋಕವೇ ಇದೆ. ಅಲ್ಲಿ ಬಣ್ಣ ಬಣ್ಣದ ಏಕಶಿಲೆಯ ಎತ್ತರೆತ್ತರದ ವೈವಿಧ್ಯಮಯ ಶಿಲ್ಪಗಳಿವೆ, ಹಳ್ಳಗಳಿಗೆ ದೃಢವಾದ ಪುರಾತನ ಸೇತುವೆಗಳಿವೆ. ಕೋಟೆ ಕೊತ್ತಲಗಳಿವೆ, ಕಲಾತ್ಮಕವಾದ ಬುರುಜುಗಳಿವೆ, ಕುಸಿದು ಹೋದ ಪ್ರಾಚೀನ ವಾಸ್ತುಶಿಲ್ಪದ ಮಾದರಿಯ ಕಟ್ಟಡಗಳ ಅವಶೇಷಗಳಿವೆ, ಕಿಟಕಿಗಳಿವೆ, ಹೆಬ್ಟಾಗಿಲುಗಳಿವೆ, ಕೋಟೆಯ ಕಮಾನುಗಳಿವೆ. ಸ್ತಬ್ಧವಾದ ಯಾವುದೋ ಐತಿಹಾಸಿಕ ರಾಜವಂಶದವರು ಒಂದಾನೊಂದು ಕಾಲದಲ್ಲಿ ಇಲ್ಲಿ ರಾಜಾÂಡಳಿತ ಮಾಡಿ ಅನಂತರ ಇಲ್ಲಿಂದ ಬಿಟ್ಟು ಹೋಗಿರಬಹುದೇ ಎಂಬ ಭ್ರಮೆಯನ್ನು ಸೃಷ್ಟಿಸುವ ಇನ್ನೂ ಹಲವು ವಿಶೇಷಗಳಿವೆ.

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜಾnತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. ಅನಂತರ ಇಲ್ಲಿ ಸಾಕಷ್ಟು ವೈಜಾnನಿಕ ಅಧ್ಯಯನಗಳು ನಡೆದವು. ಅಮೆರಿಕದ ಸೇನಾಪಡೆಯ ಮೇಜರ್‌ ಜಾನ್‌ ವೆಸ್ಲೆ ಪೋಪೆಲ್‌ 1872ರಲ್ಲಿ ಭೂ ವಿಜಾnನಿಗಳ ತಂಡದೊಂದಿಗೆ ಬಂದು ಸಮೀಕ್ಷೆ ನಡೆಸಿದ್ದ. ಬಳಿಕ ಇಲ್ಲಿ ಜಾನುವಾರುಗಳ ಮೇವಿಗೆ ಇರುವ ಅನುಕೂಲಗಳನ್ನು ಅರಿತು ದನಗಾಹಿಗಳೂ ಬಂದು ಬೀಡುಬಿಟ್ಟರು. 

ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ನಿಶ್ಚಿಂತವಾದ ಜೀವನ ಸಾಧ್ಯವಿರಲಿಲ್ಲ. 1923ರಲ್ಲಿ ಅಮೆರಿಕದ ಸರಕಾರವು ಇದೊಂದು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿತು. ಉದ್ಯಾನವನ್ನು ಹೊರ ಜಗತ್ತಿಗೆ ಪರಿಚಯಿಸಿದ ಬ್ರೈಸ್ನ ಹೆಸರನ್ನೇ ಇಲ್ಲಿಗೆ ಇರಿಸಲಾಯಿತು. 1928ರಲ್ಲಿ ಅದನ್ನು ಅಂದವಾಗಿ ವಿನ್ಯಾಸಗೊಳಿಸಿ ಪ್ರವಾಸಿಗಳ ಆಕರ್ಷಣೆಯ ತಾಣವಾಗಿ ಪರಿವರ್ತಿಸುವ ಕಾರ್ಯಗಳು ಆರಂಭವಾದವು. 1942ರಲ್ಲಿ ಅದಕ್ಕೆ ಹೆಚ್ಚುವರಿಯಾಗಿ 635 ಎಕರೆ ಪ್ರದೇಶವನ್ನು ಸೇರಿಸಲಾಯಿತು.

ವೈಜಾnನಿಕ ಸಮೀಕ್ಷೆಗಳ ನಂಬಿಕೆ ಪ್ರಕಾರ ಬ್ರೆ„ಸ್‌ ಕಣಿವೆಯಲ್ಲಿ 10 ಸಾವಿರ ವರ್ಷಗಳ ಹಿಂದೆ ಜನ ವಸತಿಗಳು ಇದ್ದವು ಎಂಬುದಕ್ಕೆ ಪಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಕೆಲವು ಶಿಲ್ಪಕಲಾ ರಚನೆಗಳಿಂದ ತಿಳಿದು ಬರುವುದಂತೆ. ಇಲ್ಲಿನ ಮೃದುವಾದ ಬಂಡೆಗಳನ್ನು ನಿಸರ್ಗ ಬೇಕಾಬಿಟ್ಟಿ ಕೊರೆದಿಲ್ಲ. ಹಳ್ಳಗಳ ಮೇಲ್ಭಾಗದಲ್ಲಿ ಅವು ಪುರಾತನ ಸೇತುವೆಯ ಆಕಾರ ತಳೆದಿವೆ. ಬಿದ್ದಿರುವ ರಾಜಮಹಲುಗಳು, ಕಲಾತ್ಮಕವಾದ ಕಿಟಕಿಗಳು, ಪಾವಟಿಕೆಗಳು, ಪ್ರವೇಶದ್ವಾರಗಳು ಇವೆಲ್ಲವೂ ಪುರಾತನ ಅರಸೊತ್ತಿಗೆಯ ಕಾಲದ್ದೆಂಬ ಭ್ರಮೆಯನ್ನೇ ಅದು ಸೃಷ್ಟಿಸಿದೆ. ವೃತ್ತಾಕಾರದ ಒಂದು ಕ್ರೀಡಾಂಗಣ 12 ಮೈಲುದ್ದ, ಮೂರು ಮೈಲು ಅಗಲ, 800 ಅಡಿ ಆಳವಾಗಿದೆ. ಒಂದು ಗೋಡೆ 20 ಮೈಲು ಉದ್ದವಾಗಿ ಹರಡಿದೆ. 200 ಅಡಿಗಿಂತ ಎತ್ತರವಿರುವ ಬುರುಜುಗಳೂ ಇವೆ. ಪಾರ್ಕ್‌ 8ರಿಂದ 9 ಸಾವಿರ ಅಡಿ ಎತ್ತರವಾಗಿದ್ದು ಕೆಲವು ಏಕಶಿಲಾ ರಚನೆಗಳು ಒಂದು ಸಾವಿರ ಅಡಿ ಎತ್ತರ ಇವೆ.

– ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

sharan starer chu mantar movie

Choo Mantar: ಕೊನೆಗೂ ಅಖಾಡಕ್ಕೆ ಶರಣ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.