ಅಮೆರಿಕ ತಂಡಕ್ಕೆ 5 ವಿಕೆಟ್ ಜಯ
Team Udayavani, Sep 14, 2017, 7:45 AM IST
ಟೊರಂಟೊ: ರಾಯ್ ಸಿಲ್ವ ಅವರ ಸರ್ವಾಂಗೀಣ ಆಟದ ನೆರವಿನಿಂದ ಅಮೆರಿಕ ತಂಡವು ಆಟಿ ಕಪ್ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಕೆನಡ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನಿಂದ ಅಮೆರಿಕ ತಂಡಕ್ಕೆ 1991ರ ಬಳಿಕ ಮೊದಲ ಬಾರಿ ಆಟಿ ಕಪ್ ಮರಳಿ ಪಡೆಯಲು ಇನ್ನೊಂದು ಗೆಲುವು ಬೇಕಾಗಿದೆ.
ಇಲ್ಲಿನ ಮಾಪ್ಲೆ ಲೀಫ್ ಸಿಸಿ ಮೈದಾನದಲ್ಲಿ ನಡೆದ ಮೂರು ಪಂದ್ಯಗಳ ಆಟಿ ಕಪ್ ಸರಣಿಯ ಮೊದಲ ಪಂದ್ಯದಲ್ಲಿ ಕೆನಡ ತಂಡವು ಅಮೆರಿಕದ ನಿಖರ ದಾಳಿಗೆ ತತ್ತರಿಸಿ 40.3 ಓವರ್‌ಗಳಲ್ಲಿ 141 ರನ್ನಿಗೆ ಆಲೌಟಾಯಿತು. ನೂತನ ನಾಯಕ ಹೈದರಾಬಾದ್ ಮೂಲದ ಇಬ್ರಾಹಿಂ ಖಲೀಲ್ ಅವರ ಮಾರ್ಗದರ್ಶನದಲ್ಲಿ ಅಮೆರಿಕ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿತು. ಅಮೆರಿಕ ಪರ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ರಾಯ್ ಸಿಲ್ವ 32 ರನ್ನಿಗೆ 4 ವಿಕೆಟ್ ಕಿತ್ತು ಕೆನಡ ತಂಡಕ್ಕೆ ಪ್ರಬಲ ಹೊಡೆತ ನೀಡಿದರು.
ಎಲ್ಮೋರ್ ಹಚಿನ್ಸನ್ ಕೆನಡದ ಅಗ್ರ ಕ್ರಮಾಂಕದ ಮೂವರ ವಿಕೆಟನ್ನು ಉರುಳಿಸಿದರು. ಈ ಮೂರು ವಿಕೆಟ್ ಉರುಳಲು ವಿಕೆಟ್‌ಕೀಪರ್ ಖಲೀಲ್ ಕಾರಣರಾದರು. ಅವರಲ್ಲಿ ನಾಯಕ ನಿತೀಶ್ ಕುಮಾರ್ ಕೂಡ ಸೇರಿದ್ದರು. ಇದರಿಂದಾಗಿ ಕೆನಡ 12 ಓವರ್ ಮುಗಿದಾಗ 49 ರನ್ನಿಗೆ 3 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟಿಂಗಿಗೆ ರಾಯ್ ಸಿಲ್ವ ಪ್ರಬಲ ಹೊಡೆತ ನೀಡಿದ್ದರಿಂದ ಕೆನಡ ಮತ್ತೆ ಕುಸಿಯತೊಡಗಿ 141 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ರಾಯ್ ಸಿಲ್ವ ಅವರ ಅಜೇಯ 38 ಮತ್ತು ಅಬ್ದುಲ್ಲ ಅವರ 32 ರನ್ ನೆರವಿನಿಂದ ಅಮೆರಿಕ 5 ವಿಕೆಟಿಗೆ 144 ರನ್ ಪೇರಿಸಿ ಜಯ ಸಾಧಿಸಿತು. ಬೌಲಿಂಗ್‌ನಲ್ಲಿ 4 ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ ಅಜೇಯ 38 ರನ್ ಹೊಡೆದ ರಾಯ್ ಸಿಲ್ವ ಅಮೆರಿಕ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.