ಸಾಲ ಮನ್ನಾ ಘೋಷಣೆ ರೈತರಿಗೆ ಸಿಕ್ಕಿದ್ದು ಪುಡಿಗಾಸು
Team Udayavani, Sep 14, 2017, 7:45 AM IST
ಲಕ್ನೋ: ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ 11.93 ಲಕ್ಷ ರೈತರ 36 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಮೊದಲ ಕ್ಯಾಬಿನಟ್ ಸಭೆಯಲ್ಲಿಯೇ ಘೋಷಿಸಿತ್ತು. ಆದರೆ ಆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ರೈತರಿಗೆ ಸಿಕ್ಕಿದ್ದು ಅಲ್ಪ ಮೊತ್ತ. 10 ರೂ., 250 ರೂ., 500 ರೂ. ಹೀಗೆ. ಸುಮಾರು 4,814 ರೈತರಿಗೆ 1 ರೂ.ಗಳಿಂದ 100 ರೂ. ಸಾಲ ಮನ್ನಾ ಆಗಿದೆ. 6,895 ರೈತರಿಗೆ 100ರಿಂದ 500 ರೂ.ವರೆಗೆ ಸೌಲಭ್ಯ ಸಿಕ್ಕಿದೆ ಎಂದು ಸರ್ಕಾರ ವೇ ಮಾಹಿತಿ ನೀಡಿದೆ. ಬಿಜೆಪಿ ಸರ್ಕಾರ ಈ ರೀತಿಯ ಕ್ರಮ ಕೈಗೊಂಡಿರುವ ಬಗ್ಗೆ ಅಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸಮಾರಂಭ ಆಯೋ ಜಿಸಿ 12 ಲಕ್ಷ ಮಂದಿಗೆ “ಪ್ರಯೋಜನ’ ನಿಡಲಾಗಿದೆ.
ಹಮೀರ್ಪುರ ಎಂಬಲ್ಲಿ ನಿರ್ಮಲಾ ದೇವಿ ಎಂಬ ರೈತ ಮಹಿಳೆ 1.55 ಲಕ್ಷ ಸಾಲ ಹೊಂದಿದ್ದರು. ಅವರಿಗೆ ಸರ್ಕಾರದ ವತಿಯಿಂದ 10.37 ರೂ., ಮುನ್ನಿ ಲಾಲ್ ಎಂಬುವರು 40 ಸಾವಿರ ರೂ. ಸಾಲ ಹೊಂದಿದ್ದರು. ಅದಕ್ಕೆ 215 ರೂ.ಗಳ ಮನ್ನಾ ನೀಡಲಾಗಿದೆ. ಈ ಬಗ್ಗೆ ಕೆಲವರು ಬ್ಯಾಂಕ್ಗಳಲ್ಲಿ ತಪ್ಪಾಗಿದೆಯೇ ಎಂದು ವಿಚಾರಿಸಿದಾಗ ಅಧಿಕಾರಿಗಳು ಸರಿಯಾದ ರೀತಿ ಲೆಕ್ಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.